‘ಭೂಲ್ ಭುಲಯ್ಯ 2’ (Bhool Bhulaiyaa 2) ಚಿತ್ರವು ಈ ವರ್ಷದ ಬಾಲಿವುಡ್ನ ಹಿಟ್ ಚಿತ್ರಗಳಲ್ಲೊಂದಾಗಿದೆ. 2022ರಲ್ಲಿ ಬಾಲಿವುಡ್ನಲ್ಲಿ ಗೆಲುವು ಕಂಡ ಚಿತ್ರಗಳ ಸಂಖ್ಯೆ ತೀರಾ ಬೆರಳಣಿಕೆಯಷ್ಟು. ಅದರಲ್ಲಿ ಕಾರ್ತಿಕ್ ಆರ್ಯನ್ (Kartik Aaryan), ಕಿಯಾರಾ ಅಡ್ವಾನಿ (Kiara Advani), ಟಬು ಮೊದಲಾದವರು ನಟಿಸಿರುವ ‘ಭೂಲ್ ಭುಲಯ್ಯ 2’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಹಾರರ್ ಕಾಮಿಡಿ ಜಾನರ್ನ ಈ ಚಿತ್ರ ಮೇ 20ರಂದು ತೆರೆಕಂಡಿತ್ತು. ಬಿಡುಗಡೆಯಾದ ಐದು ದಿನಗಳ ನಂತರವೂ ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ವಿಶೇಷವೆಂದರೆ ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಮೊದಲ ವಾರದಲ್ಲಿ ಸುಮಾರು 92 ಕೋಟಿ ರೂಗಳನ್ನು ಗಳಿಸುವ ನಿರೀಕ್ಷೆ ಇದೆ. ಹಾಗಾದರೆ ಈ ಸಿನಿಮಾದ ಇದುವರೆಗಿನ ಕಲೆಕ್ಷನ್ ಎಷ್ಟು? ಉತ್ತರ ಇಲ್ಲಿದೆ.
ಬಾಕ್ಸಾಫೀಸ್ ವಿಶ್ಲೇಶಕ ತರಣ್ ಆದರ್ಶ್ ಚಿತ್ರದ ಗಳಿಕೆಯ ರಿಪೋರ್ಟ್ ಹಂಚಿಕೊಂಡಿದ್ದಾರೆ. ಮೊದಲ ವಾರಾಂತ್ಯದ ವೇಳೆಗೆ ಚಿತ್ರವು 56 ಕೋಟಿ ರೂ ಗಳಿಸಿತ್ತು. ನಂತರದಲ್ಲಿ ಸೋಮವಾರ 10.75 ಕೋಟಿ ರೂ, ಮಂಗಳವಾರ 9.56 ಕೋಟಿ ರೂ ಹಾಗೂ ಬುಧವಾರ 8.51 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿದ್ದು ಒಟ್ಟಾರೆ 84.78 ಕೋಟಿ ರೂ ಗಳಿಸಿದೆ.
ಈ ಮೂಲಕ 2022ರಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಆರನೇ ದಿನದಲ್ಲಿ ಅತ್ಯಂತ ಹೆಚ್ಚು ಗಳಿಸಿದ ಸಿನಿಮಾದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ ‘ಭೂಲ್ ಭುಲಯ್ಯ 2’. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ 5ನೇ ದಿನ 19.05 ಕೋಟಿ ರೂ ಬಾಚಿಕೊಂಡಿತ್ತು. ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ 6.21 ಕೋಟಿ ರೂ ಗಳಿಸಿತ್ತು.
#BhoolBhulaiyaa2 continues to spell magic… SUPERB TRENDING on weekdays… This one is not going to slow down soon… All set for ₹ 92 cr+ total in *Week 1*… Fri 14.11 cr, Sat 18.34 cr, Sun 23.51 cr, Mon 10.75 cr, Tue 9.56 cr, Wed 8.51 cr. Total: ₹ 84.78 cr. #India biz. pic.twitter.com/9mNHQ5X3sT
— taran adarsh (@taran_adarsh) May 26, 2022
ರಿಲೀಸ್ ಆದ ನಂತರದ ಮೊದಲ ಬುಧವಾರದಲ್ಲಿ ಕೆಜಿಎಫ್ ಚಾಪ್ಟರ್ 2 ಎಷ್ಟು ಗಳಿಸಿತ್ತು?
ಈ ವರ್ಷ ಬಾಲಿವುಡ್ ಚಿತ್ರಗಳು ಹೆಚ್ಚು ಸದ್ದು ಮಾಡಿಲ್ಲ. ಇದುವರೆಗಿನ ಚಿತ್ರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’, ‘ಭೂಲ್ ಭುಲಯ್ಯ 2’ ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ ಮಾತ್ರ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿವೆ. ಹಿಂದಿ ಪ್ರೇಕ್ಷಕರು ಬಾಲಿವುಡ್ ಚಿತ್ರಗಳಿಗಿಂತ ದಕ್ಷಿಣದ ಚಿತ್ರಗಳನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಿಂದಾಗಿಯೇ ‘ಕೆಜಿಎಫ್ ಚಾಪ್ಟರ್ 2’, ‘ಆರ್ಆರ್ಆರ್’, ‘ಪುಷ್ಪ: ದಿ ರೈಸ್’ ಮೊದಲಾದ ಚಿತ್ರಗಳು ದಾಖಲೆಯ ಮೊತ್ತವನ್ನು ಗಳಿಸಿವೆ.
ಬಿಡುಗಡೆಯಾದ ನಂತರದ ಮೊದಲ ಬುಧವಾರದಲ್ಲಿ ‘ಭೂಲ್ ಭುಲಯ್ಯ 2’ 8.51 ಕೋಟಿ ರೂ ಗಳಿಸಿದ್ದರೆ, ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಅವತರಣಿಕೆ 16.35 ಕೋಟಿ ರೂ ಬಾಚಿಕೊಂಡಿತ್ತು. (‘ಕೆಜಿಎಫ್ 2’ ಗುರುವಾರ ತೆರೆಕಂಡಿದ್ದರೆ, ‘ಭೂಲ್ ಭುಲಯ್ಯ 2’ ಶುಕ್ರವಾರ ತೆರೆಕಂಡಿತ್ತು). ಹಿಂದಿಯ ‘ಆರ್ಆರ್ಆರ್’ ಮೊದಲ ಬುಧವಾರದಂದು 13 ಕೋಟಿ ರೂ ಗಳಿಸಿತ್ತು.
ಅನೀಸ್ ಬಜ್ಮಿ ನಿರ್ದೇಶನದ ಈ ಚಿತ್ರ 2007ರಲ್ಲಿ ತೆರೆಕಂಡಿದ್ದ ‘ಭೂಲ್ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಿಯದರ್ಶನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Thu, 26 May 22