ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!

ಖ್ಯಾತ ನಟಿ ಮಧುಬಾಲ ಅವರ ಸಹೋದರಿಗೆ ಈ ದುಸ್ಥಿತಿ ಬಂದಿದೆ. ಸೊಸೆಯ ಶೋಷಣೆಯಿಂದ ಈ ರೀತಿ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!
ಮಧುಬಾಲಾ
Follow us
TV9 Web
| Updated By: ಮದನ್​ ಕುಮಾರ್​

Updated on: Feb 04, 2022 | 9:02 AM

ಹಿಂದಿ ಚಿತ್ರರಂಗದಲ್ಲಿ ಮಧುಬಾಲಾ (Madhubala) ಅವರು ಸೂಪರ್​ ಸ್ಟಾರ್​ ನಟಿಯಾಗಿ ಮಿಂಚಿದ್ದರು. ಇಂದಿಗೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಅವರ ಸಹೋದರಿಯ ಬದುಕಿನಲ್ಲಿ ದುರಂತ ನಡೆದಿದೆ. ಮಧುಬಾಲ ಅವರ ಸಹೋದರಿ ಕನೀಜ್​ (Kaniz Balsara) ಅವರ ಬದುಕು ಬೀದಿಗೆ ಬಂದಿದೆ. ಕನೀಜ್​ ಅವರಿಗೆ ಈಗ 96 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಹಣವಿಲ್ಲದೇ, ಕುಟುಂಬದ ಸಹಕಾರ ಇಲ್ಲದೇ ನಡುರಸ್ತೆಯಲ್ಲಿ ನಿಲ್ಲುವಂತಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಏಕಾಂಗಿಯಾಗಿ ನಿಂತ ಬಗ್ಗೆ ವರದಿ ಆಗಿದೆ. ತೀರಾ ಅಸಹಾಯಕ ಸ್ಥಿತಿಯಲ್ಲಿ ಇರುವ ಅವರಿಗೆ ಆರ್​ಟಿಪಿಸಿಆರ್​ ಟೆಸ್ಟ್ (RTPCR Test)​ ಮಾಡಿಸಲು ಕೂಡ ಹಣ ಇಲ್ಲದಂತಾಗಿದೆ. ಅವರ ಈ ದುಸ್ಥಿತಿಗೆ ಸೊಸೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಗ ಮತ್ತು ಸೊಸೆಯ ಜೊತೆಗೆ ಕನೀಜ್​ ಅವರು ನ್ಯೂಜಿಲೆಂಡ್​ಗೆ ತೆರಳಿದ್ದರು. ಆದರೆ ಅವರು ಈಗ ಇಂಥ ಹೀನಾಯ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್​ನಿಂದ ಮರಳುವಂತಾಗಿದೆ. 96ನೇ ವಯಸ್ಸಿನಲ್ಲಿ ಅವರನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಭಾರತಕ್ಕೆ ಕಳಿಸಲಾಗಿದೆ!

ಜ.29ರಂದು ಕನೀಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರು. ಈ ಸುದ್ದಿಯನ್ನು ಮುಂಬೈನಲ್ಲಿ ಇರುವ ಅವರ ಮಗಳು ಪರ್ವೀಸ್​ಗೆ ದೂರದ ಸಂಬಂಧಿಯೊಬ್ಬರು ಫೋನ್​ ಮಾಡಿ ತಿಳಿಸಿದರು. ಇಷ್ಟೆಲ್ಲ ಆಗಿದ್ದಕ್ಕೆ ಕಾರಣ ಏನೆಂಬುದನ್ನು ಪರ್ವೀಸ್​ ವಿವರಿಸಿದ್ದಾರೆ. ಈ ಬಗ್ಗೆ ‘ಟೈಮ್ಸ್​ ಆಫ್​ ಇಂಡಿಯಾ’ ವರದಿ ಪ್ರಕಟಿಸಿದೆ. ‘ಮಗ ಫಾರೂಕ್​ ಮತ್ತು ಸೊಸೆ ಸಮೀನಾ ಜೊತೆ 17-18 ವರ್ಷದ ಹಿಂದೆ ನಮ್ಮ ತಂದೆ-ತಾಯಿ (ಕನೀಜ್​) ನ್ಯೂಜಿಲೆಂಡ್​ಗೆ ಹೋಗಿದ್ದರು. ಮಗನನ್ನು ಬಿಟ್ಟಿರಲು ಆಗುವುದಿಲ್ಲ ಅಂತ ಅವರು ಅಲ್ಲಿಗೆ ಹೋಗಿದ್ದರು’ ಎಂದು ಪರ್ವೀಸ್​ ಹೇಳಿದ್ದಾರೆ.

‘ನನ್ನ ಸಹೋದರ ಒಳ್ಳೆಯವನು. ಆದರೆ ಸಮೀನಾಗೆ ನನ್ನ ತಂದೆ-ತಾಯಿಯನ್ನು ಕಂಡರೆ ಆಗುವುದಿಲ್ಲ. ಅತ್ತೆ-ಮಾವನಿಗೆ ಆಕೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತಿರದ ರೆಸ್ಟೋರೆಂಟ್​ನಿಂದ ಅಣ್ಣ ಊಟ ತರಿಸುತ್ತಿದ್ದ. ಅಣ್ಣನ ಮಗಳಿಗೆ ಮದುವೆಯಾಗಿ ಆಸ್ಪ್ರೇಲಿಯಾಗೆ ತೆರಳಿದ್ದಾಳೆ. ಆಕೆ ಕೂಡ ನಮ್ಮ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ. ನಮ್ಮ ಅಣ್ಣ ಒಂದು ತಿಂಗಳ ಹಿಂದೆ ತೀರಹೋದ. ಅವನ ಮರಣದ ನಂತರ ಅಮ್ಮನಿಗೆ ಈ ಸ್ಥಿತಿ ಆಗಿದೆ’ ಎಂದು ಪರ್ವೀಸ್​ ಹೇಳಿದ್ದಾರೆ.

‘96 ವರ್ಷದ ವೃದ್ಧೆಯನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಕಳಿಸಿದ ಸಮೀನಾ ಸರಿಯಾಗಿ ನಮಗೆ ಮಾಹಿತಿಯನ್ನೂ ತಿಳಿಸಲಿಲ್ಲ. ವಿಮಾನ ಮುಂಬೈನಲ್ಲಿ ಲ್ಯಾಂಡ್​ ಆಗುವುದಕ್ಕಿಂತ ಕೇವಲ 8 ಗಂಟೆ ಮುನ್ನ ಬೇರೆ ಯಾರಿಗೋ ಫೋನ್​ ಮಾಡಿ ಹೇಳಿದ್ದಾಳೆ. ಅವರು ನನಗೆ ಮಾಹಿತಿ ತಿಳಿಸಿದಾಗ ನಾನು ಬೇರೆ ಕಡೆ ಇದ್ದೆ. ಕೆಲವೇ ಗಂಟೆಗಳಲ್ಲಿ ನಾನು ಏರ್​ಪೋರ್ಟ್​ ತಲುಪಬೇಕಾಯಿತು. ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ನನಗೆ ಕರೆ ಮಾಡಿದರು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಅಮ್ಮನ ಬಳಿ ಹಣ ಇರಲಿಲ್ಲ’ ಎಂದು ಪರ್ವೀಸ್​ ವಿವರಿಸಿದ್ದಾರೆ.

ಇದನ್ನೂ ಓದಿ:

ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್