AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮನ್ ಬಳಿಕ ಊಟಿಗೆ ಹಾರಿದ ರಶ್ಮಿಕಾ ಮಂದಣ್ಣ; ಜೊತೆಗಿರೋ ಹೀರೋ ಯಾರು?

Rashmika Mandanna: ವಿಜಯ್ ದೇವರಕೊಂಡ ಜೊತೆಗೆ ಒಮನ್ ಪ್ರವಾಸ ಮುಗಿಸಿ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಈಗ ಊಟಿಗೆ ಬಂದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಊಟಿಗೆ ಬಂದಿರುವುದು ಪ್ರವಾಸಕ್ಕೆ ಅಲ್ಲ ಬದಲಿಗೆ ಸಿನಿಮಾ ಚಿತ್ರೀಕರಣಕ್ಕೆ. ಯಾವ ಸಿನಿಮಾದ ಚಿತ್ರೀಕರಣ, ಯಾರು ನಾಯಕ? ಇತ್ಯಾದಿ ಮಾಹಿತಿ ಇಲ್ಲಿದೆ...

ಒಮನ್ ಬಳಿಕ ಊಟಿಗೆ ಹಾರಿದ ರಶ್ಮಿಕಾ ಮಂದಣ್ಣ; ಜೊತೆಗಿರೋ ಹೀರೋ ಯಾರು?
Rashmika Mandanna
 ಶ್ರೀಲಕ್ಷ್ಮೀ ಎಚ್
| Edited By: |

Updated on: May 06, 2025 | 7:00 PM

Share

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಗೆ ವೆಕೇಶನ್​ಗಾಗಿ ಒಮನ್​ಗೆ ಹಾರಿದ್ದರು. ಅವರ ಜೊತೆ ವಿಜಯ್ ದೇವರಕೊಂಡ ಕೂಡ ಇದ್ದರು ಎಂದು ಹೇಳಲಾಗುತ್ತಿದೆ. ಈಗ ಅವರು ನೇರವಾಗಿ ಹಾರಿದ್ದು ಊಟಿಗೆ. ಅವರ ಜೊತೆ ಇರೋದು ಬಾಲಿವುಡ್​ನ ಖ್ಯಾತ ನಟ ಅನ್ನೋದು ನಿಮಗೆ ಗೊತ್ತಾ? ಹೌದು, ರಶ್ಮಿಕಾ ಅವರು ಏಪ್ರಿಲ್ 28ರಂದು ಊಟಿಗೆ ತೆರಳಿದ್ದಾರೆ ಎಂದು ವರದಿ ಆಗಿದೆ. ಒಂದು ತಿಂಗಳುಗಳ ಕಾಲ ಅವರು ಅಲ್ಲಿಯೇ ಇರಲಿದ್ದಾರಂತೆ. ಅದಕ್ಕೆ ಕಾರಣ ಸಿನಿಮಾದ ಶೂಟ್.

ರಶ್ಮಿಕಾ ಮಂದಣ್ಣ ಅವರು ಅನೇಕ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಹಾರರ್- ಕಾಮಿಡಿ ಸಿನಿಮಾನ ಒಪ್ಪಿಕೊಂಡಿದ್ದಾರೆ. ಇದಕ್ಕೆ ‘ಥಾಮಾ’ ಎನ್ನುವ ಟೈಟಲ್ ಇಡಲಾಗಿದೆ. ಕನ್ನಡದಲ್ಲಿ ರಶ್ಮಿಕಾ ಮಾಡಿದ್ದ ‘ಚಮಕ್’ ಹಿಟ್ ಆಯಿತು. ಇದು ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತ್ತು. ‘ಗೀತ ಗೋವಿಂದಂ’ ಕೂಡ ಇದೇ ಸ್ಟೈಲ್​ನಲ್ಲಿ ಇತ್ತು. ಈಗ ಅವರ ಹೊಸ ಚಿತ್ರಕ್ಕೂ ಇದೇ ಥೀಮ್ ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಾರರ್ ಅಂಶ ಕೂಡ ಇದೆ. ಈ ಸಿನಿಮಾಗೆ ಆಯುಷ್ಮಾನ್ ಖುರಾನಾ ಹೀರೋ ಆದರೆ, ಆದಿತ್ಯ ಸರ್ಪೋತ್​​ದಾರ್ ನಿರ್ದೇಶನ ಇದೆ.

ಇದನ್ನೂ ಓದಿ:ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ

ಮೇ 25ರವರೆಗೆ ರಶ್ಮಿಕಾ ಮಂದಣ್ಣ ಅವರು ಊಟಿಯಲ್ಲಿ ಇರಲಿದ್ದಾರಂತೆ. ಸಿನಿಮಾದ ಕ್ಲೈಮ್ಯಾಕ್ಸ್, ಇಬ್ಬರ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಇಲ್ಲಿಯೇ ಶೂಟ್ ಆಗಲಿದೆ. ಸದ್ಯ ಈ ತಂಡವರು ಊಟಿಯ ದೊಡ್ಡ ಬೆಟ್ಟ, ನೀಲಗಿರಿ ಫಾರೆಸ್ಟ್ ಮೊದಲಾದ ಕಡೆಗಳಲ್ಲಿ ಶೂಟಿಂಗ್ ಮಾಡುತ್ತಿದೆ. ನವಾಜುದ್ದೀನ್ ಸಿದ್ಧಿಕಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರವು ಮಿಸ್ಟರಿಯಿಂದ ಕೂಡಿರಲಿದೆಯಂತೆ. ಮೇ ಮಧ್ಯದಲ್ಲಿ ಅವರು ಸಿನಿಮಾ ಶೂಟ್ ಸೇರಿಕೊಳ್ಳಲಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಊರು ಕೊಡಗು. ಹೈದರಾಬಾದ್-ಮುಂಬೈಗೆ ಹೋಲಿಕೆ ಮಾಡಿದರೆ ಮಡಿಕೇರಿ ಊಟಿಯಿಂದ ತುಂಬಾನೇ ಹತ್ತಿರ. ಹೀಗಾಗಿ, ಸಮಯ ಸಿಕ್ಕರೆ ಅವರು ಮನೆಗೆ ಹೋಗಿ ಬರುವ ಆಲೋಚನೆಯಲ್ಲೂ ಇದ್ದಾರೆ. ಈ ಕಾರಣಕ್ಕೆ ಅವರಿಗೆ ತುಂಬಾನೇ ಖುಷಿ ಇದೆ. ಇನ್ನು, ಈ ಚಿತ್ರದ ಕಥೆ ಹಂಪಿಯಲ್ಲೂ ಸಾಗಲಿದೆ ಎಂದು ಈ ಮೊದಲೇ ಹೇಳಲಾಗಿದೆ. ಅಲ್ಲಿಯೂ ಚಿತ್ರದ ಶೂಟ್ ನಡೆಯಲಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರದ ಶೂಟ್ ಪೂರ್ಣಗೊಳ್ಳಲಿದೆ. ದೀಪಾವಳಿ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