‘ಸಿನಿಮಾ ಮಾಡುತ್ತೇನೆ ಆದರೆ..’; ಶಾರುಖ್​ ಖಾನ್​ಗೆ ದೊಡ್ಡ ಷರತ್ತು ಹಾಕಿದ ನಿರ್ದೇಶಕ ಮಣಿರತ್ನಂ

| Updated By: ರಾಜೇಶ್ ದುಗ್ಗುಮನೆ

Updated on: Jan 11, 2024 | 11:44 AM

ಶಾರುಖ್ ಖಾನ್ ಮತ್ತು. ಮಣಿರತ್ನಂ ಮತ್ತೆ ಒಟ್ಟಿಗೆ ಕೆಲಸ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಲು ರೆಡಿ ಇದ್ದಾರೆ. ಆದರೆ, ಒಂದು ಷರತ್ತನ್ನು ಮಣಿರತ್ನಂ ಇಟ್ಟಿದ್ದಾರೆ.

‘ಸಿನಿಮಾ ಮಾಡುತ್ತೇನೆ ಆದರೆ..’; ಶಾರುಖ್​ ಖಾನ್​ಗೆ ದೊಡ್ಡ ಷರತ್ತು ಹಾಕಿದ ನಿರ್ದೇಶಕ ಮಣಿರತ್ನಂ
ಮಣಿರತ್ನಂ-ಶಾರುಖ್ ಖಾನ್
Follow us on

ಮಣಿರತ್ನಂ ಸಿನಿಮಾಗಳಲ್ಲಿನ ಜೀವಂತಿಕೆಯನ್ನು ಅಭಿಮಾನಿಗಳು ಸಾಕಷ್ಟು ಇಷ್ಟಪಡುತ್ತಾರೆ. ಅವರು ಆಯ್ದುಕೊಳ್ಳುವ ಕಥೆ ಮತ್ತು ಅದನ್ನು ಕಟ್ಟಿಕೊಡುವ ರೀತಿ ಸಿನಿಪ್ರಿಯರಿಗೆ ಇಷ್ಟ ಆಗುತ್ತದೆ. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕ ಸ್ಟಾರ್​ ಹೀರೋಗಳ ಕನಸು. ಆ ಕನಸು ಅಷ್ಟು ಸುಲಭದಲ್ಲಿ ಈಡೇರುವುದಿಲ್ಲ. ವಿಶೇಷ ಎಂದರೆ ಶಾರುಖ್ ಖಾನ್ (Shah rukh Khan) ಅವರಿಗೂ ಈ ಆಸೆ ಇದೆ. ಈ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಮಣಿರತ್ನಂ ಅವರು ದೊಡ್ಡ ಷರತ್ತನ್ನು ಹಾಕಿದ್ದಾರೆ.

ಶಾರುಖ್ ಖಾನ್ ಹಾಗೂ ಮಣಿ ರತ್ನಂ ಅವರು ‘ದಿಲ್​ ಸೇ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರ ಬಂದಿದ್ದು 26 ವರ್ಷಗಳ ಹಿಂದೆ. ಈಗ ಶಾರುಖ್ ಖಾನ್ ಅವರು ಸೂಪರ್​ಸ್ಟಾರ್​. ಮಣಿರತ್ನಂ ಕೂಡ ದೊಡ್ಡ ನಿರ್ದೇಶಕ. ಇಬ್ಬರೂ ಮತ್ತೆ ಕೆಲಸ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಲು ರೆಡಿ ಇದ್ದಾರೆ. ಆದರೆ, ಒಂದು ಷರತ್ತನ್ನು ಮಣಿರತ್ನಂ ಇಟ್ಟಿದ್ದಾರೆ. ಇದನ್ನು ಪೂರೈಸಲು ಶಾರುಖ್ ಕೂಡ ರೆಡಿ ಇದ್ದಾರೆ.

