‘ನಾವು ಸೂಚಿಸಿದ ಬದಲಾವಣೆ ಮಾಡಿ’; ಮುಸ್ಲಿಂ ಸಮುದಾಯದವರಿಂದಲೂ ‘ಪಠಾಣ್​’ ಚಿತ್ರಕ್ಕೆ ವಿರೋಧ

| Updated By: ರಾಜೇಶ್ ದುಗ್ಗುಮನೆ

Updated on: Dec 19, 2022 | 8:47 AM

‘ಪಠಾಣ್​’ ಸಿನಿಮಾ ವಿವಾದ ಮಾಡಿಕೊಂಡಿದೆ. ಚಿತ್ರಕ್ಕೆ ಮುಸ್ಲಿಂ ಧರ್ಮದ ಕೆಲವರು ಕೊಂಕು ತೆಗೆದಿದ್ದಾರೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

‘ನಾವು ಸೂಚಿಸಿದ ಬದಲಾವಣೆ ಮಾಡಿ’; ಮುಸ್ಲಿಂ ಸಮುದಾಯದವರಿಂದಲೂ ‘ಪಠಾಣ್​’ ಚಿತ್ರಕ್ಕೆ ವಿರೋಧ
ಶಾರುಖ್ ಖಾನ್
Follow us on

ಬಾಲಿವುಡ್ ಚಿತ್ರಗಳು ರಿಲೀಸ್ ಆಗುತ್ತಿವೆ ಎಂದರೆ ಅದಕ್ಕೆ ಬಾಯ್ಕಾಟ್ ಬಿಸಿ ತಾಗೋದು ಸಾಮಾನ್ಯ ಎಂಬಂತಾಗಿದೆ. ಆಮಿರ್ ಖಾನ್ (Aamir Khan), ರಣಬೀರ್ ಕಪೂರ್ ಮೊದಲಾದ ಹೀರೋಗಳ ಸಿನಿಮಾಗಳು ಈ ತೊಂದರೆ ಅನುಭವಿಸಿವೆ. ಈಗ ಶಾರುಖ್ ಖಾನ್ ಅವರ ಸರದಿ. ಅವರ ನಟನೆಯ ‘ಪಠಾಣ್​’ ಸಿನಿಮಾಗೆ (Pathan Movie) ಸಾಕಷ್ಟು ವಿರೋಧ ವ್ಯಕ್ತವಾಗಿದೆ. ‘ಬೇಷರಂ ರಂಗ್​..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ವಿರೋಧ ವ್ಯಕ್ತವಾಗಲು ಪ್ರಮುಖ ಕಾರಣ. ಈಗ ‘ಪಠಾಣ್​’ ಚಿತ್ರಕ್ಕೆ ಮುಸ್ಲಿಂ ಸಮುದಾಯದವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಕೆಲ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.

2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರ ಹೀನಾಯವಾಗಿ ಸೋತಿತು. ಇದಾದ 4 ವರ್ಷಗಳ ಬಳಿಕ ಶಾರುಖ್ ಖಾನ್ ಅವರು ‘ಪಠಾಣ್​’ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಮಾಸ್ ಆ್ಯಕ್ಷನ್ ಮೂಲಕ ಸದ್ದು ಮಾಡಲು ರೆಡಿ ಆಗಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಕಟ್ಟುಮಸ್ತಾದ ದೇಹ ಕೂಡ ಸಾಕಷ್ಟು ಗಮನ ಸೆಳೆದಿದೆ. ಈ ಮಧ್ಯೆ ಸಿನಿಮಾ ವಿವಾದ ಮಾಡಿಕೊಂಡಿದೆ. ಈಗ ಈ ಚಿತ್ರಕ್ಕೆ ಮುಸ್ಲಿಂ ಧರ್ಮದ ಕೆಲವರು ಕೊಂಕು ತೆಗೆದಿದ್ದಾರೆ.

‘ಪಠಾಣ್​’ ಚಿತ್ರ ಟೈಟಲ್ ಮೂಲಕ ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಮಧ್ಯಪ್ರದೇಶದ ಉಲಾಮಾ ಹೆಸರಿನ ಮುಸ್ಲಿಂ ಮಂಡಳಿ ಈ ಟೈಟಲ್ ಬಗ್ಗೆ ಅಪಸ್ವರ ತೆಗೆದಿದೆ. ‘ಮುಸ್ಲಿಂ ಸಮುದಾಯದಲ್ಲಿ ಪಠಾಣರು ಅತ್ಯಂತ ಗೌರವಾನ್ವಿತರು. ಈ ಸಿನಿಮಾದಲ್ಲಿ ಪಠಾಣರಷ್ಟೇ ಅಲ್ಲ, ಇಡೀ ಮುಸ್ಲಿಂ ಸಮುದಾಯಕ್ಕೆ ಮಾನಹಾನಿ ಮಾಡಲಾಗುತ್ತಿದೆ. ಚಿತ್ರಕ್ಕೆ ಪಠಾಣ್ ಎಂದು ಹೆಸರು ಇಡಲಾಗಿದೆ ಮತ್ತು ಈ ಚಿತ್ರದ ಹಾಡಿನಲ್ಲಿ ಮಹಿಳೆಯರು ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಪಠಾಣರನ್ನು ತಪ್ಪಾಗಿ ಚಿತ್ರಿಸಲಾಗಿದೆ’ ಎಂದು ಮಂಡಳಿ ಹೇಳಿದೆ.

ಇದನ್ನೂ ಓದಿ
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಇದನ್ನೂ ಓದಿ: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​ ಖಾನ್​ಗೆ ನೇರ ಪ್ರಶ್ನೆ

‘ನಾವು ಹೇಳಿದ ಬದಲಾವಣೆಗಳನ್ನು ಮಾಡಬೇಕು. ಒಂದೊಮ್ಮೆ ಅದು ಆಗದೇ ಇದ್ದರೆ ಈ ಸಿನಿಮಾ ಮಧ್ಯ ಪ್ರದೇಶದಲ್ಲಿ ರಿಲೀಸ್ ಆಗಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ’ ಎಂದು ಮಂಡಳಿ ಎಚ್ಚರಿಕೆ ನೀಡಿದೆ. ಸಿನಿಮಾ ಬಗ್ಗೆ ಹರಡುತ್ತಿರುವ ನೆಗೆಟಿವಿಟಿ ಬಗ್ಗೆ ಶಾರುಖ್ ಖಾನ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಫ್ಯಾನ್ಸ್ ಸಿನಿಮಾ ಗೆಲ್ಲಿಸುತ್ತಾರೆ ಎಂಬ ಭರವಸೆಯಲ್ಲಿ ಅವರಿದ್ದಾರೆ. ಈ ಮಧ್ಯೆ ಮುಸ್ಲಿಂ ಮಂಡಳಿ ಕೂಡ ಚಿತ್ರದ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Mon, 19 December 22