ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ಗೆ (Vicky Kaushal) ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ಗೆ ಈತ ಕೊಲೆ ಬೆದರಿಕೆ ಹಾಕಿದ್ದ. ಪಂಜಾಬಿ ಗಾಯಕ ಸಿಧೂ ಮೂಸೆ ವಾಲಾ ಅವರ ಹತ್ಯೆ ನಂತರದಲ್ಲಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಈ ರೀತಿಯ ಬೆದರಿಕೆಗಳು ಬಂದಿದ್ದವು. ಈ ಕಾರಣಕ್ಕೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
‘ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ಗೆ ಕೊಲೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ’ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಈ ಮೊದಲು ಈ ಪ್ರಕರಣದ ಸಂಬಂಧ ಪೊಲೀಸರು ಅನಾಮಧೆಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ಮುಂಬೈ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.
Maharashtra | Police register a case against an unidentified man and initiate an investigation for allegedly giving life threats to actors Katrina Kaif and Vicky Kaushal through social media. Case registered at Santacruz Police Station: Mumbai Police
(File photos) pic.twitter.com/hQTaTMnB9a
— ANI (@ANI) July 25, 2022
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕಳೆದ ವರ್ಷ ಮದುವೆ ಆದರು. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಈ ದಂಪತಿಗೆ ಕೊಲೆ ಬೆದರಿಕೆ ಬಂದಿದ್ದು ಸಾಕಷ್ಟು ಆತಂಕ ಮೂಡಿಸಿತ್ತು. ಈ ಸಂಬಂಧ ವಿಕ್ಕಿ ಕೌಶಲ್ ಅವರು ದೂರು ದಾಖಲು ಮಾಡಿದ್ದರು. ಈಗ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ವ್ಯಕ್ತಿ ಯಾವ ರೀತಿಯ ಉದ್ದೇಶ ಹೊಂದಿದ್ದ ಎಂಬುದು ವಿಚಾರಣೆ ನಂತರವೇ ಬಯಲಿಗೆ ಬರಬೇಕಿದೆ.
#UPDATE | Man, accused of threatening Katrina Kaif and Vicky Kaushal through social media, arrested by Police: Mumbai Police
— ANI (@ANI) July 25, 2022
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮಾತ್ರವಲ್ಲದೆ ಇನ್ನೂ ಅನೇಕರಿಗೆ ಈ ರೀತಿಯ ಕೊಲೆ ಬೆದರಿಕೆ ಬಂದ ಉದಾಹರಣೆ ಇದೆ. ಜೂನ್ ತಿಂಗಳಲ್ಲಿ ಸ್ವರಾ ಭಾಸ್ಕರ್ಗೆ ಇದೇ ರೀತಿಯ ಬೆದರಿಕೆ ಬಂದಿತ್ತು. ಮುಂಬೈನ ವರ್ಸೋವಾದಲ್ಲಿರುವ ಮನೆಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ಸ್ವರಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತೀಚೆಗೆ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಲಾರೆನ್ಸ್ ಗ್ಯಾಂಗ್ನವರು ಕೊಲೆ ಬೆದರಿಕೆ ಹಾಕಿದ್ದರು.
ನಟಿ ಕಂಗನಾ ರಣಾವತ್ ಅವರು ಸದಾ ವಿವಾದದ ಮೂಲಕ ಗುರುತಿಸಿಕೊಳ್ಳುತ್ತಾರೆ. ಅವರು ಬಲಪಂಥೀಯ ಚಿಂತನೆಗಳಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದಾರೆ. 2021ರಲ್ಲಿ ಅವರಿಗೂ ಕೊಲೆ ಬೆದರಿಕೆ ಹಾಕಲಾಗಿತ್ತು.