ಕಾರ್ಯಕ್ರಮ ಒಂದರಲ್ಲಿ ಶಾರುಖ್ ಖಾನ್ ಹಾಗೂ ಮಣಿರತ್ನಂ ಒಟ್ಟಿಗೆ ವೇದಿಕೆ ಹಂಚಿಕೊಂಡರು. ‘ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಬೇಕಿದ್ದರೆ ಬೇಡಿಕೊಳ್ಳುತ್ತೇನೆ. ದಯವಿಟ್ಟು ನನಗಾಗಿ ಒಂದು ಸಿನಿಮಾ ಮಾಡಿ. ನೀವು ಹೇಳಿದರೆ ವಿಮಾನದ ಮೇಲೆ ನಿಂತು ‘ಚಯ್ಯ ಚಯ್ಯ’ ಎಂದು ಡ್ಯಾನ್ಸ್ ಮಾಡುತ್ತೇನೆ’ ಎಂದು ಶಾರುಖ್ ಖಾನ್ ಹೇಳಿದರು.

ಆಗ ನೆರೆದಿದ್ದವರು ಶಾರುಖ್ ಖಾನ್ ಜೊತೆ ಸಿನಿಮಾ ಯಾವಾಗ ಎಂದು ಹೇಳಿ ಎಂದು ಮಣಿರತ್ನಂ ಬಳಿ ಕೇಳಿದರು. ‘ನಾನು ವಿಮಾನ ಖರೀದಿ ಮಾಡಿದಾಗ’ ಎಂದರು ಮಣಿರತ್ನಂ. ಇದಕ್ಕೆ ಶಾರುಖ್ ತಕ್ಷಣಕ್ಕೆ ಉತ್ತರಿಸಿದರು. ‘ನಾನು ನಿಮಗಾಗಿ ವಿಮಾನ ಖರೀದಿಸಲೇ’ ಎಂದು ಕೇಳಿದರು ಶಾರುಖ್. ಇದಕ್ಕೆ ಮಣಿರತ್ನಂ ಒಪ್ಪಿಗೆ ಸೂಚಿಸಿದರು. ‘ನೀವು ನನಗಾಗಿ ವಿಮಾನ ಖರೀದಿಸಿದರೆ ನಿಮ್ಮ ಸಿನಿಮಾ ಮಾಡುತ್ತೇನೆ’ ಎಂದರು ಮಣಿರತ್ನಂ. ‘ನನ್ನ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಈಗ ವಿಮಾನ ದೊಡ್ಡ ವಿಚಾರ ಅಲ್ಲ. ನಾನು ಬರುತ್ತಿದ್ದೇನೆ’ ಎಂದರು. ಈ ಮೂಲಕ ವಿಮಾನ ಖರೀದಿಸುವುದಾಗಿ ಹೇಳಿದರು. ಅಲ್ಲಿದ್ದವರು ನಕ್ಕರು. ಇಬ್ಬರೂ ಮತ್ತೆ ಒಂದಾಗೋದು ಯಾವಾಗ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ

ಶಾರುಖ್ ಖಾನ್ ಅವರು ಫ್ಲೈಟ್ ಮೇಲೆ ‘ಚಯ್ಯ ಚಯ್ಯ’ ಹಾಡಿಗೆ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳೋಕೂ ಒಂದು ಕಾರಣವಿದೆ. ‘ದಿಲ್​ ಸೇ’ ಚಿತ್ರದ ‘ಚಯ್ಯ ಚಯ್ಯ..’ ಹಾಡು ಸೂಪರ್ ಹಿಟ್ ಆಗಿತ್ತು. ಚಲಿಸುತ್ತಿರುವ ಟ್ರೇನ್​ ಮೇಲೆ ವಿಶೇಷ ಹಾಡನ್ನು ಶೂಟ್ ಮಾಡಲಾಗಿತ್ತು. ಈಗಲೂ ಹಾಡಿಗೆ ಮಾರುಕಟ್ಟೆ ಇದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರಿಗೂ ಈ ಹಾಡು ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