ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಆಪರೇಷನ್ ಸಿಂಧೂರ್’ ಸಿನಿಮಾಗೆ ಕಾರ್ತಿಕ್ ಆರ್ಯನ್ ಹೀರೋ

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ಆಪರೇಷನ್ ಸಿಂಧೂರ್’ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಸೇನೆಯ ನೈಜ ಮಿಲಿಟರಿ ಕಾರ್ಯಾಚರಣೆಯ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ಟಿ-ಸಿರೀಸ್ ಹಾಗೂ ಐ ಆಮ್ ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಆಪರೇಷನ್ ಸಿಂಧೂರ್’ ಸಿನಿಮಾಗೆ ಕಾರ್ತಿಕ್ ಆರ್ಯನ್ ಹೀರೋ
ವಿವೇಕ್-ಕಾರ್ತಿಕ್
Edited By:

Updated on: Nov 04, 2026 | 7:53 AM

ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ‘ಆಪರೇಷನ್ ಸಿಂಧೂರ್’ ಸಿನಿಮಾಗೆ ಕಾರ್ತಿಕ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ‘ವರೈಟಿ ಇಂಡಿಯಾ’ ವರದಿಯ ಪ್ರಕಾರ ಈ ಬಿಗ್ ಬಜೆಟ್ ಸಿನಿಮಾ ಅಧಿಕೃತವಾಗಿ ಕೈಗೂಡಿದೆ. ಭಾರತೀಯ ಸೇನೆಯ ಸಾಹಸಗಾಥೆಯನ್ನು ಒಳಗೊಂಡಿರುವ ಈ ಚಿತ್ರವು ಈಗಿನಿಂದಲೇ ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಈ ಸಿನಿಮಾವನ್ನು ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ‘ಟೈನಿ’ ಧಿಲ್ಲೋನ್ ಬರೆದಿರುವ ಪುಸ್ತಕದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ‘ಆಪರೇಷನ್ ಸಿಂಧೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್ಸೈಡ್ ಪಾಕಿಸ್ತಾನ್’ ಎನ್ನುವುದು ಈ ಪುಸ್ತಕದ ಹೆಸರು. ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ನಡೆದ ರಹಸ್ಯ ಮಿಲಿಟರಿ ಕಾರ್ಯಾಚರಣೆಯ ನೈಜ ಘಟನೆಗಳನ್ನು ಈ ಸಿನಿಮಾ ಒಳಗೊಂಡಿರಲಿದೆ. ಈ ಚಿತ್ರವು ಭದ್ರತಾ ಚಿತ್ರಣವನ್ನೇ ಬದಲಿಸಿದ ಮಹತ್ವದ ಕಥೆಯನ್ನು ಆಧರಿಸಿದೆ.

ಟಿ-ಸಿರೀಸ್ ಸಂಸ್ಥೆಯ ಭೂಷಣ್ ಕುಮಾರ್ ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ‘ಐ ಆಮ್ ಬುದ್ಧ ಪ್ರೊಡಕ್ಷನ್ಸ್’ ಬ್ಯಾನರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಕಾರ್ತಿಕ್ ಆರ್ಯನ್ ‘ಕ್ಯಾಪ್ಟನ್ ಇಂಡಿಯಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಯೆಮೆನ್ ದೇಶದಲ್ಲಿ ನಡೆದ ಹೌತಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಪ್ರಾಜೆಕ್ಟ್ ಮುಗಿದ ತಕ್ಷಣ ಕಾರ್ತಿಕ್ ‘ಆಪರೇಷನ್ ಸಿಂದೂರ್’ ಸೆಟ್‌ಗೆ ಎಂಟ್ರಿ ಕೊಡಲಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತೀಯ ಸೇನೆ ತೆಗೆದುಕೊಂಡ ನಿರ್ಣಾಯಕ ಕ್ರಮಗಳೇ ಈ ಸಿನಿಮಾಗೆ ಪ್ರಮುಖ ಪ್ರೇರಣೆಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಸಹಯೋಗದೊಂದಿಗೆ ಈ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಕೇವಲ ಶಬ್ದ ಮಾಡುವುದಕ್ಕಾಗಿ ಈ ಸಿನಿಮಾ ಮಾಡುತ್ತಿಲ್ಲ. ನಿಜವಾದ ಸತ್ಯ ಸಂಗತಿಗಳು ಹಾಗೂ ಸ್ಪಷ್ಟತೆಯೊಂದಿಗೆ ಭಾರತೀಯ ಸೇನೆಯ ನೈಜ ಸಾಹಸವನ್ನು ಬೆಳ್ಳಿಪರದೆಯ ಮೇಲೆ ತೋರಿಸುವುದು ನಮ ಉದ್ದೇಶ ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ತಂದು ಗಣಪತಿ ಪಾದಕ್ಕೆ ಅರ್ಪಿಸಿದ ನಟ ಕಾರ್ತಿಕ್ ಆರ್ಯನ್

ಮತ್ತೊಂದೆಡೆ ಕಾರ್ತಿಕ್ ಆರ್ಯನ್ ನಟನೆಯ ‘ನಾಗ್​ಝಿಲ್ಲಾ’ ಸಿನಿಮಾ 2027ರ ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರಣ್ ಜೋಹರ್ ಮತ್ತು ಮಹಾವೀರ್ ಜೈನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಫುಕೈ’ ಸಿನಿಮಾ ಖ್ಯಾತಿಯ ಮೃಗ್ದೀಪ್ ಸಿಂಗ್ ಲಂಬಾ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ನಟಿ ಪ್ರೀತಿ ಮುಖುಂದನ್ ಈ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us