Kangana Ranaut: ಕಂಗನಾಗೆ ನೆನಪಾಗುತ್ತಿದೆ ಆಮಿರ್​ ಖಾನ್​ ಜತೆ ಕಳೆದ ಆ ದಿನಗಳು; ಸಂಬಂಧ ಕೆಟ್ಟಿದ್ದಕ್ಕೆ ಕಾರಣ ತಿಳಿಸಿದ ನಟಿ

‘ಕೆಲವೊಮ್ಮೆ ನನಗೆ ಆ ದಿನಗಳು ನೆನಪಾಗುತ್ತವೆ. ಆ ಕಾಲ ಎಲ್ಲಿ ಹೋಯಿತು ಅಂತ ಆಶ್ಚರ್ಯ ಆಗತ್ತೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

Kangana Ranaut: ಕಂಗನಾಗೆ ನೆನಪಾಗುತ್ತಿದೆ ಆಮಿರ್​ ಖಾನ್​ ಜತೆ ಕಳೆದ ಆ ದಿನಗಳು; ಸಂಬಂಧ ಕೆಟ್ಟಿದ್ದಕ್ಕೆ ಕಾರಣ ತಿಳಿಸಿದ ನಟಿ
ಕಂಗನಾ ರಣಾವತ್, ಆಮಿರ್ ಖಾನ್
Edited By:

Updated on: Apr 19, 2023 | 7:15 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ಬಾಲಿವುಡ್​ನಲ್ಲಿ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಇರುವ ಒಳರಾಜಕೀಯವನ್ನು ಅವರು ಬಯಲು ಮಾಡುತ್ತಿದ್ದಾರೆ. ನೆಪೋಟಿಸಂ ವಿರುದ್ಧ ಆಗಾಗ ಕಿಡಿಕಾರುತ್ತಾರೆ. ಗುಂಪುಗಾರಿಕೆ ಕಂಡರೂ ಅವರು ಉರಿದುಬೀಳುತ್ತಾರೆ. ಆದರೆ ಒಂದಷ್ಟು ವರ್ಷಗಳ ಹಿಂದೆ ವಾತಾವರಣ ಹೀಗಿರಲಿಲ್ಲ. ಬಹುತೇಕ ಎಲ್ಲರ ಜೊತೆ ಕಂಗನಾ ಅವರು ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಆಮಿರ್ ಖಾನ್​ ಜೊತೆಗೂ ಕಂಗನಾ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ಸ್ನೇಹ ಅಂತ್ಯವಾಯ್ತು. ಆ ದಿನಗಳನ್ನು ಈಗ ಕಂಗನಾ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಅಂದಹಾಗೆ, ಆಮಿರ್​ ಖಾನ್​ (Aamir Khan) ಜೊತೆಗಿನ ತಮ್ಮ ಗೆಳೆತನ ಕೊನೆಯಾಗಲು ಹೃತಿಕ್​ ರೋಷನ್​ (Hrithik Roshan) ಕಾರಣ ಎಂಬುದನ್ನು ಕೂಡ ಅವರು ಹೇಳಿದ್ದಾರೆ.

ಈ ಹಿಂದೆ ಆಮಿರ್​ ಖಾನ್​ ಅವರು ‘ಸತ್ಯಮೇವ ಜಯತೆ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅದರಲ್ಲಿ ಕಂಗನಾ ರಣಾವತ್​ ಕೂಡ ಭಾಗಿಯಾಗಿದ್ದರು. ಆ ವಿಡಿಯೋವನ್ನು ಈಗ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕಂಗನಾ ಶೇರ್​ ಮಾಡಿಕೊಂಡಿದ್ದಾರೆ. ‘ಕೆಲವೊಮ್ಮೆ ನನಗೆ ಆ ದಿನಗಳು ನೆನಪಾಗುತ್ತವೆ. ಆಮಿರ್​ ಖಾನ್​ ಅವರು ನನ್ನ ಬೆಸ್ಟ್​ ಫ್ರೆಂಡ್​ ಆಗಿದ್ದರು. ಆ ಕಾಲ ಎಲ್ಲಿ ಹೋಯಿತು ಅಂತ ಆಶ್ಚರ್ಯ ಆಗತ್ತೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

‘ಒಂದಂತೂ ಖಚಿತ. ಆಮಿರ್​ ಖಾನ್​ ಅವರು ನನಗೆ ಮಾರ್ಗದರ್ಶನ ಮಾಡಿದರು. ನನ್ನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು. ಆಯ್ಕೆಗಳ ವಿಚಾರದಲ್ಲಿ ನನ್ನನ್ನು ತಿದ್ದಿದರು. ಇದೆಲ್ಲವೂ ಆಗಿದ್ದು ಹೃತಿಕ್​ ರೋಷನ್​ ನನ್ನ ವಿರುದ್ಧ ಕೇಸ್​ ಹಾಕುವುದಕ್ಕೂ ಮುನ್ನ. ಆ ಬಳಿಕ ಅವರೆಲ್ಲರ ಉದ್ದೇಶ ಸ್ಪಷ್ಟವಾಯಿತು. ಇಡೀ ಚಿತ್ರರಂಗದ ವಿರು​ದ್ಧ ಒಬ್ಬಳೇ ಮಹಿಳೆಯಾಗಿ ನಿಂತುಕೊಂಡೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

Kangana Ranaut: ಎಲ್ಲರ ಬಳಿ ಕ್ಷಮೆ ಕೇಳಿದ ಕಂಗನಾ ರಣಾವತ್​; ಬರ್ತ್​ಡೇ ದಿನವೇ ಬದಲಾಯಿತು ಮನಸ್ಸು

ಹೃತಿಕ್​ ರೋಷನ್​ ಮತ್ತು ಕಂಗನಾ ರಣಾವತ್​ ಅವರು ಡೇಟಿಂಗ್​ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿತು. ಕಂಗನಾ ಜೊತೆಗಿನ ಸಂಬಂಧವನ್ನು ಹೃತಿಕ್​ ರೋಷನ್​ ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಬಳಿಕ ಇಬ್ಬರ ಜಗಳ ಕಾನೂನಿನ ಸಮರವಾಗಿ ಮಾರ್ಪಟ್ಟಿತು. ಆ ನಂತರ ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ತಮ್ಮಿಂದ ದೂರವಾದರು ಎಂಬುದು ಕಂಗನಾ ವಾದ.

ಪ್ರಸ್ತುತ ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us