ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್; ಫೋಟೋ ಹಂಚಿಕೊಂಡ ಅಮಿತಾಭ್

ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾದ ಸೀಕ್ವೆಲ್ ಅಧಿಕೃತವಾಗಿ ಆರಂಭವಾಗಿದೆ. ದೀಪಿಕಾ ಪಡುಕೋಣೆ ನಿರ್ಗಮನದಂತಹ ಅಡೆತಡೆಗಳ ನಂತರ, ಅಮಿತಾಭ್ ಬಚ್ಚನ್ ಅವರು ಕಮಲ್ ಹಾಸನ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಚಿತ್ರೀಕರಣ ಶುರುವಾಗಿದೆ ಎಂದು ಖಚಿತಪಡಿಸಿದ್ದಾರೆ. ದೀಪಿಕಾ ಜಾಗಕ್ಕೆ ಸಾಯಿ ಪಲ್ಲವಿ ಬರುವ ಸಾಧ್ಯತೆಯಿದೆ.

ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್;  ಫೋಟೋ ಹಂಚಿಕೊಂಡ ಅಮಿತಾಭ್
ಅಮಿತಾಭ್-ಕಮಲ್

Updated on: Feb 24, 2026 | 3:05 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆದ ಬಳಿಕ ಸೀಕ್ವೆಲ್ ಬರಬೇಕಿದೆ. ಆದರೆ, ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾದವು. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ಹೋಗಿದ್ದು, ಚಿತ್ರಕ್ಕೆ ದೊಡ್ಡ ಹಿನ್ನಡೆ ಆಯಿತು. ಸಿನಿಮಾ ನಿಲ್ಲುತ್ತೆ ಎಂದು ಕೂಡ ಹೇಳಲಾಗಿತ್ತು. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಬಗ್ಗೆ ಅಪ್​​ಡೇಟ್ ಸಿಕ್ಕಿದೆ. ಈ ಸಿನಿಮಾ ಅಧಿಕೃತವಾಗಿ ಆರಂಭ ಆಗಿದೆ. ಇದು ಅಭಿಮಾನಿಗಳ ಖುಷಿ ಕೊಟ್ಟಿದೆ.

‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಇದೆ. ಈ ಸಿನಿಮಾ ದೊಡ್ಡ ಬಜೆಟ್​​ನಲ್ಲಿ ರೆಡಿ ಆಯಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರದ ಕಥೆ ಅರ್ಧಕ್ಕೆ ನಿಂತಿದ್ದು, ಸೀಕ್ವೆಲ್ ಬರಬೇಕಿದೆ. ಮೊದಲ ಭಾಗದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ದೀಪಿಕಾ ಸೇರಿದಂತೆ ಅನೇಕರು ನಟಿಸಿದ್ದರು. ಸೀಕ್ವೆಲ್​​ನಲ್ಲಿ ದೀಪಿಕಾ ಜಾಗವನ್ನು ಸಾಯಿ ಪಲ್ಲವಿ ತುಂಬಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಶೂಟ್ ಯಾವಾಗ ಆರಂಭ ಆಗುತ್ತದೆ ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಅಮಿತಾಭ್ ಬಚ್ಚನ್ ಕಡೆಯಿಂದ ಉತ್ತರ ಸಿಕ್ಕಿದೆ. ಕಮಲ್ ಹಾಸನ್ ಅವರನ್ನು ಭೇಟಿ ಮಾಡಿರುವ ಫೋಟೋನ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್  ಅಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್​​ಗೆ ಶೂಟಿಂಗ್ ಶುರುವಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ‘ಅತ್ತೆ-ಮಾವ ನನ್ನ ಹೆಂಡತಿಯನ್ನು ಕಳುಹಿಸುತ್ತಿಲ್ಲ’; ಪೋಸ್ಟರ್ ಹಿಡಿದು ನಿಂತ ಅಮಿತಾಭ್ ಬಚ್ಚನ್

ಪ್ರತಿ ಭಾನುವಾರ ಅಮಿತಾಭ್ ಬಚ್ಚನ್ ಅವರು ಮನೆಯ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಶೂಟ್ ಕಾರಣಕ್ಕೆ ಅವರು ಹೈದರಾಬಾದ್ ಅಲ್ಲಿ ಇದ್ದಾರೆ. ಹೀಗಾಗಿ, ಅಭಿಮಾನಿಗಳ ಭೇಟಿ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಾಗಿದೆ. ಆದಾಗ್ಯೂ ಅಪರೂಪಕ್ಕೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಅಶ್ವತ್ಥಾಮ ಆಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us