AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾಕ್ಕೆ ತಯಾರಾಗಲು ದಕ್ಷಿಣದ ಈ ಸ್ಟಾರ್ ಸಿನಿಮಾ ನೋಡಿದ್ದ ಶಾರುಖ್ ಖಾನ್

Shah Rukh Khan: 'ಜವಾನ್' ಸಿನಿಮಾದಲ್ಲಿ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ತಾವು ಆ ಪಾತ್ರಕ್ಕೆ ತಯಾರಾಗಲು ದಕ್ಷಿಣ ಭಾರತದ ಸಿನಿಮಾ ಒಂದನ್ನು ಮೂರು ದಿನಕ್ಕೆ ಮೂರು ಬಾರಿ ನೋಡಿದ್ದಾರೆ ಶಾರುಖ್ ಖಾನ್ ಹೇಳಿದ್ದಾರೆ. ಯಾವುದು ಆ ಸಿನಿಮಾ?

'ಜವಾನ್' ಸಿನಿಮಾಕ್ಕೆ ತಯಾರಾಗಲು ದಕ್ಷಿಣದ ಈ ಸ್ಟಾರ್ ಸಿನಿಮಾ ನೋಡಿದ್ದ ಶಾರುಖ್ ಖಾನ್
ಜವಾನ್
ಮಂಜುನಾಥ ಸಿ.
|

Updated on: Sep 14, 2023 | 7:48 PM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಲವರ್ ಬಾಯ್, ಪ್ಲೇ ಬಾಯ್ ಇಮೇಜಿನ ಬದಲಿಗೆ ಸಖತ್ ಮಾಸ್ ಅವತಾರದಲ್ಲಿ ಶಾರುಖ್ ಖಾನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಶಾರುಖ್ ಖಾನ್, ‘ಜವಾನ್’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದು ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿ ಅಂತೆ. ಈ ಬಗ್ಗೆ ಸ್ವತಃ ಶಾರುಖ್ ಖಾನ್ ಸಿನಿಮಾ ಬಿಡುಗಡೆಗೆ ಮುನ್ನವೂ ಮಾತನಾಡಿದ್ದರು. ಈಗ ಮತ್ತೊಮ್ಮೆ ಟ್ವೀಟ್ ಮಾಡಿ ಆ ವಿಷಯ ಹಂಚಿಕೊಂಡಿದ್ದಾರೆ.

‘ಜವಾನ್’ ಸಿನಿಮಾವನ್ನು ಪ್ರೇಕ್ಷಕರ ಜೊತೆಗೆ ಕೆಲ ಸ್ಟಾರ್ ನಟ, ನಿರ್ದೇಶಕರು ಸಹ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. ಇತ್ತೀಚೆಗೆ ‘ಜವಾನ್’ ಸಿನಿಮಾ ವೀಕ್ಷಿಸಿರುವ ಅಲ್ಲು ಅರ್ಜುನ್, ಟ್ವೀಟ್ ಮಾಡಿ ‘ಜವಾನ್’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ಸೇರಿದಂತೆ ಸಿನಿಮಾದ ಎಲ್ಲ ಪ್ರಮುಖ ನಟರು, ನಿರ್ದೇಶಕ ಅಟ್ಲಿ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್​ ಅವರುಗಳನ್ನು ಕೊಂಡಾಡಿದ್ದರು. ಶಾರುಖ್ ಖಾನ್​ಗೆ ವಿಶೇಷವಾಗಿ ಈವರೆಗೆ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದೀರಿ ಎಂದು ಹೊಗಳಿದ್ದರು.

