Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಮಗು ಮಾಡಿಕೊಳ್ಳಲು ಏಳು ವರ್ಷ ಕಷ್ಟಪಟ್ಟ ರಾಣಿ ಮುಖರ್ಜಿ; ಆದರೂ ಆಗಲಿಲ್ಲ

Rani Mukerji Birthday: ರಾಣಿ ಮುಖರ್ಜಿ ಅವರು ಎರಡನೇ ಮಗುವಿಗಾಗಿ ಏಳು ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಗರ್ಭಪಾತದ ನೋವು ಅನುಭವಿಸಿದ್ದಾರೆ. ತಮ್ಮ ಮಗಳಾದ ಅದಿರಾ ಅವರನ್ನು ಅವರು "ಮಿರಾಕಲ್ ಬೇಬಿ" ಎಂದು ಕರೆದಿದ್ದಾರೆ. ಈಗ ಅವರು ತಮ್ಮ ಮಗಳ ಜೊತೆ ಸಂತೋಷದಿಂದ ಇದ್ದಾರೆ.

ಎರಡನೇ ಮಗು ಮಾಡಿಕೊಳ್ಳಲು ಏಳು ವರ್ಷ ಕಷ್ಟಪಟ್ಟ ರಾಣಿ ಮುಖರ್ಜಿ; ಆದರೂ ಆಗಲಿಲ್ಲ
ರಾಣಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 21, 2025 | 8:03 AM

ನಟಿ ರಾಣಿ ಮುಖರ್ಜಿ (Rani Mukerji) ಅವರು ವೈಯಕ್ತಿಕ ಕಾರಣಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. ಅವರು 2014ರಲ್ಲಿ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಅವರನ್ನು ಮದುವೆ ಆದರು. ಈ ದಂಪತಿಗೆ ಒಂದು ಹೆಣ್ಣು ಮಗು ಇದೆ. ಇವರು ಎರಡನೇ ಮಗು ಮಾಡಿಕೊಳ್ಳಲು ಬರೋಬ್ಬರಿ 7 ವರ್ಷ ಪ್ರಯತ್ನಿಸಿದರಂತೆ. ಈ ಸಂದರ್ಭದಲ್ಲಿ ಸಾಕಷ್ಟು ಕಷ್ಟಪಟ್ಟರು. ಈ ಮೊದಲು ಆ ಬಗ್ಗೆ ಅವರು ಹೇಳಿಕೊಂಡಿದ್ದರು. ಇಂದು (ಮಾರ್​​ 21) ರಾಣಿಗೆ ಬರ್ತ್​ಡೇ. ಈ ವೇಳೆ ಆ ವಿಚಾರದ ಬಗ್ಗೆ ತಿಳಿದುಕೊಳ್ಳೋಣ.

‘ಗಲಾಟಾ ಇಂಡಿಯಾ’ ಜೊತೆ ಮಾತನಾಡಿದ್ದ ರಾಣಿ ಈ ವಿಚಾರ ರಿವೀಲ್ ಮಾಡಿದ್ದರು. ‘ನಾವು ಎರಡನೇ ಮಗುವಿಗಾಗಿ ಏಳು ವರ್ಷ ಪ್ರಯತ್ನಿಸಿದೆವು. ಅದು ಕಷ್ಟ ಆಗಿತ್ತು. ನನ್ನ ಮಗಳಿಗೆ ಎಂಟು ವರ್ಷ ಈಗ. ಅವಳಿಗೆ ಒಂದು ವರ್ಷ ಇದ್ದಾಗಿನಿಂದ ನಾವು ಎರಡನೇ ಮಗುವಿಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದರು.

‘ನಾವು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದೆವು. ನಾನು ಪ್ರೆಗ್ನೆಂಟ್ ಆದೆ. ಆದರೆ, ಮಿಸ್ ಕ್ಯಾರೇಜ್ ಆಯಿತು. ಅದು ನಿಜಕ್ಕೂ ಪರೀಕ್ಷಾ ಸಮಯ ಆಗಿತ್ತು. ನಾನು ಯಂಗ್ ಅಲ್ಲ. ಆದರೆ, ಯಂಗ್ ಆಗಿ ಕಾಣುತ್ತೇನೆ’ ಎಂದಿದ್ದರು ರಾಣಿ.

ಇದನ್ನೂ ಓದಿ
Image
ವಿಚ್ಛೇದನ ಪಡೆದ ದಿನ ಹಾಡಿನ ಮೂಲಕ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ ಧನಶ್ರೀ
Image
ಬೆಟ್ಟಿಂಗ್​ಗೆ ಪ್ರಚಾರ: ಪ್ರಕಾಶ್ ರೈ, ವಿಜಯ್ ಸೇರಿ ಹಲವು ನಟರ ಮೇಲೆ ಪ್ರಕರಣ
Image
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ; ನೈಜ ಘಟನೆ ಹೇಳ ಹೊರಟ ಹರ್ಷಿಕಾ
Image
ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​ ಇರೋ ಸಿನಿಮಾನ ಮಿಸ್ ಮಾಡಬೇಡಿ

‘ಮತ್ತೊಂದು ಮಗು ಹೊಂದಬಹುದು ಎಂಬ ವಯಸ್ಸು ಈಗ ನನ್ನದಲ್ಲ. ನನ್ನ ಮಗಳಿಗೆ ಸಹೋದರ/ಸಹೋದರಿ ನೀಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಬೇಸರದ ವಿಚಾರ. ಆ ನೋವು ಯಾವಾಗಲೂ ಇರುತ್ತದೆ. ನಮಗೆ ಏನು ಸಿಕ್ಕಿದೆ ಅದರ ಬಗ್ಗೆ ಖುಷಿ ಇರಬೇಕು. ಸಿಗದೇ ಇರುವ ವಿಚಾರದ ಬಗ್ಗೆ ಬೇಸರ ಬೇಡ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಸ್ಟಾರ್ ಹೀರೋಗಳ ಜೊತೆ ಕೇಳಿ ಬಂದಿತ್ತು ರಾಣಿ ಮುಖರ್ಜಿ ಹೆಸರು; ಕೊನೆಗೆ ನಿರ್ಮಾಪಕನ ಮದುವೆ ಆದ ನಟಿ

‘ನನ್ನ ಮಗಳಿ ಅದಿರಾ ಮಿರಾಕಲ್ ಮಗು. ಕೆಲವರು ಒಂದು ಮಗು ಹೊಂದಲೂ ಕಷ್ಟಪಡುತ್ತಾರೆ. ನನಗೆ ಒಂದು ಮಗು ಇದೆ ಎಂಬ ಖೂಷಿ ಇದೆ’ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು. ರಾಣಿ ಮುಖರ್ಜಿ ಅವರು ಇತ್ತೀಚೆಗೆ ಸಿನಿಮಾಗಳನ್ನು ಹೆಚ್ಚಾಗಿ ಮಾಡುತ್ತಾ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.