ಅಂಬಾನಿ ಕುಟುಂಬದ ಜೊತೆ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಒಡನಾಟ ಹೊಂದಿದ್ದಾರೆ. ಮುಖೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿಯ ಪ್ರೀ-ವೆಡ್ಡಿಂಗ್ (Anant Ambani pre wedding) ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಈ ವೇಳೆ ಹಲವು ನಟ-ನಟಿಯರು ಒಂದೇ ಬಸ್ನಲ್ಲಿ ಪ್ರಯಾಣ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಖ್ಯಾತ ಲೇಖಕ, ಚಿತ್ರಕಥೆ ಬರಹಗಾರ ಮುಶ್ತಾಖ್ ಶೇಖ್ ಅವರು ಕೂಡ ಈ ವಿಡಿಯೋ ನೋಡಿ ಲೇವಡಿ ಮಾಡಿದ್ದಾರೆ.
ಸಾಮಾನ್ಯವಾಗಿ ಬಾಲಿವುಡ್ನ ಎಲ್ಲ ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಶೂಟಿಂಗ್ಗೆ ತೆರಳುವಾಗಿ ಐಷಾರಾಮಿ ಕಾರು ಬೇಕು ಎಂದು ಬೇಡಿಕೆ ಇಡುತ್ತಾರೆ. ಶೂಟಿಂಗ್ ಸ್ಥಳದಲ್ಲಿ ಹಲವು ಸೌಕರ್ಯಗಳು ಇರುವ ಕ್ಯಾರವಾನ್ ಬೇಕು ಎನ್ನುತ್ತಾರೆ. ಆದರೆ ಅಂಬಾನಿ ಕುಟುಂಬದವರು ಕರೆದಾಗಿ ಜನಸಾಮಾನ್ಯರಂತೆ ಎಲ್ಲರೂ ಒಂದೇ ಬಸ್ನಲ್ಲಿ ಪ್ರಯಾಣ ಮಾಡಿದ್ದು ಟ್ರೋಲ್ಗೆ ಕಾರಣ ಆಗಿದೆ.
ಇದನ್ನೂ ಓದಿ: ರಿಯಾನಾಗೂ ಇಷ್ಟವಾಯ್ತು ಒರಿ ಅವತಾರ; ಕಿವಿಯೋಲೆಗೆ ಖ್ಯಾತ ಗಾಯಕಿ ಫಿದಾ
ಅಂಬಾನಿ ಅವರು ಕರೆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಸೇವಕರಂತೆ ಹೋಗುತ್ತಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಲಾಗುತ್ತಿದೆ. ಲೇಖಕ, ಚಿತ್ರಕಥೆ ಬರಹಗಾರ ಮುಶ್ತಾಖ್ ಶೇಖ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
‘ನಲ್ಮೆಯ ಬಾಲಿವುಡ್ ನಿರ್ಮಾಪಕರೇ.. ಇನ್ಮುಂದೆ ಯಾವುದೇ ಸ್ಟಾರ್ಗಳು ನಿಮ್ಮ ಪರ್ಸನಲ್ ವ್ಯಾನಿಟಿ ವ್ಯಾನ್ ಮತ್ತು ಐಷಾರಾಮಿ ಕಾರು ಕೇಳಿದರೆ ಈ ವಿಡಿಯೋ ತೋರಿಸಿ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಕೆಲವು ಬಾಲಿವುಡ್ ನಟ-ನಟಿಯರು ಕೂಡ ಈ ಪೋಸ್ಟ್ನ ಲೈಕ್ ಮಾಡಿದ್ದಾರೆ!
ಇದನ್ನೂ ಓದಿ: ಅಂಬಾನಿ ಪುತ್ರನ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ಐಶ್ವರ್ಯಾ ರೈ ಮಸ್ತ್ ಡ್ಯಾನ್ಸ್
ಮಾರ್ಚ್ 1ರಿಂದ ಮಾರ್ಚ್ 3ರ ತನಕ ಬಹಳ ಅದ್ದೂರಿಯಾಗಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ನಡೆಯಿತು. ರಾಮ್ ಚರಣ್, ಶಾರುಖ್ ಖಾನ್, ಆಮಿರ್ ಖಾನ್, ಅಮಿತಾಭ್ ಬಚ್ಚನ್, ಜಾನ್ವಿ ಕಪೂರ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಜಾನ್ವಿ ಕಪೂರ್, ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಮುಂತಾದವರು ಹಿನ್ನೆಲೆ ಡ್ಯಾನ್ಸರ್ ಆಗಿ ಕುಣಿದಿರುವ ವಿಡಿಯೋವನ್ನು ಕೂಡ ಟ್ರೋಲ್ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Tue, 5 March 24