AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹೀರಾತು ವ್ಯವಹಾರದಲ್ಲಿ ಅನನ್ಯಾ ಪಾಂಡೆ ನಂಬರ್ 1; ಶಾರುಖ್ ಹಿಂದಿಕ್ಕಿದ ನಟಿ

ಜಾಹೀರಾತು ಕ್ಷೇತ್ರದಲ್ಲಿ ನಟಿ ಅನನ್ಯಾ ಪಾಂಡೆ ಅವರು ಅಚ್ಚರಿಯ ರೀತಿಯಲ್ಲಿ ಮಿಂಚುತ್ತಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮುಂತಾದ ಸೂಪರ್​ ಸ್ಟಾರ್​ ನಟರಿಗಿಂತಲೂ ಅವರು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅದಕ್ಕೆ ಈಗ ಲೆಕ್ಕ ಸಿಕ್ಕಿದೆ. ‘ಐಪಿಎಲ್ 18’ ಪಂದ್ಯಗಳ ವೇಳೆ ಅನನ್ಯಾ ನಟಿಸಿದ ಜಾಹೀರಾತುಗಳೇ ಹೆಚ್ಚು ಪ್ರಸಾರ ಆಗಿವೆ.

ಜಾಹೀರಾತು ವ್ಯವಹಾರದಲ್ಲಿ ಅನನ್ಯಾ ಪಾಂಡೆ ನಂಬರ್ 1; ಶಾರುಖ್ ಹಿಂದಿಕ್ಕಿದ ನಟಿ
Ananya Panday
ಮದನ್​ ಕುಮಾರ್​
|

Updated on: May 06, 2025 | 7:34 PM

Share

ನಟಿ ಅನನ್ಯಾ ಪಾಂಡೆ (Ananya Panday) ಅವರು ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಇದ್ದರೂ ಕೂಡ ಅವರು ಮಿಂಚುತ್ತಲೇ ಇದ್ದಾರೆ. ಇತ್ತೀಚೆಗೆ ತೆರೆಕಂಡ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿನ ನಟನೆಗೆ ಅನನ್ಯಾ ಪಾಂಡೆ ಮೆಚ್ಚುಗೆ ಪಡೆದಿದ್ದಾರೆ. ಈ ನಡುವೆ ಅವರು ಇನ್ನೊಂದು ಸಾಧನೆ ಮಾಡಿದ್ದಾರೆ. ‘ಐಪಿಎಲ್ 18’ (IPL 18) ಪಂದ್ಯಗಳ ವೇಳೆ ಪ್ರಸಾರವಾದ ಜಾಹೀರಾತುಗಳ ಪೈಕಿ ಅನನ್ಯಾ ಪಾಂಡೆ ಅವರು ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಈ ವಿಚಾರದಲ್ಲಿ ಅವರು ಶಾರುಖ್ ಖಾನ್ ಅವರಂತಹ ಘಟಾನುಘಟಿಗಳನ್ನು ಹಿಂದಿಕ್ಕಿದ್ದಾರೆ.

ಐಪಿಎಲ್ ಪಂದ್ಯಗಳನ್ನು ಕೋಟ್ಯಂತರ ಜನರು ವೀಕ್ಷಿಸುತ್ತಾರೆ. ಈ ವೇಳೆ ಜಾಹೀರಾತುಗಳ ಮೂಲಕ ಬ್ರ್ಯಾಂಡ್ ಪ್ರಚಾರ ಮಾಡಲು ಹಲವು ಕಂಪನಿಗಳು ಪ್ರಯತ್ನಿಸುತ್ತವೆ. ಇದಕ್ಕಾಗಿ ಬಹುಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಸೆಲೆಬ್ರಿಟಿಗಳಿಂದ ಜಾಹೀರಾತು ಮಾಡಿಸಲಾಗುತ್ತದೆ. ನಟಿ ಅನನ್ಯಾ ಪಾಂಡೆ ಅವರು ಈ ವಿಚಾರದಲ್ಲಿ ಎಲ್ಲರಿಗಿಂತ ಹೆಚ್ಚು ಬೇಡಿಕೆ ಹೊಂದಿದ್ದಾರೆ.

