ಶಾರುಖ್​ ಖಾನ್​ ಮನೆಗೆ ಶೀಘ್ರವೇ ಎನ್​ಸಿಬಿ ಎಂಟ್ರಿ? ಅಧಿಕಾರಿಗಳಿಂದ ಸಿಕ್ತು ಸ್ಪಷ್ಟನೆ

| Updated By: ರಾಜೇಶ್ ದುಗ್ಗುಮನೆ

Updated on: Oct 04, 2021 | 1:37 PM

ಆರ್ಯನ್​ ಖಾನ್​ ಅವರು ಕಳೆದ ನಾಲ್ಕು ವರ್ಷಗಳಿಂದ ಡ್ರಗ್ಸ್​ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅವರು ಮನೆಯಲ್ಲೂ ಡ್ರಗ್ಸ್​ ಸೇವಿಸುತ್ತಿದ್ದರು ಎನ್ನುವ ಅನುಮಾನ ಮೂಡಿದೆ.

ಶಾರುಖ್​ ಖಾನ್​ ಮನೆಗೆ ಶೀಘ್ರವೇ ಎನ್​ಸಿಬಿ ಎಂಟ್ರಿ? ಅಧಿಕಾರಿಗಳಿಂದ ಸಿಕ್ತು ಸ್ಪಷ್ಟನೆ
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ಗೆ ಸಂಕಷ್ಟ ಎದುರಾಗಿದೆ. ಡ್ರಗ್ಸ್​ ಕೇಸ್​ನಲ್ಲಿ ಅವರನ್ನು ಬಂಧಿಸಲಾಗಿದ್ದು, ಈಗ ಕೋರ್ಟ್​ ಮುಂದೆ ಹಾಜರುಪಡಿಸಲಾಗುತ್ತಿದೆ. ಅವರಿಗೆ ಜೈಲೋ ಅಥವಾ ಜಾಮೀನು ಸಿಗುತ್ತದೆಯೋ ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈಗ ಆರ್ಯನ್​ನಿಂದ ಶಾರುಖ್​ ಖಾನ್​ಗೂ ಸಂಕಷ್ಟ ಎದುರಾಗುವ ಸಾಧ್ಯತೆ ಗೋಚರವಾಗಿದೆ.

ಆರ್ಯನ್​ ಖಾನ್​ ಅವರು ಕಳೆದ ನಾಲ್ಕು ವರ್ಷಗಳಿಂದ ಡ್ರಗ್ಸ್​ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅವರು ಮನೆಯಲ್ಲೂ ಡ್ರಗ್ಸ್​ ಸೇವಿಸುತ್ತಿದ್ದರು ಎನ್ನುವ ಅನುಮಾನ ಮೂಡಿದೆ. ಈ ಕಾರಣಕ್ಕೆ ಶಾರುಖ್​ ಖಾನ್​ ಮನೆಯ ಮೇಲೆ ಎನ್​ಸಿಬಿ ದಾಳಿ ಮಾಡಲಿದೆ ಎನ್ನುವ ವರದಿ ಬಿತ್ತರವಾಗಿತ್ತು. ಇದರಿಂದ ಶಾರುಖ್​ ಖಾನ್​ಗೂ ಸಂಕಷ್ಟ ಎದುರಾಗಲಿದೆ ಎನ್ನಲಾಗಿತ್ತು.

ಶಾರುಖ್​ ಖಾನ್​ ಮನೆಯ ಮೇಲೆ ದಾಳಿ ನಡೆದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು, ಶಾರುಖ್​ ಮನೆಯ ಮೇಲೆ ದಾಳಿ ಮಾಡುವುದು ಅಷ್ಟು ಸುಲಭದ ಮಾತೂ ಅಲ್ಲ. ಈ ವಿಚಾರವಾಗಿ ಎನ್​ಸಿಬಿ ಅಧಿಕಾರಿಗಳು ಕೆಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಶಾರುಖ್​ ಮನೆಯ ಮೇಲೆ ದಾಳಿ ನಡೆಯಲಿದೆ ಎಂಬುದು ಸುಳ್ಳು. ಆ ರೀತಿಯ ಆಲೋಚನೆ ಇಲ್ಲ’ ಎಂದು ಎನ್​ಸಿಬಿ ಅಧಿಕಾರಿಗಳು ಹೇಳಿದ್ದಾರೆ ಎಂದು ವಾಹಿನಿಗಳು ವರದಿ ಮಾಡಿವೆ.

ಅದು 1997ರಲ್ಲಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಜೊತೆಯಾಗಿ ನೀಡಿದ್ದ ಸಂದರ್ಶನ ವೈರಲ್​ ಆಗಿದೆ. ಅದರಲ್ಲಿ ಅವರು ತಮ್ಮ ಪುತ್ರ ಆರ್ಯನ್​ ಖಾನ್​ ಬಗ್ಗೆ ಮಾತನಾಡಿದ್ದರು. ‘ಆರ್ಯನ್​ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್​ ಸೇವಿಸಬಹುದು ಮತ್ತು ಸೆ*ಕ್ಸ್​ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್​ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್​ ಎಂಜಾಯ್​ ಮಾಡಲಿ’ ಎಂದು ಶಾರುಖ್​ ಹೇಳಿದ್ದರು.

ಇದನ್ನೂ ಓದಿ: ‘ನಾನು​ 4ವರ್ಷಗಳಿಂದ ಡ್ರಗ್ಸ್​ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್​ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್​ ಪುತ್ರ ಆರ್ಯನ್​ !