‘ಕೆಜಿಎಫ್​ 2’ ಕ್ಲೈಮ್ಯಾಕ್ಸ್​ ಶೂಟ್​ ಮಾಡೋದು ಎಷ್ಟು ಕಷ್ಟವಾಗಿತ್ತು?  ಸಂಜಯ್ ದತ್ ವಿವರಿಸಿದ್ದು ಹೀಗೆ

‘ಕೆಜಿಎಫ್​ 2’ ಕ್ಲೈಮ್ಯಾಕ್ಸ್​ ಶೂಟ್​ ಮಾಡೋದು ಎಷ್ಟು ಕಷ್ಟವಾಗಿತ್ತು?  ಸಂಜಯ್ ದತ್ ವಿವರಿಸಿದ್ದು ಹೀಗೆ
ಸಂಜಯ್ ದತ್

ಸಂಜಯ್ ದತ್ ಅನಾರೋಗ್ಯದ ಕಾರಣ ಸಾಹಸ ದೃಶ್ಯಗಳನ್ನು ಡ್ಯೂಪ್ ಬಳಸಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಇದನ್ನು ಸಂಜಯ್​ ದತ್ ನಿರಾಕರಿಸಿದ್ದಾಗಿ ಈ ಮೊದಲು ವರದಿ ಆಗಿತ್ತು.

TV9kannada Web Team

| Edited By: Rajesh Duggumane

Apr 02, 2022 | 9:05 PM

ಸಂಜಯ್ ದತ್​ ಅವರು (Sanjay Dutt) ‘ಕೆಜಿಎಫ್​ 2’ ಸಿನಿಮಾದಲ್ಲಿ (KGF Chapter 2) ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲೇ ಸಂಜಯ್​ ದತ್​ಗೆ ಕ್ಯಾನ್ಸರ್​ (Cancer) ಇರುವ ವಿಚಾರ ಗೊತ್ತಾಗಿತ್ತು. ಹೀಗಾಗಿ, ಒಂದು ಬ್ರೇಕ್​ ತೆಗೆದುಕೊಂಡು ಚಿಕಿತ್ಸೆ ಪಡೆದು ಅವರು ಮತ್ತೆ ಸೆಟ್​ಗೆ ಮರಳಿದ್ದರು. ಕ್ಯಾನ್ಸರ್​ನಿಂದ ಗುಣಮುಖರಾದ ನಂತರದಲ್ಲಿ ಮತ್ತೆ ನಟಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈ ಬಗ್ಗೆ ಸಂಜಯ್ ದತ್​ ಹೇಳಿಕೊಂಡಿದ್ದಾರೆ.

‘ಅದು 25 ಕೆಜಿಯೋ ಅಥವಾ 2 ಕೆಜಿಯೋ, ಸರಿಯಾಗಿ ನೆನಪಿಲ್ಲ. ಆದರೆ, ಅದು ತುಂಬಾನೇ ಭಾರವಾಗಿತ್ತು. ಅದನ್ನು ಶೂಟ್ ಮಾಡುವ ಸಂದರ್ಭದಲ್ಲಿ ತುಂಬಾನೇ ಕಷ್ಟಕರವಾಗಿತ್ತು. ನನಗೆ ಕೊಟ್ಟ ಶಸ್ತ್ರಾಸ್ತ್ರ ಲೆದರ್​ನಿಂದ ಮಾಡಿದ್ದರು. ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ. ಹಲವು ಅಡೆತಡೆಗಳು ಎದುರಾಗುತ್ತವೆ. ಕ್ಲೈಮ್ಯಾಕ್ಸ್​ ಶೂಟ್ ಮಾಡುವಾಗ ನಾವು ಭಾರವಾದ ಬಟ್ಟೆ ತೊಟ್ಟಿದ್ದೆವು. ನನ್ನ ತಮ್ಮ (ಯಶ್​) ಕೂಡ ಅಷ್ಟೇ ಭಾರದ ಬಟ್ಟೆ ತೊಟ್ಟಿದ್ದರು. ನಾವು ಧೂಳಿನಲ್ಲಿ ಕೆಲಸ ಮಾಡಬೇಕಿತ್ತು. ಇದು ಕಷ್ಟ ಎನಿಸಿದರೂ, ನಾವು ಪ್ರೀತಿಯಿಂದ ಮಾಡಿದೆವು’ ಎಂದಿದ್ದಾರೆ ಸಂಜಯ್​ ದತ್.

ಸಂಜಯ್​ ದತ್​ ಅವರಿಗೆ ನಟನೆ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ಕಲಾವಿದ. ಕಲಾವಿದನಾಗಿಯೇ ಸಾಯುತ್ತೇನೆ. ನಾನು ಏನು ಮಾಡುತ್ತೇನೆ ಅದಕ್ಕೆ ಖುಷಿ ಇದೆ.  ನಾನು 45 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ.  ಹೊಸ ಮುಖಗಳು ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ’ ಎಂದಿದ್ದಾರೆ ಅವರು.

ಸಂಜಯ್ ದತ್ ಅನಾರೋಗ್ಯದ ಕಾರಣ ಸಾಹಸ ದೃಶ್ಯಗಳನ್ನು ಡ್ಯೂಪ್ ಬಳಸಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಇದನ್ನು ನಿರಾಕರಿಸಿದ್ದ ಸಂಜಯ್​ ದತ್, ತಾವೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾಗಿ ಈ ಮೊದಲು ವರದಿ ಆಗಿತ್ತು.

‘ಕೆಜಿಎಫ್​ 2’ನಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಂಜಯ್​ ದತ್​, ರವೀನಾ ಟಂಡನ್​ ಮೊದಲಾದವರು ನಟಿಸಿದ್ದಾರೆ. ಪ್ರಶಾಂತ್​ ನೀಲ್ ನಿರ್ದೇಶನ ಇರುವ ಈ ಚಿತ್ರವನ್ನು, ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್

KGF 2: ಅಧೀರನ ಫ್ಯಾನ್ ಅಂತೆ ರಾಕಿ! ಸಂಜಯ್ ದತ್ ಬಗ್ಗೆ ಯಶ್ ವಿಶೇಷ ಮಾತು

Follow us on

Related Stories

Most Read Stories

Click on your DTH Provider to Add TV9 Kannada