ಐದು ಕಬೋರ್ಡ್ ತುಂಬ ಇದೆ ಕರಣ್ ಜೋಹರ್ ಶರ್ಟ್; ಕಲೆಕ್ಷನ್ ನೋಡಿದ್ರೆ ಅಚ್ಚರಿ ಗ್ಯಾರಂಟಿ
ಸೆಲೆಬ್ರಿಟಿಗಳು ಅಷ್ಟು ಸುಲಭದಲ್ಲಿ ತಮ್ಮ ಮನೆಯನ್ನು ಅಭಿಮಾನಿಗಳಿಗೆ ತೋರಿಸೋಕೆ ಒಪ್ಪುವುದಿಲ್ಲ. ಆದರೆ, ಫರಾ ಖಾನ್ ಅವರು ಕರಣ್ ಜೋಹರ್ ಅವರ ಮನ ಒಲಿಸಿ ಅವರ ಬೆಡ್ರೂಂ ಹಾಗೂ ಬಟ್ಟೆ ಕಲೆಕ್ಷನ್ ತೋರಿಸಿದ್ದಾರೆ. ಕರಣ್ ಜೋಹರ್ ಅವರ ಬೆಡ್ರೂಂ ವಿಶಾಲವಾಗಿದೆ. ಆ ಬಳಿಕ ಅವರು ಹೋಗಿದ್ದು ಕಬೋರ್ಡ್ನತ್ತ.
ಕರಣ್ ಜೋಹರ್ (Karan Johar) ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಇದೆ. ಹಲವು ಸೆಲೆಬ್ರಿಟಿ ಮಕ್ಕಳನ್ನು ಅವರು ಪರಿಚಯಿಸಿದ್ದಾರೆ. ಹಣ ಬಲದ ಜೊತೆಗೆ ಚಿತ್ರರಂಗದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಪ್ರತಿ ಬಾರಿ ಸಾರ್ವಜನಿಕವಾಗಿ ಕರಣ್ ಜೋಹರ್ ಕಾಣಿಸಿಕೊಳ್ಳುವಾಗಲೂ ಹೊಸ ಹೊಸ ಬಟ್ಟೆ ಧರಿಸಿ ಮಿಂಚುತ್ತಾರೆ. ಈಗ ಅವರು ತಮ್ಮ ಶರ್ಟ್ ಕಲೆಕ್ಷನ್ ತೋರಿಸಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಕಬೋರ್ಡ್ನಲ್ಲಿ ಕರಣ್ ಜೋಹರ್ ಶರ್ಟ್ಗಳಿವೆ. ಈ ಕಲೆಕ್ಷನ್ ನೋಡಿ ನಿರ್ದೇಶಕಿ ಫರಾ ಖಾನ್ ಅವರೇ ಅಚ್ಚರಿ ಹೊರ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕರಣ್ ಜೋಹರ್ ಅವರು ಹಲವು ವರ್ಷಗಳಿಂದ ಚಿತ್ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಅವರಿಗೆ ಸಾಕಷ್ಟು ಹಣ ಆಗಿದೆ. ಇಷ್ಟೇ ಅಲ್ಲ, ಕರಣ್ ಜೋಹರ್ ಅವರು ಹಲವು ಉದ್ಯಮಗಳನ್ನು ಹೊಂದಿದ್ದಾರೆ. ಶೋಗಳನ್ನು ನಿರ್ಮಾಣ ಮಾಡುವುದರಿಂದಲೂ ಅವರಿಗೆ ದೊಡ್ಡ ಸಂಭಾವನೆ ಸಿಗುತ್ತದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ‘ಮಿಸ್ ವರ್ಲ್ಡ್’ ಕಾರ್ಯಕ್ರಮವನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು.
ಸೆಲೆಬ್ರಿಟಿಗಳು ಅಷ್ಟು ಸುಲಭದಲ್ಲಿ ತಮ್ಮ ಮನೆಯನ್ನು ಅಭಿಮಾನಿಗಳಿಗೆ ತೋರಿಸೋಕೆ ಒಪ್ಪುವುದಿಲ್ಲ. ಆದರೆ, ಫರಾ ಖಾನ್ ಅವರು ಕರಣ್ ಜೋಹರ್ ಅವರ ಮನ ಒಲಿಸಿ ಅವರ ಬೆಡ್ರೂಂ ಹಾಗೂ ಬಟ್ಟೆ ಕಲೆಕ್ಷನ್ ತೋರಿಸಿದ್ದಾರೆ. ಕರಣ್ ಜೋಹರ್ ಅವರ ಬೆಡ್ರೂಂ ವಿಶಾಲವಾಗಿದೆ. ಆ ಬಳಿಕ ಅವರು ಹೋಗಿದ್ದು ಕಬೋರ್ಡ್ನತ್ತ.
View this post on Instagram
ಒಂದೊಂದೇ ಕಬೋರ್ಡ್ನ ತೆಗೆದು ತೋರಿಸಿದ್ದಾರೆ ಕರಣ್ ಜೋಹರ್. ಇದನ್ನು ನೋಡುತ್ತಿದ್ದಂತೆ ಫರಾ ಖಾನ್ಗೆ ಅಚ್ಚರಿ ಆಗಿದೆ. ಡ್ಯಾನ್ಸ್ ಮಾಡುವಾಗ ಹಾಕಿಕೊಳ್ಳುವ ಕಲರ್ ಕಲರ್ ಶರ್ಟ್ಗಳ ದೊಡ್ಡ ಕಲೆಕ್ಷನ್ ಕರಣ್ ಜೋಹರ್ ಕಬೋರ್ಡ್ನಲ್ಲಿ ಇದೆ. ಅಂದಹಾಗೆ, ಇದು ಕೇವಲ ಶರ್ಟ್ ಕಲೆಕ್ಷನ್. ಅವರು ಬ್ಲೇಜರ್ಗಳನ್ನು ಕೂಡ ಧರಿಸಿ ಮಿಂಚುತ್ತಾರೆ. ಇವುಗಳನ್ನು ಕರಣ್ ತೋರಿಸಿಲ್ಲ. ಕರಣ್ ಜೋಹರ್ ಬಳಿ ದೊಡ್ಡ ಮಟ್ಟದ ಶೂ ಕಲೆಕ್ಷನ್ ಕೂಡ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಅಂಬಾನಿ ಪ್ರೀ ವೆಡ್ಡಿಂಗ್ಗೆ ಕರಣ್ ಜೋಹರ್ ಗೈರಾಗಿದ್ದೇಕೆ? ಇಲ್ಲಿದೆ ಕಾರಣ
ಕರಣ್ ಜೋಹರ್ ನಿರ್ಮಾಣದ ‘ಯೋಧ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಈ ಸಿನಿಮಾ ಮೂರು ದಿನಕ್ಕೆ ಕೇವಲ 13 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ತಗ್ಗುವ ಸಾಧ್ಯತೆ ಇದೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಿರೋ ಈ ಚಿತ್ರ ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Mon, 18 March 24