
ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಪತಿ ಸಿದ್ದಾರ್ಥ್ ಮಲ್ಹೋತ್ರಾ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಈ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. 2023ರ ಫೆಬ್ರವರಿ ತಿಂಗಳಲ್ಲಿ ಇವರು ವಿವಾಹ ಆಗಿದ್ದರು. ಮದುವೆಯಾದ ಸುಮಾರು ಎರಡೂವರೆ ವರ್ಷಗಳ ಬಳಿಕ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಅನೇಕರು ‘ಬಾಲಿವುಡ್ಗೆ ಹೊಸ ನಟಿ ಸಿಕ್ಕಳು’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರದ್ದು ಲವ್ ಮ್ಯಾರೇಜ್. ಇವರು ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇಬ್ಬರಿಗೂ ಚಿತ್ರರಂಗದಲ್ಲಿ ಬೇಡಿಕೆ ಇದೆ. ಕಿಯಾರಾ ಅವರು ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಯಶ್ ನಟನೆಯ ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಇದೆ. ಅವರು ಈ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಪ್ರೆಗ್ನೆನ್ಸಿಗೆ ಪ್ಲ್ಯಾನ್ ಮಾಡಿದ್ದರು. ಅವರು ತಮ್ಮ ಭಾಗದ ಶೂಟ್ನ ಮುಗಿಸಿಕೊಟ್ಟಿದ್ದಾರೆ.
ಕಿಯಾರಾ ಅವರು 2025ರ ಫೆಬ್ರವರಿಯಲ್ಲಿ ತಾವು ಪ್ರೆಗ್ನೆಂಟ್ ಎಂಬ ವಿಚಾರ ಘೋಷಿಸಿದ್ದರು. ಈಗ ಕಿಯಾರಾಗೆ ಹೆಣ್ಣು ಮಗು ಜನಿಸಿದೆ. ಅವರಿಗೆ ಇಡೀ ಬಾಲಿವುಡ್ ಚಿತ್ರರಂಗ ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿಯಾರಾ ಅಡ್ವಾಣಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇದೆ. ಸದ್ಯ ಅವರು ಮಗು ಜನಿಸಿದ ಬಳಿಕ ಒಂದು ಗ್ಯಾಪ್ ಪಡೆಯಲಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಬೇಬಿ ಬಂಪ್ನೊಂದಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲೂ ಕಿಯಾರಾ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಅವರು ಪ್ರೆಗ್ನೆಂಟ್ ಎಂಬ ವಿಚಾರ ತಿಳಿದ ಬಳಿಕ ಯಶ್ ಅವರು ಬೆಂಗಳೂರಿನಲ್ಲಿದ್ದ ಶೂಟ್ನ ಮುಂಬೈಗೆ ಸ್ಥಳಾಂತರಿಸಿದ್ದರು ಎಂದು ಈ ಮೊದಲು ವರದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.