ನಟ ಶಾರುಖ್ ಖಾನ್ (Shah Rukh Khan) ಅವರ ‘ಪಠಾಣ್’ ಸಿನಿಮಾ ಎಲ್ಲೆಲ್ಲೂ ಧೂಳೆಬ್ಬಿಸಿದೆ. ವಿಶ್ವಾದ್ಯಂತ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಮಾತ್ರವಲ್ಲದೇ ಹಲವಾರು ಸೆಲೆಬ್ರಿಟಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲೂ ‘ಪಠಾಣ್’ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇದು ಶಾರುಖ್ ಖಾನ್ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂಸತ್ತಿನಲ್ಲಿ ಆಡಿದ ಒಂದು ಮಾತು ಸಖತ್ ವೈರಲ್ ಆಗಿದೆ. ‘ದಶಕಗಳ ಬಳಿಕ ಶ್ರೀನಗರದಲ್ಲಿ ಚಿತ್ರಮಂದಿರಗಳು ಹೌಸ್ಫುಲ್ ಆಗಿವೆ’ ಎಂದು ಅವರು ಹೇಳಿದ್ದಾರೆ. ‘ಪಠಾಣ್’ (Pathaan Movie) ಚಿತ್ರವನ್ನೇ ಉದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮೊದಲಿನ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ ಎಂಬುದರ ಕುರಿತು ಮಾತನಾಡುವಾಗ ನರೇಂದ್ರ ಮೋದಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಎಷ್ಟೋ ವರ್ಷಗಳ ಬಳಿಕ ಅಲ್ಲಿನ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಅಷ್ಟರಮಟ್ಟಿಗೆ ಅಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ಅವರು ‘ಪಠಾಣ್’ ಚಿತ್ರದ ಹೆಸರನ್ನು ಪ್ರಸ್ತಾಪಿಸಿಲ್ಲ. ಇತ್ತೀಚಿನ ದಿನಗಳಲ್ಲಿ ‘ಪಠಾಣ್’ ಚಿತ್ರವೇ ಅಲ್ಲಿ ಹೌಸ್ ಫುಲ್ ಆಗಿರುವುದರಿಂದ ಮೋದಿ ಮಾತನಾಡಿರುವುದು ಈ ಸಿನಿಮಾದ ಕುರಿತಾಗಿಯೇ ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Pathaan: ‘ಪಠಾಣ್ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್ ಖಾನ್
ಶಾರುಖ್ ಖಾನ್ ಅವರ ಫ್ಯಾನ್ ಪೇಜ್ಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಮೋದಿ ಹೇಳಿದ ಮೇಲೆ ಎಲ್ಲರೂ ಒಪ್ಪಲೇಬೇಕು’ ಎನ್ನುತ್ತಿದ್ದಾರೆ ನೆಟ್ಟಿಗರು. ‘ಇದು ನಮ್ಮ ಶಾರುಖ್ ಖಾನ್ ತಾಕತ್ತು’ ಎಂದು ಅಪ್ಪಟ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
“Theatres in #Srinagar are running HOUSEFULL after DECADES?” says PM @narendramodi while talking about BLOCKBUSTER #Pathaan
Book your tickets NOW: https://t.co/z4YLOG2NRI | https://t.co/lcsLnUSu9Y@iamsrk @yrf#ShahRukhKhan #SRK #PathaanReview #NarendraModi #NarendraModiSpeech pic.twitter.com/Q7byChYFwN
— Shah Rukh Khan Universe Fan Club (@SRKUniverse) February 8, 2023
‘ಪಠಾಣ್’ ಸಿನಿಮಾ ಗೆಲ್ಲಲಿ ಎಂಬುದು ಅಭಿಮಾನಿಗಳ ಬಯಕೆ ಮತ್ತು ಹಾರೈಕೆ ಆಗಿತ್ತು. ಈ ಸಿನಿಮಾ ಗೆದ್ದಿರುವುದು ಮಾತ್ರವಲ್ಲದೇ ಅನೇಕ ದಾಖಲೆಗಳನ್ನು ಕೂಡ ಬರೆಯುತ್ತಿದೆ. ‘ಕೆಜಿಎಫ್ 2’ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ ಒಟ್ಟು ಹಣ 434.70 ಕೋಟಿ ರೂಪಾಯಿ. ಈ ದಾಖಲೆಯನ್ನು ಮುರಿಯುವಲ್ಲಿ ‘ಪಠಾಣ್’ ಸಿನಿಮಾ ಯಶಸ್ವಿ ಆಗಿದೆ. ಮಂಗಳವಾರವೇ (ಫೆ.7) ಈ ಸಿನಿಮಾದ ಗಳಿಕೆ 430.25 ಕೋಟಿ ರೂಪಾಯಿ ಆಗಿತ್ತು. ಬುಧವಾರ ಕೂಡ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿರುವುದರಿಂದ ಅನಾಯಾಸವಾಗಿ ‘ಕೆಜಿಎಫ್ 2’ ಚಿತ್ರವನ್ನು ಇದು ಹಿಂದಿಕ್ಕಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.