‘ಐಪಿಎಲ್ 18’ರ ಮೊದಲಿನ 37 ಪಂದ್ಯಗಳ ವೇಳೆ ಪ್ರಸಾರವಾದ ಜಾಹೀರಾತುಗಳಲ್ಲಿ ಅನನ್ಯಾ ಪಾಂಡೆ ಅವರದ್ದೇ ಶೇಕಡ 9ರಷ್ಟಿದೆ. ಅನನ್ಯಾ ಪಾಂಡೆ ಅವರು ಮಿಲೇನಿಯಲ್ ಹಾಗೂ ಜೆನ್ ಜೀ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಬೇಡಿಕೆ ಹೆಚ್ಚಿದೆ. ಹಲವು ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಇದನ್ನೂ ಓದಿ
Image
ಒಮನ್ ಬಳಿಕ ಊಟಿಗೆ ಹಾರಿದ ರಶ್ಮಿಕಾ ಮಂದಣ್ಣ; ಜೊತೆಗಿರೋ ಹೀರೋ ಯಾರು?
Image
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸೇರಿಕೊಂಡ ನಟಿ ರಾಗಿಣಿ; ಚಿತ್ರೀಕರಣ ಶುರು
Image
ಸೋನು ನಿಗಂ ಹಾಡು ತೆಗೆದು ಹಾಕಿದ ಸಿನಿಮಾ ತಂಡ
Image
ಯಾರು ನೀವು? ಮೆಟ್ ಗಾಲಾದಲ್ಲಿ ಶಾರುಖ್ ಖಾನ್​ಗೆ ವಿದೇಶಿ ಮಾಧ್ಯಮಗಳ ಪ್ರಶ್ನೆ

ಅನನ್ಯಾ ಪಾಂಡೆ ಅವರ ನಂತರದ ಸ್ಥಾನದಲ್ಲಿ ಶಾರುಖ್ ಖಾನ್ ಶೇಕಡ 8ರಷ್ಟು ಶೇರ್ ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರು ಶೇಕಡ 7ರಷ್ಟು ಶೇರ್ ಹೊಂದಿದ್ದಾರೆ. ಅಜಯ್ ದೇವಗನ್ ಮತ್ತು ಎಂ.ಎಸ್. ಧೋನಿ ಅವರು ತಲಾ ಶೇಕಡ 5ರಷ್ಟು ಶೇರ್ ಹೊಂದಿದ್ದಾರೆ. ಇಂಥ ಘಟಾನುಘಟಿ ಸೆಲೆಬ್ರಿಟಿಗಳನ್ನು ಅನನ್ಯಾ ಪಾಂಡೆ ಅವರು ಹಿಂದಿಕ್ಕಿರುವುದು ವಿಶೇಷ.

ಇದನ್ನೂ ಓದಿ: 6 ಲಕ್ಷ ರೂಪಾಯಿ ಬೆಲೆಯ ಬ್ಯಾಗ್ ಧರಿಸಿದ ನಟಿ ಅನನ್ಯಾ ಪಾಂಡೆ

ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಅನನ್ಯಾ ಪಾಂಡೆ ಅವರಿಗೆ ಬೇಡಿಕೆ ಬಂದಿದೆ. ಇತ್ತೀಚೆಗೆ ಅವರು ‘ಶನೆಲ್’ ಕಂಪನಿಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದರು. ಈ ಪ್ರತಿಷ್ಠಿತ ಫ್ಯಾಷನ್ ಕಂಪನಿಗೆ ಭಾರತದಿಂದ ಆಯ್ಕೆಯಾದ ಮೊದಲ ಪ್ರಚಾರ ರಾಯಭಾರಿ ಎಂಬ ಖ್ಯಾತಿ ಅವರಿಗೆ ಸಿಕ್ಕಿದೆ. ಈ ಎಲ್ಲ ಬ್ರ್ಯಾಂಡ್​ಗಳಿಂದ ಅವರು ಕೈ ತುಂಬ ಸಂಭಾವನೆ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.