
ನಟ ಶಾರುಖ್ ಖಾನ್ (Shah Rukh Khan) ಅವರು ಇದೇ ಮೊದಲ ಬಾರಿಗೆ ‘ಮೆಟ್ ಗಾಲಾ’ದಲ್ಲಿ ಭಾಗಿ ಆದರು. ಈ ವೇಳೆ ಸಬ್ಯಸಾಚಿ ತಯಾರಿಸಿದ ಉಡುಗೆಯಲ್ಲಿ ಅವರು ಮಿಂಚಿದ್ದಾರೆ. ಈಗ ಶಾರುಖ್ ಖಾನ್ ಸ್ಟೈಲ್ನ ಅವರ ಕ್ಲೋಸ್ ಫ್ರೆಂಡ್ ಕಾಜೋಲ್ ಅವರು ಕಾಪಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಸ್ವತಃ ಕಾಜೋಲ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಎರಡೂ ಫೋಟೋಗೆ ಸಾಕಷ್ಟು ಸಾಮ್ಯತೆ ಇದೆ ಎಂದು ಅನೇಕರು ಹೇಳಿದ್ದಾರೆ.
ಕಾಜೋಲ್ ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ‘ಡಿಡಿಎಲ್ಜೆ’, ‘ಕುಚ್ ಕುಚ್ ಹೋತಾ ಹೇ’, ‘ಕಭಿ ಖುಷಿ ಕಭಿ ಗಮ್’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಇವರ ಬಾಂಡ್ ಹೆಚ್ಚಲು ಇದು ಕೂಡ ಕಾರಣ. ಈ ಕಾರಣದಿಂದಲೇ ಗೆಳೆಯ ಹಾಕಿದ್ದ ಫೋಟೋ ಪೋಸ್ಟ್ನ ಕಾಜೋಲ್ ಅವರು ಕಾಪಿ ಮಾಡಿದ್ದಾರೆ.
ಶಾರುಖ್ ಖಾನ್ ಅವರು ಮೆಟ್ ಗಾಲಾದಲ್ಲಿ ಹೋಗುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿ ಕತ್ತಿಗೆ ಸಾಕಷ್ಟು ಚೈನ್ಗಳನ್ನು ಧರಿಸಿದ್ದರು. ಕೈಗೆ ಚಿತ್ರ ವಿಚಿತ್ರ ಕಡಗ, ಬೆರಳಿಗೆ ಉಂಗುರಗಳನ್ನು ಹಾಕಿದ್ದರು. ಇದನ್ನು ಕಾಜೋಲ್ ಅನುಕರಿಸಿದ್ದಾರೆ. ‘ಹಮ್.. ವ್ಯತ್ಯಾಸ ಹುಡುಕಿ’ ಎಂದು ಹೇಳಿದ್ದಾರೆ. ‘ರಾಹುಲ್ ಹಾಗೂ ಅಂಜಲಿಯದ್ದು ಮ್ಯಾಚಿಂಗ್’ ಎಂದಿದ್ದಾರೆ ಕೆಲವರು. ‘ಕಭಿ ಖುಷಿ ಕಭಿ ಗಮ್’ ಹಾಗೂ ‘ಕುಚ್ ಕುಚ್ ಹೋತಾ ಹೇ’ ಚಿತ್ರದಲ್ಲಿ ಶಾರುಖ್ ಅವರು ರಾಹುಲ್ ಹೆಸರಿನ ಪಾತ್ರ ಮಾಡಿದರೆ, ಅಂಜಲಿ ಪಾತ್ರದಲ್ಲಿ ಕಾಜೋಲ್ ನಟಿಸಿದ್ದರು.
ಇದನ್ನೂ ಓದಿ: 21 ಕೋಟಿ ರೂ. ಬೆಲೆಯ ವಾಚ್ ಧರಿಸಿ ಎಲ್ಲರನ್ನೂ ದಂಗುಬಡಿಸಿದ ಶಾರುಖ್ ಖಾನ್
ಶಾರುಖ್ ಖಾನ್ ಅವರನ್ನು ಸಂದರ್ಶನ ಮಾಡುವಾಗ ವಿದೇಶಿ ಮೀಡಿಯಾದವರೊಬ್ಬರು ‘ನೀವು ಯಾರು’ ಎಂದು ಕೇಳಿದ ವಿಡಿಯೋ ವೈರಲ್ ಆಗಿದೆ. ಇದನ್ನು ಶಾರುಖ್ ವಿರೋಧಿಗಳು ಟೀಕೆ ಮಾಡಿದ್ದಾರೆ. ‘ಭಾರತದಲ್ಲಿ ಮಾತ್ರ ಶಾರುಖ್ ಖಾನ್ ಹವಾ. ದೇಶದ ಹೊರಗೆ ಅವರು ಯಾರೆಂಬ ಪರಿಚಯವೇ ಇಲ್ಲ’ ಎನ್ನುವ ಮಾತನ್ನು ಕೆಲವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Wed, 7 May 25