ಕರೀನಾ ಕಪೂರ್ ಡಯಟ್ ಹೇಗಿರುತ್ತೆ? ಅವರು ಏನನ್ನು ತಿನ್ನುತ್ತಾರೆ?

ಕರೀನಾ ಕಪೂರ್ ಅವರು ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಖಿಚಡಿ ಮತ್ತು ತುಪ್ಪವನ್ನು ನೆಚ್ಚಿನ ಆಹಾರವಾಗಿ ಹೊಂದಿದ್ದಾರೆ. ಬೆಳಗಿನ ಉಪಾಹಾರದಲ್ಲಿ ಪರಾಠ ಅಥವಾ ಪೋಹಾ, ಮಧ್ಯಾಹ್ನ ಅನ್ನ-ದಾಲ್, ಸಂಜೆ ಹಣ್ಣಿನ ಶೇಕ್ ಮತ್ತು ರಾತ್ರಿಯ ಊಟದಲ್ಲಿ ಖಿಚಡಿ ಸೇವಿಸುತ್ತಾರೆ. ಯೋಗ ಕೂಡ ಅವರ ಫಿಟ್‌ನೆಸ್‌ಗೆ ಪ್ರಮುಖ ಕಾರಣ.

ಕರೀನಾ ಕಪೂರ್ ಡಯಟ್ ಹೇಗಿರುತ್ತೆ? ಅವರು ಏನನ್ನು ತಿನ್ನುತ್ತಾರೆ?
ಕರೀನಾ
Edited By:

Updated on: Jul 17, 2025 | 8:07 AM

ಕರೀನಾ ಕಪೂರ್ ಖಾನ್ (Kareena Kapoor) ಬಾಲಿವುಡ್‌ನಲ್ಲಿ ತಮ್ಮ ನಟನೆಗೆ ಮಾತ್ರವಲ್ಲದೆ ಫಿಟ್‌ನೆಸ್‌ಗೂ ಹೆಸರುವಾಸಿಯಾಗಿದ್ದಾರೆ. ಕರೀನಾ ತಾಯಿಯಾದ ನಂತರವೂ ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಕರೀನಾ ಅವರನ್ನು ನೋಡಿದ ಅಭಿಮಾನಿಗಳು ಕರೀನಾ ಹೇಗೆ ಇಷ್ಟು ಫಿಟ್‌ ಆಗಿರುತ್ತಾರೆ ಎಂದು ಆಶ್ಚರ್ಯ ಪಡುತ್ತಾರೆ. ಕರೀನಾ ಯೋಗ ಅಥವಾ ವ್ಯಾಯಾಮವನ್ನೂ ಮಾಡುತ್ತಾರೆ ಮತ್ತು ತನ್ನ ಆಹಾರಕ್ರಮವನ್ನು ಸಹ ನೋಡಿಕೊಳ್ಳುತ್ತಾರೆ. ಅವರು ಯೋಗ ಮತ್ತು ವ್ಯಾಯಾಮ ಮಾಡುವ ಅನೇಕ ವೀಡಿಯೊಗಳು ಸಹ ವೈರಲ್ ಆಗುತ್ತವೆ.

ಸಂದರ್ಶನವೊಂದರಲ್ಲಿ, ಕರೀನಾ ಅವರ ಡಯಟ್ ತಜ್ಞೆ ರುಜುತಾ ದಿವೇಕರ್ ತಮ್ಮ ಆಹಾರ ಪದ್ಧತಿಯ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕರೀನಾ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನು ತಿನ್ನುತ್ತಾರೆ ಎಂಬುದನ್ನು ರುಜುತಾ ಹೇಳಿದರು. ಕರೀನಾ 2009ರಿಂದ ವಿಶೇಷ ಆಹಾರವನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಕರೀನಾ ಕಪೂರ್ ಅವರ ಆಹಾರ ಪದ್ಧತಿ ಏನು?

ಬೆಳಗಿನ ಉಪಾಹಾರಕ್ಕೆ ಮೊದಲು ಬಾದಾಮಿ, ಅಂಜೂರ ಮತ್ತು ಒಣದ್ರಾಕ್ಷಿಗಳಂತಹ ಒಣ ಹಣ್ಣುಗಳನ್ನು ಅವರು ತಿನ್ನುತ್ತಾರೆ. ಬೆಳಗಿನ ಉಪಾಹಾರಕ್ಕೆ ಪರಾಠ ಅಥವಾ ಪೋಹಾ ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ದಾಲ್ ಮತ್ತು ಅನ್ನ ಅಥವಾ ಚೀಸ್ ಟೋಸ್ಟ್ ತಿನ್ನುತ್ತಾರೆ. ಸಂಜೆ ಹಣ್ಣಿನ ಶೇಕ್, ಭೋಜನಕ್ಕೆ ತುಪ್ಪದೊಂದಿಗೆ ಖಿಚಡಿ ಅಥವಾ ಪಲಾವ್ ತಿನ್ನುತ್ತಾರೆ. ಕರೀನಾ ವಾರಕ್ಕೆ ನಾಲ್ಕು ಬಾರಿ ಕಿಚಡಿ ಮತ್ತು ತುಪ್ಪ ತಿನ್ನುತ್ತಾರೆ. ಅದು ಅವರ ನೆಚ್ಚಿನ ಖಾದ್ಯ.

ಇದನ್ನೂ ಓದಿ
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
ಪವನ್ ಕಲ್ಯಾಣ್ ಚಿತ್ರ ‘ಹರಿ ಹರ ವೀರ ಮಲ್ಲು’ಗೆ ಶುರುವಾಗಿದೆ ಕರ್ನಾಟಕದ ಭಯ
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ಇದನ್ನೂ ಓದಿ:  ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದರು ನಟಿ ಕರೀನಾ ಕಪೂರ್

ಅಡುಗೆಯವರು 10ರಿಂದ 15 ದಿನಗಳವರೆಗೆ ಒಂದೇ ರೀತಿಯ ಆಹಾರ ಮಾಡಿ ಬೇಸರಗೊಳ್ಳುತ್ತಾರಂತೆ. ಅದು ಕೂಡ ದಾಲ್ ರೈಸ್ ಅಥವಾ ಮೊಸರು ಅನ್ನ. ‘ವಾರದಲ್ಲಿ 5 ದಿನ ಖಿಚಡಿ ತಿಂದರೂ ನಾನು ಸಂತೋಷವಾಗಿರಬಹುದು. ಒಂದು ಚಮಚ ತುಪ್ಪದೊಂದಿಗೆ ತಿಂದ ನಂತರ ನನಗೆ ಸಂತೋಷವಾಗುತ್ತದೆ’ ಎಂದಿದ್ದರು.

ಕರೀನಾ ಯೋಗ ಕೂಡ ಮಾಡುತ್ತಾರೆ..

ಕರೀನಾ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ಯೋಗ ಮಾಡುತ್ತಾರೆ. ಯೋಗ ಕರೀನಾ ಜೀವನದ ಒಂದು ಭಾಗ. ಅವರು ವಿವಿಧ ರೀತಿಯ ಆಸನಗಳನ್ನು ಮಾಡಲು ಇಷ್ಟಪಡುತ್ತಾರೆ. ಕರೀನಾ 10 ವರ್ಷಗಳಿಂದ ಯೋಗ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.