ಗಾಯಕ ಬಾದ್​ಶಾಗೆ ಸೇರಿದ ಬಾರ್​ ಮೇಲೆ ಬಾಂಬ್ ದಾಳಿ

singer Badshah: ಪಂಜಾಬಿ ಗಾಯಕ ಸಿಧು ಮೂಸೆವಾಲ ಅನ್ನು ಕೊಲೆ ಮಾಡಿದ್ದ ಅದೇ ಲಾರೆನ್ಸ್ ಬಿಷ್ಣೋಯಿ ಸಹಚರರು ಈಗ ಖ್ಯಾತ ಪಂಜಾಬಿ ಗಾಯಕ ಬಾದ್​ಶಾಗೆ ಸೇರಿದ ನೈಟ್ ಕ್ಲಬ್, ರೆಸ್ಟೊರೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ.

ಗಾಯಕ ಬಾದ್​ಶಾಗೆ ಸೇರಿದ ಬಾರ್​ ಮೇಲೆ ಬಾಂಬ್ ದಾಳಿ
Follow us
ಮಂಜುನಾಥ ಸಿ.
|

Updated on:Nov 28, 2024 | 7:38 AM

ಸಲ್ಮಾನ್ ಖಾನ್​ಗೆ ಜೀವನ ಬೆದರಿಕೆ ಹಾಕಿರುವ ಹಾಗೂ ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಖಿಯನ್ನು ಹತ್ಯೆ ಮಾಡಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹಚರರು ಇದೀಗ ಖ್ಯಾತ ಪಂಜಾಬಿ ಗಾಯಕ ಬಾದ್​ಶಾಗೆ ಸೇರಿದ ಬಾರ್ ಮತ್ತು ರೆಸ್ಟೊರೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಚಂಡೀಘಡದಲ್ಲಿರುವ ಬಾದ್​ಶಾ ಮಾಲೀಕತ್ವದ ಬಾರ್ ಮತ್ತು ರೆಸ್ಟೊರೆಂಟ್ ಮುಂಭಾಗದಲ್ಲಿ ಬಾಂಬ್ ಎಸೆಯಲಾಗಿದೆ. ಆದರೆ ಈ ದಾಳಿಯಲ್ಲಿಯೂ ಯಾರಿಗೂ ಹಾನಿ ಆಗಿಲ್ಲ. ಬಾರ್​ಗೂ ಹಾನಿ ಆಗಿಲ್ಲ.

ಬಾದ್​ಶಾರ ನೈಟ್​ಕ್ಲಬ್, ಚಂಢೀಘಡದ ಸೆಕ್ಟರ್ 26 ರಲ್ಲಿದ್ದು, ಇಲ್ಲಿದೆ ಐಟಿ ಮಂದಿ ಸೇರಿದಂತೆ ಶ್ರೀಮಂತ ಯುವಕ-ಯುವತಿಯರು ಪಾರ್ಟಿ ಮಾಡಲು ಆಗಮಿಸುತ್ತಾರೆ. ನವೆಂಬರ್ 27ರ ಮುಂಜಾನೆ 2:45 ರ ವೇಳೆಗೆ ಬೈಕ್​ನಲ್ಲಿ ಬಂದ ಇಬ್ಬರು ಬಾಂಬ್ ಅನ್ನು ನೈಟ್​ಕ್ಲಬ್ ಮುಂದೆ ಎಸೆದು ಪರಾರಿಯಾಗಿದ್ದಾರೆ. ಲಘು ಬಾಂಬ್​ಗಳನ್ನು ಎಸೆಯಲಾಗಿದ್ದು, ಇದರಿಂದ ಯಾವುದೇ ಹಾನಿ ಆಗಿಲ್ಲ. ಆಸ್ತಿಗೂ ಸಹ ಸಣ್ಣ ಪ್ರಮಾಣದ ಹಾನಿ ಆಗಿದೆ ಅಷ್ಟೆ.

ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿಯ ಸಹಚರರೇ ಆಗಿರುವ ಗೋಲ್ಡಿ ಬ್ರಾರ್, ರೋಹಿತ್ ಗದಾರ ಅವರುಗಳು ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಅವರು ಫೇಸ್​ಬುಕ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಬಾದ್​ಶಾಗೆ ಸೇರಿದ ಡಿಯೋರಾ ರೆಸ್ಟಾರೆಂಟ್ ಮತ್ತು ಸಿವಿಲ್ಲೀ ಬಾರ್​ ಮತ್ತು ಲಾಂಜ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದ್ದು, ಈ ಹಿಂದೆ ಬಾದ್​ಶಾ ಬಳಿ ಹಫ್ತಾ ಹಣ ಕೇಳಿದ್ದೆವು ಆದರೆ ಆತ ಕೊಡದೇ ನಿರ್ಲಕ್ಷ್ಯ ಮಾಡಿದ್ದ ಇದೇ ಕಾರಣಕ್ಕೆ ಈ ದಾಳಿ ಮಾಡಲಾಗಿದೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿಗಿಂತಲೂ ಕ್ರೂರ: ಮಾಜಿ ಗೆಳತಿ

2022 ರಲ್ಲಿ ನಿಧನವಾದ ಗಾಯಕ, ರಾಜಕಾರಣಿ ಸಿಧು ಮೂಸೆವಾಲ ಕೊಲೆಗೆ ಗೋಲ್ಡಿ ಬ್ರಾರ್ ಕಾರಣವಾಗಿದ್ದ. ಇದೀಗ ಇದೇ ವ್ಯಕ್ತಿ ಬಾದ್​ಶಾಗೆ ಸೇರಿದ ಆಸ್ತಿಯ ಮೇಲೆ ಬಾಂಬ್ ದಾಳಿ ಮಾಡಿಸಿದ್ದಾರೆ. ಇದೇ ಗ್ಯಾಂಗ್​ನವರು ಗಾಯಕನ ಹನಿ ಸಿಂಗ್, ಇತ್ತೀಚೆಗೆ ಸ್ಟಾರ್ ಆಗಿರುವ ದಿಲ್ಜೀತ್ ದೊಸ್ಸಾಂಜ್ ಅವರಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 am, Thu, 28 November 24

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!