‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ ರಣಾವತ್

ಕಂಗನಾ ರಣಾವತ್ ಅವರು ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕರ ಊರು ಎಂದು ಕರೆದ ಅವರು, ಅದನ್ನು ವಿಶ್ವ ನಕ್ಷೆಯಿಂದ ಅಳಿಸಿಹಾಕಬೇಕೆಂದು ಆಗ್ರಹಿಸಿದ್ದಾರೆ. ಭಾರತದ S-400 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿ, ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಹತ್ತಿಕ್ಕಿದ್ದಕ್ಕೆ ಅಭಿನಂದಿಸಿದ್ದಾರೆ.

‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ ರಣಾವತ್
ಕಂಗನಾ

Updated on: May 10, 2025 | 7:01 AM

ನಟಿ ಕಂಗನಾ ರಣಾವತ್ (Kangana Ranaut) ಅವರು ಭರ್ಜರಿ ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹೇಳಿಕೆ ನೀಡಿ ಸುದ್ದಿ ಆಗುತ್ತಾರೆ. ಈಗ ಅವರು ಕೇವಲ ನಟಿ ಅಲ್ಲ, ರಾಜಕಾರಣಿ ಕೂಡ ಹೌದು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ, ಸಂಸದೆ ಆಗಿದ್ದಾರೆ. ಇತ್ತೀಚೆಗೆ ಆರಂಭ ಆದ ಭಾರತ ಮತ್ತು ಪಾಕ್ ನಡುವಿನ ಯುದ್ಧ ಭೀತಿ ಬಗ್ಗೆ ಕಂಗನಾ ರಣಾವತ್ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ‘ಭಯೋತ್ಪಾದಕರ ನಾಡು’ ಎಂದು ಕರೆದಿರುವ ಅವರು, ‘ವಿಶ್ವದ ಮ್ಯಾಪ್​ನಿಂದಲೇ ಅವರನ್ನು ತೆಗೆದು ಹಾಕಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದವರು ಭಾರತದ ಮೇಲೆ ಹಲವು ಕಡೆಗಳಲ್ಲಿ ಡ್ರೋನ್ ದಾಳಿ ಮಾಡಲು ಪ್ರಯತ್ನಿಸಿದ್ದು ಇದೆ. ಜಮ್ಮು, ಸಾಂಬಾ, ಸತ್ವಾರಿ, ಅಮೃತ್​ಸರ್, ಜಲಂಧರ್ ಮೊದಲಾದ ಕಡೆಗಳಲ್ಲಿ ಪಾಕ್ ಡ್ರೋನ್ ದಾಳಿಗೆ ಪ್ರಯತ್ನಿಸಿದ್ದು ಭಾರತ ಅದನ್ನು ಹಿಮ್ಮೆಟ್ಟಿಸಿದೆ. ಇನ್ನು, ಪಹಲ್ಗಾಮ್ ದಾಳಿ ಹಿಂದೆ ನಮ್ಮ ಕೈವಾಡ ಇಲ್ಲ ಎಂದು ಪಾಕ್ ವಾದಿಸುತ್ತಲೇ ಬರುತ್ತಿದೆ. ಈ ವಿಚಾರಗಳ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

‘ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿದೆ. ಭಯೋತ್ಪಾದಕರಿಂದ ತುಂಬಿರುವ ಭಯಾನಕ, ಅಸಹ್ಯ ರಾಷ್ಟ್ರ. ವಿಶ್ವ ಭೂಪಟದಿಂದಲೇ ಅವರನ್ನು ಅಳಿಸಿಹಾಕಬೇಕು’ ಎಂದು ಕಂಗನಾ ಅವರು ಗುಡುಗಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ಭಾರತದ ಎಸ್​-400 ಮಿಸೈಲ್ ಡಿಫೆನ್ಸ್ ಸಿಸ್ಟಮ್​ನ ಕಾರ್ಯಕ್ಷಮತೆ ಬಗ್ಗೆ ಕಂಗನಾ ಈ ಮೊದಲು ಮಾತನಾಡಿದ್ದರು. ‘ಜಮ್ಮುನ ಟಾರ್ಗೆಟ್ ಮಾಡಲಾಗುತ್ತಿದೆ. ಭಾರತದ ಏರ್ ಡಿಫೆನ್ಸ್​ ವ್ಯವಸ್ಥೆಯು ಪಾಕ್ ಡ್ರೋನ್​ಗಳನ್ನು ಹೊಡೆದ ಹಾಕಿವೆ’ ಎಂದು ಕಂಗನಾ ಅವರು ಈ ಮೊದಲು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದವರು ‘ಆಪರೇಷನ್ ಸಿಂದೂರ್’ ನಡೆಸಿದ್ದಾರೆ. ಈ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಮುಂದಿನ ದಿನಗಳಲ್ಲಿ ಗಡಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ನಪುಂಸಕರು’ ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ಕಂಗನಾ

ಕಂಗನಾ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಜನವರಿ 17ರಂದು ರಿಲೀಸ್ ಆಯಿತು. ಸಾಕಷ್ಟು ಬಾರಿ ರಿಲೀಸ್ ಮುಂದಕ್ಕೆ ಹೋಗಿ ಈ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆ ಆಗಿ, ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.