
ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಈ ಬಾರಿಯ ದೀಪಾವಳಿಗೆ ತಮ್ಮ ಅಭಿಮಾನಿಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ತಮ್ಮ ಮುದ್ದು ಮಗ ವಿಹಾನ್ ಜೊತೆಗಿನ ಮೊದಲ ಸ್ಪಷ್ಟವಾದ ಫ್ಯಾಮಿಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಗನ ಮೊದಲ ಹುಟ್ಟುಹಬ್ಬದ ಮರುದಿನವೇ ಈ ಸುಂದರ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಮೂವರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.
ಕತ್ರಿನಾ ಕೈಫ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ‘ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ ಇದು. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಸಿಗಲಿ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಪುಟ್ಟ ವಿಹಾನ್ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಕ್ರೀಮ್ ಬಣ್ಣದ ಕುರ್ತಾ-ಪೈಜಾಮ ಮತ್ತು ಹಳದಿ ಬಣ್ಣದ ನೆಹರೂ ಜಾಕೆಟ್ ಧರಿಸಿರುವ ವಿಹಾನ್, ತಂದೆ-ತಾಯಿಯ ನಡುವೆ ನಿಂತು ಕ್ಯಾಮೆರಾಗೆ ಮುಗುಳುನಗೆ ಬೀರುತ್ತಿದ್ದಾನೆ. ಹಳದಿ ಬಣ್ಣದ ಕಸೂತಿ ಉಡುಪಿನಲ್ಲಿ ಮಿಂಚುತ್ತಿರುವ ಕತ್ರಿನಾ ನೆಲದ ಮೇಲೆ ಕುಳಿತು ಮಗನನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದರೆ, ವಿಕ್ಕಿ ಕೌಶಲ್ ಕ್ರೀಮ್ ಬಣ್ಣದ ಕುರ್ತಾದಲ್ಲಿ ಮಗನ ಪಕ್ಕದಲ್ಲಿ ಕುಳಿತು ಮುಗುಳ್ನಕ್ಕಿದ್ದಾರೆ.
ನವೆಂಬರ್ 7ರಂದು ವಿಹಾನ್‌ಗೆ ಒಂದು ವರ್ಷ ತುಂಬಿದೆ. ಕತ್ರಿನಾ ಮತ್ತು ವಿಕ್ಕಿ 2025ರ ನವೆಂಬರ್ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಅದಕ್ಕೂ ಮುನ್ನ 2025ರ ಸೆಪ್ಟೆಂಬರ್‌ನಲ್ಲಿ ಕತ್ರಿನಾ ಅವರು ಗರ್ಭಧಾರಣೆಯ ಸುದ್ದಿಯನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್ಗೆ ಬೋರ್ ಆಯ್ತಾ? ವಿಡಿಯೋ ವೈರಲ್
ನಂತರ 2026ರ ಜನವರಿಯಲ್ಲಿ ಮಗನ ಪುಟ್ಟ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡು, ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದರು. ವಿಶೇಷವೆಂದರೆ, 2019ರಲ್ಲಿ ಬಂದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಮೇಜರ್ ವಿಹಾನ್ ಸಿಂಗ್ ಶೇರ್‌ಗಿಲ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ವಿಕ್ಕಿ ಅವರು ತಮ್ಮ ನೆಚ್ಚಿನ ಪಾತ್ರದ ಹೆಸರನ್ನೇ ಮಗನಿಗೆ ಇಟ್ಟಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.