ಗೋಮಾಂಸ ಮತ್ತು ಅಶ್ಲೀಲ ಸಿನಿಮಾ ನಿಷೇಧವನ್ನು ಖಂಡಿಸಿದ್ದ ಕಿಯಾರಾ ಅಡ್ವಾಣಿ

ಗೋಮಾಂಸ ಹಾಗೂ ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧದ ವಿರುದ್ಧ 2015ರಲ್ಲಿ ನಟಿ ಕಿಯಾರಾ ಅಡ್ವಾಣಿ ಮಾತನಾಡಿದ್ದ ಹಳೇ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಪರ-ವಿರೋಧ ಚರ್ಚೆ ಹಾಗೂ ಭಾರಿ ವಿವಾದ ಸೃಷ್ಟಿಸಿದೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.

ಗೋಮಾಂಸ ಮತ್ತು ಅಶ್ಲೀಲ ಸಿನಿಮಾ ನಿಷೇಧವನ್ನು ಖಂಡಿಸಿದ್ದ ಕಿಯಾರಾ ಅಡ್ವಾಣಿ
ಕಿಯಾರಾ

Updated on: May 19, 2026 | 7:07 AM

ಸೆಲೆಬ್ರಿಟಿಗಳು ಒಮ್ಮೊಮ್ಮೆ ನೀಡುವ ಹೇಳಿಕೆ ಅವರಿಗೆ ಮುಳುವಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ನೀಡಿದ ಹೇಳಿಕೆ ಮತ್ತೆ ಮತ್ತೆ ಚರ್ಚೆ ಆಗುತ್ತದೆ. ಈಗ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದಶಕಗಳ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಿಯಾರಾ ನೀಡಿದ್ದ ಹೇಳಿಕೆ ಇದಾಗಿದೆ. ಗೋಮಾಂಸ ಹಾಗೂ ಅಶ್ಲೀಲ ಸಿನಿಮಾ ಬ್ಯಾನ್ ವಿಷಯವಾಗಿ ಅವರು ಮಾತನಾಡಿದ್ದರು.

1. ಕಿಯಾರಾ ಅಡ್ವಾಣಿ ವೈರಲ್ ವಿಡಿಯೋ 

2. ಅಶ್ಲೀಲ ಸೈಟ್ ಹಾಗೂ ಗೋಮಾಂಸ ಬಗ್ಗೆ ಹೇಳಿಕೆ

3. ದಶಕಗಳ ಬಳಿಕ ವೈರಲ್ ಆಯ್ತು ವಿಡಿಯೋ

2015ರಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮಾಂಸ ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಿತ್ತು. ಕೇಂದ್ರ ಸರ್ಕಾರ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿತ್ತು. ಈ ಬಗ್ಗೆ ಕಿಯಾರಾ ಈ ಪ್ರತಿಕ್ರಿಯೆ ನೀಡಿದ್ದರು. ಸೆನ್ಸಾರ್‌ಶಿಪ್ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದ ಅವರು, ‘ಮೊದಲು ಗೋಮಾಂಸ, ಈಗ ಪೋರ್ನ್ ನಿಷೇಧಿಸಲಾಗಿದೆ. ಮುಂದೆ ಏನಾಗುತ್ತದೆಯೋ ಯಾರಿಗೂ ಗೊತ್ತಿಲ್ಲ. ಇದು ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನೇ ಕಸಿದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಗಳು ಬೆಳೆದು ದೊಡ್ಡವಳಾದಮೇಲೆ ಬಾಯ್​​ಫ್ರೆಂಡ್ ಮಾಡಿಕೊಂಡ್ರೆ? ಕಿಯಾರಾ ಕೊಟ್ಟ ಉತ್ತರ ಏನು?

ಈ ಹಳೇ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಕಿಯಾರಾ ಅವರನ್ನು ದೇಶವಿರೋಧಿ ಎಂದು ಟೀಕಿಸಿದರೆ, ಇನ್ನು ಕೆಲವರು ‘ಇದು ಹತ್ತು ವರ್ಷಗಳ ಹಳೆಯ ವಿಡಿಯೋ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ’ ಎಂದು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಯಶ್ ಜೊತೆ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ

ನಟಿ ಕಿಯಾರಾ ಅಡ್ವಾಣಿ ಸದ್ಯ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಾಯಿಯಾಗಿರುವ ಕಿಯಾರಾ, ಈ ಸಾಹಸ ಪ್ರಧಾನ ಆಕ್ಷನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್​ಗೆ  ದೊಡ್ಡ ಮಟ್ಟದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಅವರ ಪಾತ್ರದ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us