100 ಕೋಟಿ ರೂಪಾಯಿ ಗಳಿಸಿದ ‘ಶೈತಾನ್’; ಅಜಯ್ ದೇವಗನ್ ಫುಲ್ ಖುಷ್
ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ‘ಶೈತಾನ್’ ಚಿತ್ರ ಅಬ್ಬರಿಸುತ್ತಿದೆ. 10 ದಿನಕ್ಕೆ ಈ ಸಿನಿಮಾದ ಒಟ್ಟು ಗಳಿಕೆ 106 ಕೋಟಿ ರೂಪಾಯಿ ಆಗಿದೆ. ಇನ್ನೂ ಹಲವು ಕಡೆಗಳಲ್ಲಿ ‘ಶೈತಾನ್’ ಚಿತ್ರ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಮುಖ್ಯ ಭೂಮಿಕೆ ನಿಭಾಯಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡಿರುವ ಅಜಯ್ ದೇವಗನ್ ಅವರು ಈ ಸಿನಿಮಾ ಮೂಲಕ ಗೆದ್ದಿದ್ದಾರೆ.
ನೋಡನೋಡುತ್ತಿದ್ದಂತೆಯೇ ‘ಶೈತಾನ್’ ಸಿನಿಮಾ (Shaitaan Movie) ಗೆದ್ದು ಬೀಗಿದೆ. ಹಾರರ್ ಕಥೆ ಇರುವ ಈ ಸಿನಿಮಾ ಈಗ 100 ಕೋಟಿ ರೂಪಾಯಿ ಗಡಿ ದಾಟಿದೆ. ಅಜಯ್ ದೇವಗನ್ (Ajay Devgn) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ಆರ್. ಮಾಧವನ್ ಅವರು ವಶೀಕರಣ ಮಾಡುವ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಜ್ಯೋತಿಕಾ ಅವರಿಗೂ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವಿದೆ. ವಶೀಕರಣಕ್ಕೆ ಒಳಗಾದ ಯುವತಿಯಾಗಿ ಜಾನಕಿ ಬೋಡಿವಾಲಾ ನಟಿಸಿದ್ದಾರೆ. ಈ ಎಲ್ಲ ಪ್ರತಿಭಾವಂತ ಕಲಾವಿದರ ಸಂಗಮದಿಂದ ‘ಶೈತಾನ್’ ಸಿನಿಮಾ ಹಿಟ್ ಆಗಿದೆ. ಚಿತ್ರದ ಕಲೆಕ್ಷನ್ (Shaitaan Box Office Collection) ವಿವರ ಇಲ್ಲಿದೆ.
‘ಶೈತಾನ್’ ಸಿನಿಮಾ ಮಾರ್ಚ್ 8ರಂದು ಬಿಡುಗಡೆ ಆಯಿತು. ಅದಕ್ಕೂ ಮುನ್ನ ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿತ್ತು. ವಿಕಾಸ್ ಬಹ್ಲ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಗುಜರಾತಿ ಭಾಷೆಯ ‘ವಶ್’ ಸಿನಿಮಾದ ಹಿಂದಿ ರಿಮೇಕ್. ಹಾಗಿದ್ದರೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. 10 ದಿನಗಳ ಕಾಲ ಯಶ್ವಿಯಾಗಿ ಪ್ರದರ್ಶನ ಕಂಡ ಈ ಚಿತ್ರಕ್ಕೆ ಒಟ್ಟು 106 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
ಮೊದಲ ದಿನ ‘ಶೈತಾನ್’ ಸಿನಿಮಾ 15.21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 2ನೇ ದಿನ 19.18 ಕೋಟಿ ರೂಪಾಯಿ ಹರಿದು ಬಂತು. ಮೂರನೇ ದಿನ 20.74 ಕೋಟಿ ರೂಪಾಯಿ ಬಾಚಿಕೊಂಡಿತು. 4ನೇ ದಿನ 7.81 ಕೋಟಿ ರೂಪಾಯಿ ಗಳಿಸಿತು. ಐದನೇ ದಿನ 6.57 ಕೋಟಿ ರೂ. ಕಲೆಕ್ಷನ್ ಆಯಿತು. 6ನೇ ದಿನ 6.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 7ನೇ ದಿನ 5.82 ಕೋಟಿ ಆದಾಯ ಬಂತು. 8ನೇ ದಿನ 5.12 ಕೋಟಿ ರೂಪಾಯಿ ಗಳಿಸಿತು. 9ನೇ ದಿನ 9.12 ಕೋಟಿ ರೂ. ಹಾಗೂ 10ನೇ ದಿನ 10.17 ಕೋಟಿ ರೂಪಾಯಿ ಗಳಿಸುವ ಮೂಲಕ ‘ಶೈತಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ.
#Shaitaan establishes its supremacy in Weekend 2, posts excellent numbers on [second] Sat – Sun, emerges a mighty opponent to new releases… Should continue to lead on weekdays as well.
[Week 2] Fri 5.12 cr, Sat 9.12 cr, Sun 10.17 cr. Total: ₹ 106.01 cr. #India biz. #Boxoffice… pic.twitter.com/x75tXG78nD
— taran adarsh (@taran_adarsh) March 18, 2024
‘ಶೈತಾನ್’ ತೆರೆಕಂಡ ಒಂದು ವಾರದ ಬಳಿಕ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಹಾಗೂ ‘ಯೋಧ’ ಸಿನಿಮಾಗಳು (ಮಾರ್ಚ್ 15) ಬಿಡುಗಡೆ ಆದವು. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಗಳಿಗೂ ‘ಶೈತಾನ್’ ಚಿತ್ರ ಸಖತ್ ಪೈಪೋಟಿ ನೀಡುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹಾರರ್ ಇಷ್ಟಪಡುವ ಪ್ರೇಕ್ಷಕರಿಗೆ ‘ಶೈತಾನ್’ ಚಿತ್ರದಲ್ಲಿ ಭರ್ಜರಿ ಮನರಂಜನೆ ಸಿಗುತ್ತಿದೆ. ಈ ಗೆಲುವಿನಿಂದ ಅಜಯ್ ದೇವಗನ್ ಫುಲ್ ಖುಷ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.