‘ಎಮರ್ಜೆನ್ಸಿ’ ಚಿತ್ರಕ್ಕಿಲ್ಲ ಸೆನ್ಸಾರ್ ಪ್ರಮಾಣಪತ್ರ; ಕೋರ್ಟ್​​ಗೆ​ ಹೋಗುವ ಎಚ್ಚರಿಕೆ ನೀಡಿದ ಕಂಗನಾ

ಸಂಸದೆ, ನಟಿ ಕಂಗನಾ ರನೌತ್ ನಟಿಸಿ ನಿರ್ದೇಶನ ಮಾಡಿ ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ನಿಷೇಧದ ಭೀತಿ ಎದುರಾಗಿದೆ. ಈಗ ಅವರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸಿಗೋದು ಅನುಮಾನ ಎನ್ನಲಾಗುತ್ತಿದೆ.

‘ಎಮರ್ಜೆನ್ಸಿ’ ಚಿತ್ರಕ್ಕಿಲ್ಲ ಸೆನ್ಸಾರ್ ಪ್ರಮಾಣಪತ್ರ; ಕೋರ್ಟ್​​ಗೆ​ ಹೋಗುವ ಎಚ್ಚರಿಕೆ ನೀಡಿದ ಕಂಗನಾ
ಕಂಗನಾ ರಣಾವತ್
Follow us
|

Updated on: Aug 31, 2024 | 8:36 AM

ಕಂಗನಾ ರಣಾವತ್ ಅವರು ಮುಂಬರುವ ‘ಎಮರ್ಜೆನ್ಸಿ’ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈಗ ಅವರು ಸೆನ್ಸಾರ್ ಮಂಡಳಿಯ ವಿರುದ್ಧ ಸಿಡಿದೆದ್ದಿದ್ದಾರೆ. ಸೆನ್ಸಾರ್ ಮಂಡಳಿಯವರು ನಮಗೆ ಪ್ರಮಾಣಪತ್ರ ನೀಡುತ್ತಿಲ್ಲ ಎನ್ನುವ ಆರೋಪವನ್ನು ಅವರು ಮಾಡಿದ್ದಾರೆ. ಸಿನಿಮಾದಲ್ಲಿ ತುಂಬಾನೇ ಡ್ರಾಮಾ ಇದೆ ಎಂದು ಸೆನ್ಸಾರ್ ಮಂಡಳಿಯವರು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ಸಿನಿಮಾ ರಿಲೀಸ್​ಗೆ ಸಂಕಷ್ಟ ಆಗುವ ಸಾಧ್ಯತೆ ಇದೆ.

‘ಆರಂಭದಲ್ಲಿ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿಯವರು ಪ್ರಮಾಣ ಪತ್ರ ನೀಡಲು ಒಪ್ಪಿದ್ದರು. ಆದರೆ, ಈಗ ಅವರು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಒತ್ತಡಗಳಿಂದ ಅವರು ಈ ರೀತಿ ಮಾಡುತ್ತಿರಬಹುದು. ಸಿನಿಮಾ ರಿಲೀಸ್ ಮಾಡಲು ನಾನು ಕೋರ್ಟ್​ಗೆ ಹೋಗಲು ಸಿದ್ಧ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಮೇಲೆ ಬ್ಯಾನ್ ಹೇರಲು ಕೆಲ ರಾಜ್ಯಗಳು ಮುಂದಾಗಿವೆ. ಈಗಾಗಲೇ ತೆಲಂಗಾಣ ಸರ್ಕಾರ ಈ ಬಗ್ಗೆ ಆಲೋಚನೆ ಮಾಡಿದೆ ಎನ್ನಲಾಗಿದೆ. ಸಿಖ್ ಸಮುದಾಯವನ್ನು ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂಬುದು ಆ ಸಮುದಾಯವರ ಆರೋಪ. ಒಂದೊಮ್ಮೆ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ನೀಡದೇ ಇದ್ದರೆ ಸಿನಿಮಾ ರಿಲೀಸ್ ಆಗುವುದಿಲ್ಲ.

ಇದನ್ನೂ ಓದಿ: ಸಂಕಷ್ಟದಲ್ಲಿ ಕಂಗನಾ, ತೆಲಂಗಾಣದಲ್ಲಿ ‘ಎಮರ್ಜೆನ್ಸಿ’ ಸಿನಿಮಾಕ್ಕೆ ನಿಷೇಧ ಸಾಧ್ಯತೆ

ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 6ರಂದು ರಿಲೀಸ್ ಆಗಬೇಕಿದೆ. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಪ್ರಮಾಣಪತ್ರ ಸಿಕ್ಕ ಬಳಿಕ ಸಿನಿಮಾನ ದೇಶಾದ್ಯಂತ ರಿಲೀಸ್ ಮಾಡಬಹುದು. ಆಗ ರಾಜ್ಯ ಸರ್ಕಾರಗಳು ಸಿನಿಮಾ ಮೇಲೆ ಬ್ಯಾನ್ ಹೇರಿದರೂ, ಇದನ್ನು ತೆಗೆಯುವಂತೆ ಕೋರ್ಟ್ ಸೂಚಿಸಬಹುದು. ಈ ಮೊದಲು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಪಶ್ಚಿಮ ಬಂಗಾಳ ಬ್ಯಾನ್ ಹೇರಿತ್ತು. ಕೋರ್ಟ್ ಆದೇಶದ ಬಳಿಕ ಬ್ಯಾನ್ ತೆಗೆಯಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.