ನಿರ್ದೇಶಕನಾಗಲು ಮುಂದಾದ ಭಾರತದ ನಂಬರ್ 1 ಗಾಯಕ
Arijit Singh: ಅರಿಜಿತ್ ಸಿಂಗ್ ಭಾರತದ ನಂಬರ್ 1 ಗಾಯಕ. ಅತ್ಯಂತ ಬೇಡಿಕೆಯ ಮತ್ತು ದುಬಾರಿ ಗಾಯಕ ಸಹ. ಸ್ಪಾಟಿಫೈನಲ್ಲಿ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಟಾಪ್ 5 ಗಾಯಕರಲ್ಲಿ ಒಬ್ಬರು ಅರಿಜಿತ್. ಗಾಯಕ ಕ್ಷೇತ್ರದಲ್ಲಿ ಭಾರಿ ಬೇಡಿಕೆ, ಜನಪ್ರಿಯತೆ ಇರುವಾಗಲೇ ಹೊಸ ಸಾಹಸಕ್ಕೆ ಅರಿಜಿತ್ ಕೈ ಹಾಕಿದ್ದಾರೆ. ಅರಿಜಿತ್ ಪ್ಯಾನ್ ಇಂಡಿಯಾ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ.

ಸಿನಿಮಾ ಗಾಯಕರು ಹೆಚ್ಚೆಂದರೆ ಸಂಗೀತ ನಿರ್ದೇಶಕರಾಗುತ್ತಾರೆ ಆದರೆ ಸಿನಿಮಾ ನಿರ್ದೇಶಕರಾಗಿದ್ದು ಅಪರೂಪವೇ. ಇದೀಗ ಭಾರತದ ಸಿನಿಮಾ ಕ್ಷೇತ್ರದಲ್ಲಿ ನಂಬರ್ 1 ಗಾಯಕ ಎನಿಸಿಕೊಂಡಿರುವ ಅರಿಜಿತ್ ಸಿಂಗ್ (Arijit Singh) ಅವರು ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಗಾಯನ ಕ್ಷೇತ್ರದಲ್ಲಿ ಭಾರಿ ಬೇಡಿಕೆ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿರುವ ಸಮಯದಲ್ಲಿಯೇ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ ಅರಿಜಿತ್ ಸಿಂಗ್ (Arijit Singh). ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಅರಿಜಿತ್ ರೆಡಿಯಾಗಿದ್ದಾರೆ.
ಅರಿಜಿತ್ ಸಿಂಗ್ ಅವರು ಅರಣ್ಯದಲ್ಲಿ ನಡೆಯುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಕತೆ, ಚಿತ್ರಕತೆಯೂ ಅರಿಜಿತ್ ಸಿಂಗ್ ಅವರದ್ದೇ ಅಂತೆ. ಕೋಯಲ್ ಸಿಂಗ್ ಅವರು ಅರಿಜಿತ್ ಅವರಿಗೆ ಬರವಣಿಗೆಯಲ್ಲಿ ಸಹಾಯ ಮಾಡಿದ್ದಾರೆ. ಅರಿಜಿತ್ ಅವರ ಈ ಪ್ರಾಜೆಕ್ಟ್ಗೆ ಮಹಾವೀರ್ ಜೈನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆಯಂತೆ.
ಇದೊಂದು ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾದ ಪಾತ್ರಗಳಿಗೆ ನಟರ ಆಯ್ಕೆ ಪ್ರಕ್ರಿಯೆ ಪ್ರಸ್ತುತ ಜಾರಿಯಲ್ಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ದಕ್ಷಿಣ ಭಾರತದ ನಟ-ನಟಿಯರನ್ನು ಸಹ ಮುಖ್ಯ ಪಾತ್ರಗಳಿಗೆ ತೆಗೆದುಕೊಳ್ಳುವ ಯೋಜನೆಯಲ್ಲಿ ಅರಿಜಿತ್ ಸಿಂಗ್ ಇದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಅರಿಜಿತ್ ಸಿಂಗ್ ಈಗಾಗಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದು, ಸಿನಿಮಾ ಚಿತ್ರೀಕರಣಕ್ಕಾಗಿ ಎಂದೇ ಅವರು ಗಾಯನಕ್ಕೆ ಕೆಲ ದಿನಗಳ ಕಾಲ ಬಿಡುವು ನೀಡಲಿದ್ದಾರಂತೆ.
ಇದನ್ನೂ ಓದಿ:ಸಿನಿಮಾ ಹಾಡು ಹೇಳಲು ಹಣ ಕೇಳಲ್ಲ ಅರಿಜಿತ್ ಸಿಂಗ್; ವಿವರಿಸಿದ ಗಾಯಕ
ಸಿನಿಮಾಕ್ಕೆ ಬಂಡವಾಳ ಹೂಡಿರುವ ಮಹಾವೀರ್ ಜೈನ್ ಅವರು ಇದರ ಹೊರತಾಗಿ ಕಾರ್ತಿಕ್ ಆರ್ಯನ್ ಜೊತೆಗೆ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ ‘ನಾಗ್ಜಿಲ್ಲಾ’ ಹೆಸರಿನ ನಿರ್ಮಿಸುತ್ತಿದ್ದಾರೆ. ಜೊತೆಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿರುವ ‘ವೈಟ್’ ಹೆಸರಿನ ಸಿನಿಮಾಕ್ಕೆ ಸಹ ಬಂಡವಾಳ ಹೂಡಿದ್ದಾರೆ. ಈ ಹಿಂದೆ ಇವರು ‘ಗುಡ್ ಲಕ್ ಜೆರ್ರಿ’, ‘ರಾಮ್ ಸೇತು’, ‘ದೇಕ್ ಇಂಡಿಯಾ ಸರ್ಕಸ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಇನ್ನು ಅರಿಜಿತ್ ಸಿಂಗ್ ಅವರು ಭಾರತದ ನಂಬರ್ 1 ಗಾಯಕ. ಸ್ಪಾಟಿಫೈನಲ್ಲಿ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಗಾಯಕ ಸಹ. ಅರಿಜಿತ್ ಲೈವ್ ಶೋಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಾರೆ. ಭಾರತದ ಅತ್ಯಂತ ದುಬಾರಿ ಗಾಯಕ ಸಹ ಹೌದು. ಇತ್ತೀಚೆಗಷ್ಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ದೊರಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




