ನೆಪೋಟಿಸಂ ಬೆಳೆಯಲು ಪ್ರೇಕ್ಷಕರೇ ಕಾರಣ ಎಂದ ಕೃತಿ ಸನೋನ್
ಕೃತಿ ಸನೋನ್ ನೆಪೋ ಕಿಡ್ ಅಲ್ಲ. ಆದರೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಅವರು ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಬಂದಿದೆ. ಈಗ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ. ಟ್ಯಾಲೆಂಟ್ ಇದ್ದರೆ ಮಾತ್ರ ಯಶಸ್ಸು ಕಾಣಬಹುದು ಎಂಬುದು ಕೃತಿ ಸನೋನ್ ಅಭಿಪ್ರಾಯ.
ಇತ್ತೀಚೆಗೆ ನೆಪೋಟಿಸಂ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವರು ನೆಪೋಟಿಸಂನ ಬೆಂಬಲಿಸಿದರೆ ಇನ್ನೂ ಕೆಲವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಬಾಲಿವುಡ್ನಲ್ಲಿ ನಿರಂತರವಾಗಿ ನೆಪೋಟಿಸಂ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕರಣ್ ಜೋಹರ್ ಅವರಂಥ ನಿರ್ಮಾಪಕರು ಸ್ಟಾರ್ ಕಿಡ್ಗಳಿಗೆ ಮಣೆ ಹಾಕುತ್ತಾರೆ. ಅವರು ನೆಪೋಟಿಸಂನ ತಂದೆ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಕೃತಿ ಸನೋನ್ ಅವರು ಮಾತನಾಡಿದ್ದಾರೆ. ಕೃತಿ ಸನೋನ್ ಈ ಬಗ್ಗೆ ಮಾತನಾಡಿದ್ದಾರೆ.
ಕೃತಿ ಸನೋನ್ ನೆಪೋ ಕಿಡ್ ಅಲ್ಲ. ಆದರೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಅವರು ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಬಂದಿದೆ. ಈಗ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ. ಟ್ಯಾಲೆಂಟ್ ಇದ್ದರೆ ಮಾತ್ರ ಯಶಸ್ಸು ಕಾಣಬಹುದು ಎಂಬುದು ಕೃತಿ ಸನೋನ್ ಅಭಿಪ್ರಾಯ.
‘ನೆಪೋಟಿಸಂಗೆ ಇಂಡಸ್ಟ್ರಿ ಮಾತ್ರ ಜವಾಬ್ದಾರಿ ಅಲ್ಲ. ಇದಕ್ಕೆ ಮಾಧ್ಯಮಗಳು ಮತ್ತು ಪ್ರೇಕ್ಷಕರು ಕೂಡ ಕಾರಣ. ಕೆಲವು ಸ್ಟಾರ್ ಮಕ್ಕಳ ಬಗ್ಗೆ ಮಾಧ್ಯಮಗಳು ಏನು ಹಾಕುತ್ತಿವೆ ಎಂಬುದನ್ನು ಪ್ರೇಕ್ಷಕ ನೋಡ ಬಯಸುತ್ತಾನೆ. ಪ್ರೇಕ್ಷಕರಿಗೆ ಅವರ ಬಗ್ಗೆ ಆಸಕ್ತಿ ಇರುವುದರಿಂದ ಅವರ ಜೊತೆ ಸಿನಿಮಾ ಮಾಡೋಣ ಎಂದು ಇಂಡಸ್ಟ್ರಿ ಭಾವಿಸುತ್ತದೆ. ಹಾಗಾಗಿ ಇದು ಒಂದು ವೃತ್ತ ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಪ್ರತಿಭಾವಂತರಾಗಿದ್ದರೆ ಮಾತ್ರ ನೀವು ಅಲ್ಲಿಗೆ ಬರುತ್ತೀರಿ ಎಂದು ನನಗೆ ಅನಿಸುತ್ತದೆ. ನೀವು ಪ್ರತಿಭಾವಂತರಲ್ಲದಿದ್ದರೆ ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕವಿಲ್ಲದಿದ್ದರೆ ನೀವು ಈ ಹಂತಕ್ಕೆ ಬರೋದಿಲ್ಲ’ ಎಂದಿದ್ದಾರೆ ಅವರು.
ಕೃತಿ ಸನೋನ್ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದಿದೆ. 2014ರಲ್ಲಿ ರಿಲೀಸ್ ಆದ ‘1-ನೇನೊಕ್ಕಡಿನೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದೇ ವರ್ಷ ‘ಹೀರೋಪಂತಿ’ ಸಿನಿಮಾದಲ್ಲಿ ಅವರು ನಟಿಸಿದರು. ಈ ಮೂಲಕ ಹಿಂದಿ ಚಿತ್ರರಂಗಕ್ಕೆ ಬಂದರು. ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಈ ವರ್ಷ ‘ಕ್ರ್ಯೂ’ ಹಾಗೂ ‘ದೋ ಪತ್ತಿ’ ಸಿನಿಮಾಗಳಲ್ಲಿ ಕೃತಿ ಸನೋನ್ ನಟಿಸಿದ್ದಾರೆ.
ಇದನ್ನೂ ಓದಿ: ಕೃತಿ ಸನೋನ್ ನಟಿಸುತ್ತಿದ್ದ ಬಯೋಪಿಕ್ ಅರ್ಧಕ್ಕೆ ಬಂದ್
2021ರಲ್ಲಿ ‘ಮಿಮಿ’ ಚಿತ್ರದ ನಟನೆಗೆ ಅವರು ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.