‘ಸ್ತ್ರೀಲೋಲ’ ಟ್ಯಾಗ್​​ಗೆ ಕೂಲ್ ಆಗಿಯೇ ಉತ್ತರ ನೀಡಿದ ಗಾಯಕ ಕುಮಾರ್ ಸಾನು

ಪ್ರಸಿದ್ಧ ಗಾಯಕ ಕುಮಾರ್ ಸಾನು ಅವರ ಖಾಸಗಿ ಜೀವನದ ಬಗ್ಗೆ ಹಲವು ವದಂತಿಗಳಿವೆ. "ಸ್ತ್ರೀಲೋಲ" ಎಂಬ ಆರೋಪಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೊದಲ ವಿವಾಹ ಮತ್ತು ನಂತರದ ಸಂಬಂಧಗಳ ಬಗ್ಗೆ ಮಾತನಾಡುತ್ತಾ, ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಎರಡನೇ ವಿವಾಹದ ನಂತರ ಇಂತಹ ಆರೋಪಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಸ್ತ್ರೀಲೋಲ’ ಟ್ಯಾಗ್​​ಗೆ ಕೂಲ್ ಆಗಿಯೇ ಉತ್ತರ ನೀಡಿದ ಗಾಯಕ ಕುಮಾರ್ ಸಾನು
ಸಾನು
Edited By:

Updated on: Sep 19, 2025 | 10:30 AM

ಬಾಲಿವುಡ್‌ನ ಪ್ರಸಿದ್ಧ ಗಾಯಕ ಕುಮಾರ್ ಸಾನು (Kumar Saanu) ಅವರ ಖಾಸಗಿ ಜೀವನ ಯಾವಾಗಲೂ ಸುದ್ದಿಯಲ್ಲಿದೆ. ವದಂತಿಗಳು ಮತ್ತು ಆರೋಪಗಳಿಂದಾಗಿ ಕುಮಾರ್ ಸಾನು ಕೂಡ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಕುಮಾರ್ ಸಾನು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಆ ಬಳಿ ಇಬ್ಬರು ನಟಿಯರೊಂದಿಗೆ ಸಂಬಂಧ  ಹೊಂದಿದ್ದರು ಎನ್ನಲಾಗಿದೆ. ಈಗ ಅವರು ಎರಡನೇ ಮದುವೆ ಆಗಿ ಹಾಯಾಗಿದ್ದಾರೆ. ಅವರು ‘ಸ್ತ್ರೀಲೋಲ’ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಕುಮಾರ್ ಸಾನು ಅವರ ಮೊದಲ ಮದುವೆ ರೀಟಾ ಭಟ್ಟಾಚಾರ್ಯ ಅವರೊಂದಿಗೆ ಆಗಿತ್ತು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕುಮಾರ್ ಸಾನು ಮತ್ತು ರೀಟಾ ಅಂತಿಮವಾಗಿ 1994 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಕುಮಾರ್ ಸಾನು ಅವರ ಮೊದಲ ಪತ್ನಿಗೆ ಮೋಸ ಮಾಡಿದ ಆರೋಪ ಹೊರಿಸಲಾಯಿತು. ಆ ಸಮಯದಲ್ಲಿ, ಕುಮಾರ್ ಸಾನು ನಟಿ ಮೀನಾಕ್ಷಿ ಶೇಷಾರ್ಡಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಪ್ರೇಮ ಸಂಬಂಧದಿಂದಾಗಿ ಇಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ವದಂತಿಗಳು ಹರಡಿತು. ಆದರೆ ಕುಮಾರ್ ಸಾನು ಎಲ್ಲಾ ವದಂತಿಗಳನ್ನು ನಿರಾಕರಿಸಿದರು ಮತ್ತು ಮೀನಾಕ್ಷಿ ಮತ್ತು ನಾನು ಎಂದಿಗೂ ಪ್ರಣಯ ಸಂಬಂಧವನ್ನು ಹೊಂದಿರಲಿಲ್ಲ ಎಂದು ಹೇಳಿದರು. ಏತನ್ಮಧ್ಯೆ, ಸಂದರ್ಶನವೊಂದರಲ್ಲಿ, ಕುಮಾರ್ ಸಾನು ತಮ್ಮ ಖಾಸಗಿ ಜೀವನದ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದರು.

ಇದನ್ನೂ ಓದಿ
ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ
ಸೌಂದರ್ಯಾ ಜೊತೆ ವಿಮಾನದಲ್ಲಿ ಕನ್ನಡದ ಈ ನಟಿಯೂ ಇರಬೇಕಿತ್ತು
‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಬೇಸರ
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

‘ಮೀನಾಕ್ಷಿ ಮತ್ತು ನಾನು ಎಂದಿಗೂ ಭೇಟಿಯಾಗಲಿಲ್ಲ. ಆದರೆ ಇನ್ನೂ ವದಂತಿಗಳು ಹರಡುತ್ತಿವೆ. ನಾನು ಒಬ್ಬ ಸ್ತ್ರೀಪ್ರಿಯ ಎಂಬ ಆರೋಪ ನಾನು ಆಗಾಗ್ಗೆ ಕೇಳಿದ್ದೇನೆ.  ನಾನು ನಿಜವಾಗಿಯೂ ಸ್ತ್ರೀಪ್ರಿಯನಾಗಿದ್ದರೆ, ನನ್ನ ಎರಡನೇ ಮದುವೆಯ ನಂತರವೂ ಅಂತಹ ವದಂತಿಗಳು ಹರಡುತ್ತಿದ್ದವು. ಆದರೆ ಹಾಗೆ ಹರಡಿಲ್ಲವಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್​ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು

‘ನಾನು ಒಬ್ಬ ಸ್ತ್ರೀಪ್ರೇಮಿ.  ಇದನ್ನು ನಾನು ಆಗಾಗ್ಗೆ ಕೇಳಿದ್ದೇನೆ. ನಾನು ಸಲೋನಿಯನ್ನು ಮದುವೆಯಾಗಿ 23 ವರ್ಷಗಳಾಗಿವೆ. ಈ ಅವಧಿಯಲ್ಲಿ ನನ್ನ ಬಗ್ಗೆ ಅಂತಹ ಆರೋಪ ಬಂದಿಲ್ಲವಲ್ಲ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.