
ನಟ ರಿಷಬ್ ಶೆಟ್ಟಿ ಅವರು ಕೆಲವೇ ದಿನಗಳ ಹಿಂದೆ ಟೊಯೋಟಾ ವೆಲ್ಫೈರ್ (Toyota Vellfire) ಕಾರು ಖರೀದಿಸಿದ್ದರು. ಪತ್ನಿ ಮತ್ತು ಮಕ್ಕಳ ಜೊತೆ ಕಾರಿನ ಎದುರು ನಿಂತು ಅವರು ಪೋಸ್ ನೀಡಿದ್ದರು. ಕೋಟ್ಯಂತರ ರೂಪಾಯಿ ಬೆಲೆಬಾಳುವ ಈ ಕಾರಿನ ಬಗ್ಗೆ ಸೆಲೆಬ್ರಿಟಿಗಳಿಗೆ ಕ್ರೇಜ್ ಹೆಚ್ಚುತ್ತಿದೆ. ಸುದೀಪ್ ಮುಂತಾದ ನಟರ ಬಳಿ ಈ ಕಾರು ಇದೆ. ಈಗ ಬಾಲಿವುಡ್ನ ಖ್ಯಾತ ನಟ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಕೂಡ ಟೊಯೋಟಾ ವೆಲ್ಫೈರ್ ಕಾರು ಖರೀದಿಸಿದ್ದಾರೆ. ಹೊಸ ಕಾರಿನ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಸಿದ್ದಾರ್ಥ್ ಮತ್ತು ಕಿಯಾರಾ ಅಡ್ವಾಣಿ (Kiara Advani) ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅವರು ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಅವರ ಪತ್ನಿ ಕಿಯಾರಾ ಅಡ್ವಾಣಿ ಕೂಡ ಸಖತ್ ಬೇಡಿಕೆ ಹೊಂದಿದ್ದಾರೆ. ಈಗ ಕಿಯಾರಾ ಅವರು ತುಂಬು ಗರ್ಭಿಣಿ. ಹಾಗಾಗಿ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಪತ್ನಿಗಾಗಿ ಸಿದ್ದಾರ್ಥ್ ಮಲ್ಹೋತ್ರಾ ಅವರು ಟೊಯೋಟಾ ವೆಲ್ಫ್ಫೈರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿ ಆಗಿದೆ.
ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಖರೀದಿಸಿರುವ ಟೊಯೋಟಾ ವೆಲ್ಫೈರ್ ಕಾರಿನ ಬೆಲೆ 1.22 ಕೋಟಿ ರೂಪಾಯಿ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಮಿರ್ ಖಾನ್, ಅನಿಲ್ ಕಪೂರ್, ಐಶ್ವರ್ಯಾ ರೈ ಬಚ್ಚನ್, ಕೃತಿ ಸನನ್, ಮೋಹನ್ಲಾಲ್, ಫಹಾದ್ ಫಾಸಿಲ್ ಮುಂತಾದ ಸೆಲೆಬ್ರಿಟಿಗಳು ಕೂಡ ಟೊಯೋಟಾ ವೆಲ್ಫೈರ್ ಕಾರು ಹೊಂದಿದ್ದಾರೆ.
ಸದ್ಯದಲ್ಲೇ ಕಿಯಾರಾ ಅಡ್ವಾಣಿ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಸಿದ್ದಾರ್ಥ್ ಮತ್ತು ಕಿಯಾರಾ ಅವರು ಹೊಸ ಮನೆ ಹುಡುಕುತ್ತಿದ್ದಾರೆ ಕೂಡ. ಮಗು ಜನಿಸುವುದಕ್ಕೂ ಮುನ್ನವೇ ಅವರು ಬೇರೆ ಮನೆಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಪ್ರೆಗ್ನೆಂಟ್ ಆದ ಬಳಿಕ ಅವರು ಬ್ರೇಕ್ ಪಡೆದಿದ್ದಾರೆ.
ಇದನ್ನೂ ಓದಿ: ಕಿಯಾರಾ ಜಾಗ ತುಂಬಲು ಬಂದ ಶರ್ವರಿ, ಭಾರಿ ದೊಡ್ಡ ಅವಕಾಶ
‘ವಾರ್ 2’ ಸಿನಿಮಾಗೂ ಕಿಯಾರಾ ಅಡ್ವಾಣಿ ಅವರು ನಾಯಕಿ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಡಾನ್ 3’ ಸಿನಿಮಾದಲ್ಲಿ ಕೂಡ ಕಿಯಾರಾ ನಟಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಆ ಸಿನಿಮಾದಿಂದ ಹೊರಬಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:33 pm, Fri, 25 April 25