‘ಶಿಕ್ಷೆ ಕೊಡಲು ಸಿನಿಮಾ ತೋರಿಸಿದರು’; ಇಬ್ರಾಹಿಮ್-ಖುಷಿ ಕಪೂರ್ ಚಿತ್ರಕ್ಕೆ ಇದೆಂಥಾ ಸ್ಥಿತಿ

|

Updated on: Mar 20, 2025 | 8:57 AM

ಇತ್ತೀಚೆಗೆ ಬಿಡುಗಡೆಯಾದ ‘ನಾದಾನಿಯಾ’ ಸಿನಿಮಾ ಇಬ್ರಾಹಿಂ ಅಲಿ ಖಾನ್ ಮತ್ತು ಖುಷಿ ಕಪೂರ್ ಅವರ ಕಳಪೆ ನಟನೆಗಾಗಿ ತೀವ್ರ ಟೀಕೆಗೆ ಒಳಗಾಗಿದೆ. ನೆಪೋಟಿಸಂ ಹಿನ್ನೆಲೆಯ ಈ ಚಿತ್ರವು ಸ್ಟ್ಯಾಂಡಪ್ ಕಾಮಿಡಿಯನ್ ಪ್ರಣಿತ್ ಮೋರೆ ಅವರಿಂದಲೂ ತೀವ್ರ ಟೀಕೆಗೆ ಒಳಗಾಗಿದೆ. ಖುಷಿ ಕಪೂರ್ ಅವರ ನಟನೆ ವಿಶೇಷವಾಗಿ ಟ್ರೋಲ್ ಆಗುತ್ತಿದ್ದು, ಸಿನಿಮಾ ಒಟ್ಟಾರೆಯಾಗಿ ನಿರಾಶಾದಾಯಕ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

‘ಶಿಕ್ಷೆ ಕೊಡಲು ಸಿನಿಮಾ ತೋರಿಸಿದರು’; ಇಬ್ರಾಹಿಮ್-ಖುಷಿ ಕಪೂರ್ ಚಿತ್ರಕ್ಕೆ ಇದೆಂಥಾ ಸ್ಥಿತಿ
ನಾದಾನಿಯಾ
Follow us on

ಸೈಫ್ ಅಲಿ ಖಾನ್ ಮಗ ಇಬ್ರಾಹಿಮ್ ಅಲಿ ಖಾನ್ (Ibrahim Ali Khan) ಹಾಗೂ ಶ್ರೀದೇವಿ ಮಗಳು ಖುಷಿ ಕಪೂರ್ ನಟಿಸಿದ ‘ನಾದಾನಿಯಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರ ಸಾಕಷ್ಟು ಟ್ರೋಲ್ ಆಗುತ್ತಿದೆ. ಇಬ್ಬರೂ ನೆಪೋಟಿಸಂ ಹಿನ್ನೆಲೆ ಹೊಂದಿದ್ದಾರೆ. ಜೊತೆಗೆ ಕಳಪೆ ನಟನೆ ಮಾಡಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಈಗ ಸ್ಟ್ಯಾಂಡಪ್​ ಕಾಮಿಡಿಯನ್ ಪ್ರಣಿತ್ ಮೋರೆ ಅವರು ಈ ಚಿತ್ರವನ್ನು ಹಾಗೂ ಯುವ ಕಲಾವಿದರ ನಟನೆಯನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ.

ಮಾರ್ಚ್ 7ರಂದು ‘ನಾದಾನಿಯಾ’ ಸಿನಿಮಾ ನೆಟ್​ಫ್ಲಿಕ್ಸ್​ ಮೂಲಕ ಪ್ರಸಾರ ಆರಂಭಿಸಿದೆ. ಖುಷಿ ಕಪೂರ್ ಅವರು ನಟನೆ ಮಾಡೋದನ್ನು ಬಿಟ್ಟು ಕತ್ತನ್ನು ಅಲ್ಲಾಡಿಸಿದ್ದಾರೆ. ಇದನ್ನೇ ಅವರು ನಟನೆ ಎಂದುಕೊಂಡಿದ್ದಾರೆ ಎಂಬ ಟ್ರೋಲ್​ಗಳು ಹರಿದಾಡುತ್ತಿವೆ. ಒಂದೊಮ್ಮೆ ಶ್ರೀದೇವಿ ಇದ್ದಿದ್ದರೆ ಮಗಳ ನಟನೆ ನೋಡಿ ಖಂಡಿತವಾಗಿಯೂ ಆಘಾತ ಆಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ಸೈಫ್ ಅಲಿ ಖಾನ್ ಮೇಲೆ ಅಟ್ಯಾಕ್ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಿ ‘ನಾದಾನಿಯಾ’ ಸಿನಿಮಾ ತೋರಿಸಲಾಗಿದೆ ಎಂದು ಪ್ರಣಿತ್ ಟೀಕಿಸಿದ್ದಾರೆ.