ಇದನ್ನೂ ಓದಿ:‘ಜವಾನ್’ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಶಾರುಖ್ ಖಾನ್ ತಮಿಳು ಮಾತನಾಡಿದ ಅಪರೂಪದ ವಿಡಿಯೋ

ಅಲ್ಲು ಅರ್ಜುನ್​ರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ”ಪ್ರಿಯ ಅಲ್ಲು ಅರ್ಜುನ್, ನಿಮಗೆ ತುಂಬಾ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಹಾರೈಕೆ ನೀವೆಷ್ಟು ಸಹೃದಯರು ಎಂದು ತೋರುತ್ತಿದೆ. ಸ್ವಾಗ್​ ವಿಷಯಕ್ಕೆ ಬಂದಾಗ ‘ದಿ ಫೈರ್’ ಸ್ವತಃ ನನ್ನನ್ನು ಹೊಗಳಿದ್ದು ಸಖತ್ ಖುಷಿ ನೀಡಿದೆ. ದುಪ್ಪಟ್ಟು ‘ಜವಾನ್’ (ಯುವಕ) ಆದಂತೆ ಅನಿಸುತ್ತಿದೆ. ನಿನ್ನಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ನಾನು ಮೂರು ದಿನದಲ್ಲಿ ಮೂರು ಬಾರಿ ‘ಪುಷ್ಪ’ ಸಿನಿಮಾ ನೋಡಿದ್ದೆ. ನಿಮಗೆ ದೊಡ್ಡ ಅಪ್ಪುಗೆ ಮತ್ತು ಸಾಧ್ಯವಾದಷ್ಟು ಬೇಗ ಬಂದು ನಿಮಗೆ ವೈಯಕ್ತಿಕವಾಗಿ ಅಪ್ಪುಗೆ ನೀಡುತ್ತೇನೆ. ನಿಮ್ಮ ಸ್ವಾಗ್ ಮುಂದುವರೆಯಲಿ” ಎಂದಿದ್ದಾರೆ.

‘ಜವಾನ್’ ಸಿನಿಮಾ ಬಿಡುಗಡೆ ಆಗುವ ಮುನ್ನವೂ ಶಾರುಖ್ ಖಾನ್ ‘ಪುಷ್ಪ’ ಸಿನಿಮಾದಿಂದ ಕಲಿತಿದ್ದಾಗಿ ಹೇಳಿದ್ದರು, ‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಸ್ವಾಗ್ ಅನ್ನೂ ಉಲ್ಲೇಖಿಸಿ, ಇವರುಗಳಿಂದ ಸ್ವ್ಯಾಗ್ ಕಲಿದ್ದೇನೆ ಎಂದಿದ್ದರು. ಈಗ ಮತ್ತೊಮ್ಮೆ ಅದೇ ವಿಷಯವನ್ನು ಹೇಳಿದ್ದಾರೆ.

‘ಜವಾನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್​ನಲ್ಲಿ ಮಾತನಾಡಿದ್ದ ಶಾರುಖ್ ಖಾನ್, ”ನಾನು ಈ ಸಿನಿಮಾ ಮಾಡಿರುವುದು ಕಲಿಯುವುದಕ್ಕಾಗಿ, ನಾನು ಇಲ್ಲಿಗೆ (ದಕ್ಷಿಣ ಭಾರತ ಚಿತ್ರರಂಗ) ಬಂದಿದ್ದು ಸಹ ಕಲಿಯಲಿಕ್ಕಾಗಿ. ಎಲ್ಲರೂ ಒಟ್ಟು ಸೇರಿ ಕಲಿಯೋಣ, ಅದ್ಭುತವಾದ ಸಿನಿಮಾಗಳನ್ನು ನಿರ್ಮಾಣ ಮಾಡೋಣ” ಎಂದು ಶಾರುಖ್ ಖಾನ್ ಹೇಳಿದ್ದರು.

‘ಜವಾನ್’ ಸಿನಿಮಾವನ್ನು ತಮಿಳಿನ ಅಟ್ಲಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ನಯನತಾರ, ದೀಪಿಕಾ ಪಡುಕೋಣೆ, ವಿಲನ್ ಆಗಿ ವಿಜಯ್ ಸೇತುಪತಿ, ನಟಿಯರಾದ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.