Katrina Kaif: ಕತ್ರಿನಾ ಕೈಫ್ ಚಿತ್ರರಂಗಕ್ಕೆ ಬಂದು 20 ವರ್ಷ; ನಟಿಯ ಒಟ್ಟೂ ಆಸ್ತಿ ಎಷ್ಟು?

ಕತ್ರಿನಾ ಕೈಫ್ ಅವರ ಆಸ್ತಿ ಪ್ರತಿವರ್ಷ ಶೇ. 13 ಹೆಚ್ಚುತ್ತಿದೆ. ಅವರ ಆಸ್ತಿ 263 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಸಿನಿಮಾಗೆ 12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಹಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಪ್ರತಿ ವರ್ಷ ಇವುಗಳಿಂದ ಸರಿಸುಮಾರು 7 ಕೋಟಿ ರೂಪಾಯಿ ಸಿಗುತ್ತಿದೆ.

Katrina Kaif: ಕತ್ರಿನಾ ಕೈಫ್ ಚಿತ್ರರಂಗಕ್ಕೆ ಬಂದು 20 ವರ್ಷ; ನಟಿಯ ಒಟ್ಟೂ ಆಸ್ತಿ ಎಷ್ಟು?
ಕತ್ರಿನಾ
Updated By: ರಾಜೇಶ್ ದುಗ್ಗುಮನೆ

Updated on: Sep 14, 2023 | 12:01 PM

ಕತ್ರಿನಾ ಕೈಫ್ (Katrina Kaif) ಅವರು ಚಿತ್ರರಂಗಕ್ಕೆ ಬಂದು 20 ವರ್ಷ ಕಳೆದಿದೆ. ‘ಬೂಮ್’ ಅವರ ನಟನೆಯ ಮೊದಲ ಸಿನಿಮಾ. ಅಮಿತಾಭ್ ಬಚ್ಚನ್, ಜಾಕಿ ಶ್ರಾಫ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಫ್ಲಾಪ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ. ಆ ಬಳಿಕ ತೆಲುಗಿಗೂ ಹೋಗಿ ಬಂದರು. ಸಲ್ಮಾನ್ ಖಾನ್ ನಟನೆಯ ‘ಮೇ ಪ್ಯಾರ್ ಕ್ಯೂ ಕಿಯಾ’ ಸಿನಿಮಾದಲ್ಲಿ ನಟಿಸಿ ಕತ್ರಿನಾ ಫೇಮಸ್ ಆದರು. ಸಲ್ಮಾನ್ ಖಾನ್ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದರು. ಆ ಬಳಿಕ ಕತ್ರಿನಾ ತಿರುಗಿ ನೋಡಿಲ್ಲ. ಅವರ ಆಸ್ತಿ ಎಷ್ಟು ಎಂಬಿತ್ಯಾದಿ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ಕತ್ರಿನಾ ಕೈಫ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ನ್ಯೂಯಾರ್ಕ್​’ (2009), ‘ನಮಸ್ತೇ ಲಂಡನ್’ (2007), ‘ಮೇರೆ ಬ್ರದರ್ ಕಿ ದುಲ್ಹನ್​’ (2011), ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ (2009), ‘ರಾಜನೀತಿ’ (2010), ‘ಜಿಂದಗಿ ನಾ ಮಿಲೇಗಿ ದೋಬಾರ’ (2011), ‘ಏಕ್ ಥಾ ಟೈಗರ್’ (2012) ಮೊದಲಾದ ಸಿನಿಮಾಗಳು ಗಮನ ಸೆಳೆದಿವೆ. ಅವರು ಬಾಲಿವುಡ್​ನ ಮೋಸ್ಟ್​ ಸಕಸ್ಸ್​ಫುಲ್ ನಟಿ ಎನಿಸಿಕೊಂಡಿದ್ದಾರೆ.

ಕತ್ರಿನಾ ಕೈಫ್ ಅವರ ಆಸ್ತಿ ಪ್ರತಿವರ್ಷ ಶೇ. 13 ಹೆಚ್ಚುತ್ತಿದೆ. 2019ರಲ್ಲಿ ಫೋರ್ಬ್ಸ್ ಇಂಡಿಯಾ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿಯರ ಪಟ್ಟಿ ರಿಲೀಸ್ ಮಾಡಿತ್ತು. ಈ ಸಾಲಿನಲ್ಲಿ ಕತ್ರಿನಾ ಕೂಡ ಇದ್ದರು. ಅವರ ಆಸ್ತಿ 263 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಸಿನಿಮಾಗೆ 12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಸ್ಲೈಸ್, ನಕ್ಷತ್ರ, ಲಕ್ಸ್, ಲ್ಯಾಕ್ಮಿ, ಒಪ್ಪೋ ಮೊದಲಾದ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಪ್ರತಿ ವರ್ಷ ಇವುಗಳಿಂದ ಸರಿಸುಮಾರು 7 ಕೋಟಿ ರೂಪಾಯಿ ಸಿಗುತ್ತಿದೆ.

ಕತ್ರಿನಾ ಕೈಫ್ ಅವರು ‘ಕಾಯ್ ಬ್ಯೂಟಿ 2019’ ಹೆಸರಿನ ಬ್ರ್ಯಾಂಡ್ ಆರಂಭಿಸಿದ್ದಾರೆ. ಇದು ಬ್ಯೂಟಿ ಬ್ರ್ಯಾಂಡ್. ಇದರಿಂದಲೂ ಕತ್ರಿನಾಗೆ ಹಣ ಬರುತ್ತದೆ. ದೇಶಾದ್ಯಂತ ಈ ಬ್ರ್ಯಾಂಡ್ ಚಾಲ್ತಿಯಲ್ಲಿದೆ. ಪ್ರತಿ ವರ್ಷ ಈ ಬ್ರ್ಯಾಂಡ್ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತದೆ. ಈ ಮೂಲಕ ಕತ್ರಿನಾ ಯಶಸ್ವಿ ಉದ್ಯಮಿ ಕೂಡ ಹೌದು.

ಇದನ್ನೂ ಓದಿ: Katrina Kaif: ಬರ್ತ್​​ಡೇ ದಿನ ಕಡಲ ತೀರದಲಿ ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ರೊಮ್ಯಾನ್ಸ್

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ವಿವಾಹ ಆಗಿದ್ದಾರೆ. ಅದ್ದೂರಿಯಾಗಿ ಇವರ ಮದುವೆ ನಡೆದಿದೆ. ಇವರು ಯಾವುದೇ ಸಿನಿಮಾದಲ್ಲಿ ಒಟ್ಟಾಗಿ ನಟಿಸಿಲ್ಲ. ಆದಾಗ್ಯೂ ಇವರ ಮಧ್ಯೆ ಪರಿಚಯ ಬೆಳೆದು, ಪ್ರೀತಿ ಮೂಡಿದೆ. ಕತ್ರಿನಾ ಕೈಫ್ ಅವರ ಕೈಯಲ್ಲಿ ಸದ್ಯ ಎರಡು ಸಿನಿಮಾ ಇದೆ. ‘ಮೇರಿ ಕ್ರಿಸ್​ಮಸ್’ ಹಾಗೂ ‘ಟೈಗರ್ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್​ಗೆ ಜೊತೆಯಾಗಿ ಅವರು ನಟಿಸಿದ್ದಾರೆ. ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗೋದು ಖಚಿತವಾಗಿದೆ. ಅದೇ ರೀತಿ ‘ಮೇರಿ ಕ್ರಿಸ್​ಮಸ್’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್​ನಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