
ಬಾಲಿವುಡ್ ನಟಿ ಕಾಜೋಲ್ (Kajol) ಅವರು ‘ಮಾ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಕಾಜೋಲ್ ಬ್ಯುಸಿ ಆಗಿದ್ದಾರೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ತಮಗೆ ಆದ ಹಾರ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಯಾಕೆಂದರೆ, ‘ಮಾ’ (Maa) ಸಿನಿಮಾದಲ್ಲಿ ಕೂಡ ಹಾರರ್ ಕಹಾನಿ ಇದೆ. ದೆವ್ವ-ಭೂತದ ಸಿನಿಮಾ ನೋಡಿ ಎಂಜಾಯ್ ಮಾಡಬೇಕು ಎನ್ನುವವರು ‘ಮಾ’ ಸಿನಿಮಾಗಾಗಿ ಕಾದಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ (Ramoji Film City) ದೆವ್ವದ ಅನುಭವ ಆಗಿದೆ ಎಂದು ಕಾಜೋಲ್ ಅವರು ಹೇಳಿದ್ದಾರೆ.
ಹೈದರಾಬಾದ್ನಲ್ಲಿ ರಾಮೋಜಿ ಫಿಲ್ಮ್ ಸಿಟಿ ಇದೆ. ತೆಲುಗು ಸಿನಿಮಾ ಮಾತ್ರವಲ್ಲದೇ ಹಿಂದಿ, ತಮಿಳು, ಕನ್ನಡ ಸೇರಿ ಹಲವು ಭಾಷೆಯ ಸಿನಿಮಾಗಳು ಇಲ್ಲಿ ಚಿತ್ರೀಕರಣ ಆಗುತ್ತವೆ. ಕಾಜೋಲ್ ಕೂಡ ಅನೇಕ ಸಿನಿಮಾಗಳ ಚಿತ್ರೀಕರಣವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಿದ್ದಾರೆ. ಅಲ್ಲಿ ತಮಗೆ ಆದ ಅನುಭವ ಹೇಗಿತ್ತು ಎಂಬುದನ್ನು ಅವರು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಜೋಲ್ ಅವರು ಈ ಬಗ್ಗೆ ಮಾತಾಡಿದ್ದಾರೆ. ‘ಭಯ ಆಗುವಂತಹ ಅನೇಕ ಸ್ಥಳಗಳು ಇವೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ ಅದಕ್ಕೆ ಪ್ರಮುಖ ಉದಾಹರಣೆ. ಜಗತ್ತಿನಲ್ಲಿ ಹೆಚ್ಚು ಭಯಬೀಳಿಸುವ ಸ್ಥಳಗಳಲ್ಲಿ ಇದು ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ದೇವರು ನನ್ನನ್ನು ಕಾಪಾಡಿದ್ದಾನೆ ಎನಿಸುತ್ತದೆ. ನಾನು ಏನನ್ನೂ ನೋಡಿಲ್ಲ’ ಎಂದು ಕಾಜೋಲ್ ಹೇಳಿದ್ದಾರೆ.
I’ve experienced some unsettling energy during shoots— certain locations were so Scary, all I wanted was to get out and never return.#RamojiFilmCity in #Hyderabad, for instance, is famously known as one of the most haunted places in the world.
– #KajolDevgan#Bollywood… pic.twitter.com/MFIuu04nrh— Tupaki (@tupaki_official) June 18, 2025
ಕಾಜೋಲ್ ಅವರ ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸರಿಯಾಗಿ ಏನನ್ನೂ ಸ್ಪಷ್ಟಪಡಿಸದೇ ಈ ರೀತಿ ಹೇಳಿಕೆ ನೀಡಿದ್ದ ಸರಿಯಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ರಾಮೋಜಿ ಫಿಲ್ಮ್ ಸಿಟಿ ಒಂದು ಪ್ರವಾಸಿ ತಾಣ ಕೂಡ ಹೌದು. ಕಾಜೋಲ್ ಇಂಥ ಹೇಳಿಕೆ ನೀಡಿದರೆ ಆ ಸ್ಥಳದ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಕಾಜೋಲ್ ಪುತ್ರಿ ನಿಸಾಗೆ 22 ವರ್ಷ; ಚಿತ್ರರಂಗಕ್ಕೆ ಬರೋದು ಅನುಮಾನ
ಕಾಜೋಲ್ ಅವರಿಗೆ ಈಗ 50 ವರ್ಷ ವಯಸ್ಸು. ಇಂದಿಗೂ ಅವರು ಬಾಲಿವುಡ್ನಲ್ಲಿ ಬೇಡಿಕೆ ಹೊಂದಿದ್ದಾರೆ. ತಮ್ಮ ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ‘ಮಾ’ ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:44 pm, Wed, 18 June 25