Shehzada: ಹೀನಾಯ ಸ್ಥಿತಿಯಲ್ಲಿ ‘ಶೆಹಜಾದಾ’ ಕಲೆಕ್ಷನ್​; ಶಿವರಾತ್ರಿ ಹಬ್ಬದಲ್ಲೂ ಕಾರ್ತಿಕ್​ ಆರ್ಯನ್​ಗೆ ನಿರಾಸೆ

|

Updated on: Feb 19, 2023 | 5:51 PM

Shehzada Collection | Kartik Aaryan: ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಉತ್ತಮ ಕಲೆಕ್ಷನ್​ ಆಗುತ್ತದೆ. ಆದರೆ ‘ಶೆಹಜಾದಾ’ ಚಿತ್ರದ ವಿಚಾರದಲ್ಲಿ ಈ ಸೂತ್ರ ವರ್ಕೌಟ್​ ಆಗಿಲ್ಲ.

Shehzada: ಹೀನಾಯ ಸ್ಥಿತಿಯಲ್ಲಿ ‘ಶೆಹಜಾದಾ’ ಕಲೆಕ್ಷನ್​; ಶಿವರಾತ್ರಿ ಹಬ್ಬದಲ್ಲೂ ಕಾರ್ತಿಕ್​ ಆರ್ಯನ್​ಗೆ ನಿರಾಸೆ
ಕಾರ್ತಿಕ್ ಆರ್ಯನ್
Follow us on

ನಟ ಕಾರ್ತಿಕ್​ ಆರ್ಯನ್ (Kartik Aaryan)​ ಅವರು ಈ ವರ್ಷ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಅವರು ನಟಿಸಿರುವ ‘ಶೆಹಜಾದಾ’ ಸಿನಿಮಾ ಫೆಬ್ರವರಿ 17ರಂದು ಬಿಡುಗಡೆ ಆಯಿತು. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಈ ಸಿನಿಮಾ ಸೋತಿದೆ. ಮೊದಲ ದಿನ ‘ಶೆಹಜಾದಾ’ (Shehzada Movie) ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹ ಆಗಿದ್ದು ಕೇವಲ 6 ಕೋಟಿ ರೂಪಾಯಿ. ಎರಡನೇ ದಿನ (ಫೆ.18) ಬರೀ 6.65 ಕೋಟಿ ರೂಪಾಯಿ ಕಲೆಕ್ಷನ್​ (Shehzada Box Office Collection) ಆಗಿದೆ. ವೀಕೆಂಡ್​ನಲ್ಲಿ ಇಷ್ಟು ಕಡಿಮೆ ಆದಾಯ ಬಂದರೆ ಸೋಮವಾರದ ಹೊತ್ತಿಗೆ ಈ ಸಿನಿಮಾ ಮಕಾಡೆ ಮಲಗುವುದು ಖಚಿತ ಎಂದು ಟ್ರೇಡ್​ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​​ಗೆ ಜೋಡಿಯಾಗಿ ಕೃತಿ ಸನೋನ್​ ನಟಿಸಿದ್ದಾರೆ.

ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾದರೆ ಉತ್ತಮ ಕಲೆಕ್ಷನ್​ ಆಗುತ್ತದೆ. ಅದೇ ಉದ್ದೇಶದಿಂದ ಶಿವರಾತ್ರಿ ಪ್ರಯುಕ್ತ ‘ಶೆಹಜಾದಾ’ ಸಿನಿಮಾವನ್ನು ತೆರೆ ಕಾಣಿಸಲಾಯಿತು. ಶನಿವಾರ (ಫೆ.18) ಹಬ್ಬ ಮತ್ತು ವೀಕೆಂಡ್​ ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿಲ್ಲ. ಇದರಿಂದ ಕಾರ್ತಿಕ್​ ಆರ್ಯನ್​ ಅವರ ಚಿತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಇದನ್ನೂ ಓದಿ
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಶೆಹಜಾದಾ’ ಸೋಲಿಗೆ ಕಾರಣ ಏನು?

ಕಳೆದ ವರ್ಷ ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಭುಲಯ್ಯ 2’ ಸಿನಿಮಾ ಮಾಡಿ ಗೆದ್ದಿದ್ದರು. ಆದರೆ ಈ ವರ್ಷ ಆರಂಭದಲ್ಲೇ ಅವರು ಮುಗ್ಗರಿಸುವಂತಾಗಿದೆ. ಇದಕ್ಕೆ ಕಾರಣ ಆಗಿದ್ದು ರಿಮೇಕ್. ಹೌದು, ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಶೆಹಜಾದಾ’ ಸಿನಿಮಾ ಮೂಡಿಬಂದಿದೆ. ಮೂಲ ಸಿನಿಮಾವನ್ನು ಜನರು ಈಗಾಗಲೇ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ನೋಡಿರುವುದರಿಂದ ಹಿಂದಿ ರಿಮೇಕ್​ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸಿಲ್ಲ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಫೈಟ್​ ಮಾಡಲು ಹೋಗಿ ಪೆಟ್ಟು ತಿಂದ ಕಾರ್ತಿಕ್​ ಆರ್ಯನ್​:

ನಟ ಕಾರ್ತಿಕ್​ ಆರ್ಯನ್ ಅವರು ಈವರೆಗೂ ಲವರ್​ ಬಾಯ್​ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಶೆಹಜಾದಾ’ ಸಿನಿಮಾ ಮೂಲಕ ಅವರು ಆ್ಯಕ್ಷನ್​ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಅವರು ಭರ್ಜರಿಯಾಗಿ ಫೈಟ್​ ಮಾಡಿದ್ದಾರೆ. ಆದರೂ ಕೂಡ ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗಿಲ್ಲ. ಆ್ಯಕ್ಷನ್​ ಹೀರೋ ಗೆಟಪ್​ನಲ್ಲಿ ಅವರನ್ನು ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಹಾಗಾಗಿ ಫೈಟ್​ ಮಾಡಲು ಹೋಗಿ ಅವರು ಪೆಟ್ಟು ತಿಂದಂತಾಗಿದೆ.

ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಇಂದಿಗೂ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಹಾಲಿವುಡ್​ ಸಿನಿಮಾಗಳು ಕೂಡ ಬಿಡುಗಡೆಯಾಗಿ ಪೈಪೋಟಿ ನೀಡುತ್ತಿವೆ. ಈ ಎಲ್ಲ ಚಿತ್ರಗಳ ನಡುವೆ ಸ್ಪರ್ಧಿಸುವಲ್ಲಿ ‘ಶೆಹಜಾದಾ’ ಸಿನಿಮಾ ವಿಫಲವಾಗಿದೆ. ಈ ಚಿತ್ರಕ್ಕೆ ರೋಹಿತ್​ ಧವನ್​ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:51 pm, Sun, 19 February 23