
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ‘ಮೆಟ್ ಗಾಲಾ 2025’ರಲ್ಲಿ ಮಿಂಚಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಶಾರುಖ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಖ್ ಖಾನ್ ತಮ್ಮ ಐಕಾನಿಕ್ ಪೋಸ್ನ ಕೊಟ್ಟಿದ್ದಾರೆ. ಈ ವೇಳೆ ಎಲ್ಲಾ ಫ್ಯಾನ್ಸ್ ‘ಎಸ್ಆರ್ಕೆ..’, ‘ಎಸ್ಆರ್ಕೆ’ ಎಂದು ಕೂಗಿದ್ದಾರೆ. ಈ ವೇಳೆ ಅಭಿಮಾನಿಗಳತ್ತ ಮುಖ ಮಾಡಿದ ಶಾರುಖ್ ಖಾನ್ ಅವರು ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಕೆಲವು ಅದೃಷ್ಟವಂತರಿಗೆ ಶೇಕ್ ಹ್ಯಾಂಡ್ ಕೂಡ ಸಿಕ್ಕಿದೆ.
ಶಾರುಖ್ ಖಾನ್ ಅವರ ಉಡುಗೆಯನ್ನು ಸಬ್ಯಸಾಚಿ ಮುಖರ್ಜೀ ಅವರು ರೆಡಿ ಮಾಡಿದ್ದರು. ಇದು ಶಾರುಖ್ ಖಾನ್ ಅವರ ಮೊದಲ ಮೆಟ್ ಗಾಲಾ. ಕತ್ತಿನ ಮೇಲೆ ಚಿತ್ರ-ವಿಚಿತ್ರ ಮಣಿ ಸರಗಳನ್ನು ಶಾರುಖ್ ಖಾನ್ ಅವರು ಧರಿಸಿದ್ದರು. ವಿಶೇಷ ಎಂದರೆ ‘K’ ಹೆಸರಿನ ಲಾಕೆಟ್ ಕೂಡ ಅವರ ಕತ್ತಿನ ಮೇಲೆ ರಾರಾಜಿಸಿದೆ. K ಎಂದರೆ ‘ಕಿಂಗ್ ಖಾನ್’ ಎಂಬ ಅರ್ಥವನ್ನು ನೀಡುತ್ತದೆ. ಅಭಿಮಾನಿಗಳು ಪ್ರೀತಿಯಿಂದ ಶಾರುಖ್ ಖಾನ್ ಅವರನ್ನು ಕಿಂಗ್ ಖಾನ್ ಎಂದೇ ಕರೆಯುತ್ತಾರೆ.
ಶಾರುಖ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ವಿಡಿಯೋಗಳು ವೈರಲ್ ಆಗಿವೆ. ನ್ಯೂಯಾರ್ಕ್ನ ಪಾಪರಾಜಿಗಳು ಶಾರುಖ್ ಖಾನ್ ಅವರನ್ನು ಪ್ರೀತಿಯಿಂದ ಕಿಂಗ್ ಎಂದು ಕರೆದಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಅವರು ತಮ್ಮ ಐಕಾನಿಕ್ ಸ್ಟೈಲ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಮಕ್ಕಳಿಗಾಗಿ ಅವರು ರೆಡ್ ಕಾರ್ಪೆಟ್ಮೇಲೆ ಹೆಜ್ಜೆ ಹಾಕಿದ್ದಾಗಿ ಹೇಳಿದ್ದಾರೆ.
I am so excited 😋❤️#MetGala2025 pic.twitter.com/xIeDq6cG9O
— SRK BELIEVER (@SRKndCinema) May 5, 2025
ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಶಾರುಖ್ ಖಾನ್ ಅವರ ಫೋಟೋಗಳು ವೈರ್ ಆಗಿವೆ. ಅನೇಕ ಅಭಿಮಾನಿಗಳು ಈ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮೆಟ್ ಗಾಲಾ ಮೇಲೆ ಭಾರತದ ಸೆಲೆಬ್ರಿಟಿಗಳಾದ ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಾಂಜ್, ಇಶಾ ಅಂಬಾನಿ, ನತಾಶಾ ಪೂನಾವಾಲ್ಲಾ ಕಾಣಿಸಿಕೊಳ್ಳಲಿದ್ದಾರೆ. ಕಿಯಾರಾ ಅಡ್ವಾಣಿ ಸದ್ಯ ಪ್ರೆಗ್ನೆಂಟ್. ಅವರು ಕೂಡ ಬೇಬಿ ಬಂಪ್ ಜೊತೆ ರೆಡ್ ಕಾರ್ಪೆಟ್ ಮೇಲೆ ಮಿಂಚಲಿದ್ದಾರೆ.
ಇದನ್ನೂ ಓದಿ: ಮೆಟ್ ಗಲಾ ರೆಡ್ ಕಾರ್ಪೆಟ್‌ನಲ್ಲಿ ಮತ್ತೆ ಮಿಂಚಲಿದ್ದಾರೆ ಆಲಿಯಾ
ಮೆಟ್ಗಾಲಾ ಪ್ರತಿ ವರ್ಷವೂ ನಡೆಯಲಿದೆ. ಇದೊಂದು ಫ್ಯಾಷನ್ ವೀಕ್. ಈ ಕಾರ್ಯಕ್ರಮ ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆಯುತ್ತಿದೆ. ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ಸದ್ಯ ‘ಕಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಇದರ ನಿರ್ದೇಶಕರು. ಸುಹಾನಾ ಖಾನ್, ಅಭಯ್ ವರ್ಮಾ, ಅಭಿಷೇಕ್ ಬಚ್ಚನ್, ಅರ್ಷದ್ ವಾರ್ಸಿ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.