ಇದನ್ನೂ ಓದಿ
ಗುರು ಕಿರಣ್ ದುಡ್ಡು ಕೊಟ್ಟರೂ ಸಿನಿಮಾ ಮಾಡಲ್ಲಾ; ಕಾರಣವೇನು?
ಶಾರುಖ್ ಖಾನ್-ಸುಕುಮಾರ್ ಸಿನಿಮಾ ಮಾಡೋ ಸುದ್ದಿ ಶುದ್ಧ ಸುಳ್ಳು
ಪ್ರಶಾಂತ್ ನೀಲ್ ನಿರ್ದೇಶನದ ಹಿಟ್ ಚಿತ್ರ ರೀ-ರಿಲೀಸ್; ದಾಖಲೆ ಗಳಿಕೆ
ತನ್ನದೇ ಹೆಸರನ್ನು ತಪ್ಪಾಗಿ ಕರೆದುಕೊಂಡು ರಣಬೀರ್; ಆಮಿರ್ ರಿಯಾಕ್ಷನ್ ನೋಡಿ

‘ಖುಷಿ ಕಪೂರ್ ಅವರ ಲೆವೆಲ್ ಬೇರೆಯದೇ ಹಂತದಲ್ಲಿ ಇದೆ. ಖುಷಿ ಕಪರೂರ್ ಅವರು ಕೆಟ್ಟದಾಗಿ ನಟಿಸಿದ್ದಾರೆ. ವಿಶೇಷ ಎಂದರೆ ನಿರಂತರವಾಗಿ ಅವರು ಕೆಟ್ಟದಾಗಿ ನಟಿಸಿದ್ದಾರೆ. ಖುಷಿ ಅವರ ಕೊನೆಯ ಸಿನಿಮಾ ಆಮಿರ್ ಖಾನ್ ಮಗ ಜುನೈದ್ ಖಾನ್ ಜೊತೆ ಬಂದಿತ್ತು. ಆ ಸಿನಿಮಾ ಆಮಿರ್ ಖಾನ್ ಇಮೇಜ್​ನ ಹಾಳು ಮಾಡಿತು. ಈಗ ಸೈಫ್ ಅಲಿ ಖಾನ್ ಅವರ ಇಮೇಜ್ ಹಾಳಾಗಿದೆ’ ಎಂದು ಹೇಳಿದ್ದಾರೆ.

‘ಸೈಫ್ ಮಗ ಎಷ್ಟು ಕೆಟ್ಟದಾಗಿ ನಟಿಸಿದ್ದಾನೆ ಎಂದರೆ ನ್ಯಾಯಾಧೀಶರು ಸೈಫ್ ಮೇಲೆ ದಾಳಿ ಮಾಡಿದವನಿಗೆ ‘ನಾನು ನಿಮಗೆ ಶಿಕ್ಷೆ ವಿಧಿಸುವುದಿಲ್ಲ, ನೀವು ನಾದಾನಿಯಾ ಚಿತ್ರವನ್ನು ಎರಡು ಬಾರಿ ನೋಡಬೇಕು’ ಎಂದರು. ಆ ವ್ಯಕ್ತಿ ನನ್ನ ಕತ್ತನ್ನು ಸೀಳಿ ಎಂದು ಕೂಗುತ್ತಿದ್ದಾನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:  ಅಕ್ಕನಂತೆ ತಂಗಿ, ಸತತ ಎರಡು ಫ್ಲಾಪ್ ಕೊಟ್ಟ ಖುಷಿ ಕಪೂರ್, ದಕ್ಷಿಣಕ್ಕೆ ಬರಲು ತಯಾರಿ

ಈ ಚಿತ್ರವನ್ನು ಶೌನಾ ಗೌತಮ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಲವ್ ಸ್ಟೋರಿಯನ್ನು ಹೊಂದಿದೆ. ಈ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ಮಾಪಕ ಕರಣ್ ಜೋಹರ್ ಅವರು, ಟ್ರೋಲ್​ಗಳಿಂದ ಏನೂ ಬದಲಾಗುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:52 am, Thu, 20 March 25