Sanjay Dutt: ಸತತ 2-3 ಗಂಟೆ ಕಣ್ಣೀರು ಹಾಕಿದ್ದ ‘ಕೆಜಿಎಫ್ 2’ ಅಧೀರ; ಕಾರಣವೇನು?

| Updated By: ರಾಜೇಶ್ ದುಗ್ಗುಮನೆ

Updated on: Apr 17, 2022 | 8:23 AM

ಲಾಕ್​ಡೌನ್ ಸಂದರ್ಭದಲ್ಲಿ ಸಂಜಯ್ ದತ್​ಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಸಂಜಯ್ ದತ್​ ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಹೀಗಾಗಿ, ಅವರು ಸಂಪೂರ್ಣ ರಿಕವರಿ ಆದರು.

Sanjay Dutt: ಸತತ 2-3 ಗಂಟೆ ಕಣ್ಣೀರು ಹಾಕಿದ್ದ ‘ಕೆಜಿಎಫ್ 2’ ಅಧೀರ; ಕಾರಣವೇನು?
ಸಂಜಯ್ ದತ್
Follow us on

‘ಕೆಜಿಎಫ್ 2’ ಸಿನಿಮಾದಲ್ಲಿ (KGF Chapter 2) ಸಂಜಯ್ ದತ್ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅವರು ಮಿಂಚಿದ್ದಾರೆ. ಬಾಲಿವುಡ್​ನಲ್ಲಿ ಈ ಚಿತ್ರಕ್ಕೆ ಬೇಡಿಕೆ ಹೆಚ್ಚಲು ಸಂಜಯ್ ದತ್ (Sanjay Dutt) ಕೂಡ ಕಾರಣ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ಸಂಜಯ್ ದತ್​ಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇದರಿಂದ ಚಿತ್ರದ ಶೂಟಿಂಗ್ ವಿಳಂಬವಾಗಿತ್ತು. ಕ್ಯಾನ್ಸರ್ (Cancer) ಇರುವ ವಿಚಾರ ತಿಳಿದ ನಂತರದಲ್ಲಿ ಅವರು ಬರೋಬ್ಬರಿ 2-3 ಗಂಟೆಗಳ ಕಾಲ ಗಳಗಳನೆ ಅತ್ತಿದ್ದರಂತೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಲಾಕ್​ಡೌನ್ ಸಂದರ್ಭದಲ್ಲಿ ಸಂಜಯ್ ದತ್​ಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಸಂಜಯ್ ದತ್​ ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಹೀಗಾಗಿ, ಅವರು ಸಂಪೂರ್ಣ ರಿಕವರಿ ಆದರು. ಈಗ ಮೊದಲಿನಂತೆ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕ್ಯಾನ್ಸರ್ ಕಾಣಿಸಿಕೊಂಡಾಗ ಸಂಜಯ್ ದತ್ ತುಂಬಾನೇ ಧೈರ್ಯದಿಂದ ಇದ್ದಂತೆ ಕಂಡುಬಂದಿತ್ತು. ಆದರೆ, ಆರಂಭದಲ್ಲಿ ಆ ರೀತಿ ಇರಲಿಲ್ಲ. ಅವರು ತುಂಬಾನೇ ಕಣ್ಣೀರು ಹಾಕಿದ್ದರು.

ಕ್ಯಾನ್ಸರ್​ ಇದೆ ಎಂಬುದು ಗೊತ್ತಾಗಿದ್ದು ಹೇಗೆ ಅಂತ fಸಂಜಯ್ ದತ್ ಹೇಳಿಕೊಂಡಿದ್ದಾರೆ. ‘ಮೆಟ್ಟಿಲು ಹತ್ತುವಾಗ ನನಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಹೀಗಾಗಿ, ನನ್ನ ವೈದ್ಯರನ್ನು ಕರೆದೆ. ನನ್ನ ಶ್ವಾಸಕೋಶದ ಅರ್ಧಕ್ಕಿಂತ ಹೆಚ್ಚು ಭಾಗವು ನೀರಿನಿಂದ ಮುಚ್ಚಲ್ಪಟ್ಟಿರುವ ವಿಚಾರ ಎಕ್ಸ್​ರೇ ನೋಡಿದಾಗ ಗೊತ್ತಾಗಿತ್ತು. ಅವರು ಆ ನೀರನ್ನು ತೆಗೆಯಬೇಕಿತ್ತು’ ಎಂದಿದ್ದಾರೆ ಸಂಜಯ್ ದತ್.

