ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಡೇಟಿಂಗ್: ಅನುಮಾನ ಹೆಚ್ಚಿಸಿದ ನಟನ ತಾಯಿಯ ಹೇಳಿಕೆ
Karthik Aryan-Sreeleela: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಒಟ್ಟಿಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಶ್ರೀಲೀಲಾ, ಕಾರ್ತಿಕ್ ಆರ್ಯನ್ ಮನೆಗೆ ಹೋಗಿ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಸಹ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಕಾರ್ತಿಕ್ ಆರ್ಯನ್ ತಾಯಿ, ತಮ್ಮ ಪುತ್ರ ಹಾಗೂ ಶ್ರೀಲೀಲಾ ಪ್ರೇಮದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿ ಚರ್ಚೆ ಆಗುತ್ತಾ ಇದೆ. ಇವರು ಕೆಲವು ಸಮಯದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಡೇಟಿಂಗ್ ಅನುಮಾನವನ್ನು ಹೆಚ್ಚಿಸಿದೆ. ಆದರೆ, ಈವರೆಗೆ ಕಾರ್ತಿಕ್ ಆರ್ಯನ್ ಅವರಾಗಲೀ, ಶ್ರೀಲೀಲಾ ಅವರಾಗಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವ ಕೆಲಸಕ್ಕೆ ಹೋಗಿಲ್ಲ. ಈ ಮಧ್ಯೆ ಕಾರ್ತಿಕ್ ಆರ್ಯನ್ ತಾಯಿ ನೀಡಿರುವ ಹೇಳಿಕೆಯು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ಅವರು ಇತ್ತೀಚೆಗೆ ‘ಐಫಾ ಅವಾರ್ಡ್ಸ್ 2025’ ವೇದಿಕೆ ಮೇಲೆ ಬಂದಿದ್ದರು. ಈ ವೇಳೆ ಅವರಿಗೆ ಮಾಧ್ಯಮಗಳಿಂದ ಕೆಲವು ಪ್ರಶ್ನೆಗಳು ಎದುರಾದವರು. ಭಾವಿ ಸೊಸೆಯ ಮೇಲೆ ಇರುವ ನಿರೀಕ್ಷೆಗಳು ಏನು ಎಂಬುದನ್ನು ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಮಗನ ಹೆಂಡತಿ ಒಳ್ಳೆಯ ಡಾಕ್ಟರ್ ಆಗಿರಬೇಕು. ಇದು ನಮ್ಮ ಕುಟುಂಬದ ಬೇಡಿಕೆ’ ಎಂದು ಅವರು ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಶ್ರೀಲೀಲಾ ಅವರು ಎಂಬಿಬಿಎಸ್ ಓದುತ್ತಿದ್ದಾರೆ. ಹೀಗಾಗಿ, ಶ್ರೀಲೀಲಾ ವಿಚಾರದಲ್ಲೇ ಕಾರ್ತಿಕ್ ಆರ್ಯನ್ ಅವರ ತಾಯಿ ಈ ರೀತಿಯಲ್ಲಿ ಹೇಳಿದರೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸದ್ಯ ಕಾರ್ತಿಕ್ ಆರ್ಯನ್ ತಾಯಿ ನೀಡಿದ ಹೇಳಿಕೆಯು ಎಲ್ಲ ಕಡೆಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಸಾಕಷ್ಟು ಸುತ್ತಾಟ ನಡೆಸುತ್ತಾ ಇದ್ದು, ಇತ್ತೀಚೆಗೆ ಇವರು ಒಟ್ಟಾಗಿ ಪಾರ್ಟಿ ಕೂಡ ಮಾಡಿದ್ದರು. ಅದೂ ಕಾರ್ತಿಕ್ ಆರ್ಯನ್ ಅವರ ನಿವಾಸದಲ್ಲೇ. ಈ ಎಲ್ಲಾ ವಿಚಾರಗಳು ಇವರ ನಡುವಿನ ಡೇಟಿಂಗ್ ವದಂತಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ:ಬಾಲಿವುಡ್ ನಟನ ಮನೆಯಲ್ಲಿ ಹಾಡಿ ಕುಣಿದ ನಟಿ ಶ್ರೀಲೀಲಾ
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಅನುರಾಗ್ ಬಸು ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಬಾಲಿವುಡ್ನ ಸಿನಿಮಾ. ಕಾರ್ತಿಕ್ ಹಾಗೂ ಶ್ರೀಲೀಲಾ ಇದೇ ಮೊದಲ ಬಾರಿ ಒಂದಾಗುತ್ತಿದ್ದಾರೆ. ಅದಕ್ಕೂ ಮೊದಲೇ ಇವರ ಮಧ್ಯೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಮೂಡಿದೆ. ಇವರ ಮಧ್ಯೆ ಮೂಡಿರುವ ಪ್ರೀತಿಯಿಂದ ತೆರೆಮೇಲಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