ಇದು ಕ್ಯಾನ್ಸರ್ ಅಲ್ಲ ಎಂದು ವೈದ್ಯರು ಹೇಳಲಿ ಎಂಬುದು ಸಂಜಯ್ ದತ್ ಅಂದುಕೊಳ್ಳುತ್ತಿದ್ದರು. ಆಗಲೇ ವೈದ್ಯರು ಕ್ಯಾನ್ಸರ್ ಇದೆ ಎಂಬುದನ್ನು ದೃಢಪಡಿಸಿದ್ದರು. ‘ನಾನು ಎರಡು-ಮೂರು ಗಂಟೆಗಳ ಕಾಲ ಅಳುತ್ತಿದ್ದೆ. ನನಗೆ ನನ್ನ ಮಕ್ಕಳು ಹಾಗೂ ಹೆಂಡತಿಯ ಬಗ್ಗೆ ಚಿಂತೆ ಕಾಡುತ್ತಿತ್ತು. ನಾನು ವೀಕ್ ಆಗುವುದಿಲ್ಲ ಎಂದೆ. ನಾನು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದೆ. ಆದರೆ ಅವರಿಗೆ ವೀಸಾ ಸಿಗಲಿಲ್ಲ (ಆ ಸಂದರ್ಭದಲ್ಲಿ ಕೊವಿಡ್ ಹೆಚ್ಚಿದ್ದ ಕಾರಣ ಅಮೆರಿಕ ತನ್ನ ದೇಶಕ್ಕೆ ಬರುವವರ ಮೇಲೆ ನಿರ್ಬಂಧ ಹೇರಿತ್ತು).  ನನಗೆ ಹೃತಿಕ್ ತಂದೆ ರಾಕೇಶ್ ರೋಷನ್ ಅವರು​ ವೈದ್ಯರನ್ನೊಬ್ಬರನ್ನು ರೆಫರ್​ ಮಾಡಿದರು’ ಎಂದಿದ್ದಾರೆ ಸಂಜಯ್ ದತ್.

‘ನಿಮ್ಮ ಕೂದಲು ಉದುರಲು ಶುರುವಾಗಲಿದೆ ಎಂದು ವೈದ್ಯರು ಹೇಳಿದರು. ನನಗೆ ಏನೂ ಆಗುವುದಿಲ್ಲ ಎಂದು ನಾನು ಹೇಳಿದೆ. ನನಗೆ ಕೂದಲು ಉದುರುವುದಿಲ್ಲ, ವಾಂತಿ ಆಗುವುದಿಲ್ಲ ಎಂದು ಧೈರ್ಯದಿಂದ ಹೇಳಿದೆ. ಕೀಮೋಥೆರಪಿ ಮಾಡಿಸಿಕೊಳ್ಳಲು ದುಬೈಗೆ ಹೋಗುತ್ತಿದ್ದೆ’ ಎಂದಿದ್ದಾರೆ ಸಂಜಯ್ ದತ್.

ಇದನ್ನೂ ಓದಿ: KGF 2: ಅಧೀರನ ಫ್ಯಾನ್ ಅಂತೆ ರಾಕಿ! ಸಂಜಯ್ ದತ್ ಬಗ್ಗೆ ಯಶ್ ವಿಶೇಷ ಮಾತು

‘ಕೆಜಿಎಫ್​ 2’ ಕ್ಲೈಮ್ಯಾಕ್ಸ್​ ಶೂಟ್​ ಮಾಡೋದು ಎಷ್ಟು ಕಷ್ಟವಾಗಿತ್ತು?  ಸಂಜಯ್ ದತ್ ವಿವರಿಸಿದ್ದು ಹೀಗೆ