ಆರ್ಯನ್​ಗೆ ಮುಳುವಾಯ್ತು ಮೊಬೈಲ್​ನಲ್ಲಿದ್ದ ಆ ಮಾಹಿತಿ; ಎನ್​ಸಿಬಿ ಕಸ್ಟಡಿ ಅವಧಿ ವಿಸ್ತರಣೆ

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು.

ಆರ್ಯನ್​ಗೆ ಮುಳುವಾಯ್ತು ಮೊಬೈಲ್​ನಲ್ಲಿದ್ದ ಆ ಮಾಹಿತಿ; ಎನ್​ಸಿಬಿ ಕಸ್ಟಡಿ ಅವಧಿ ವಿಸ್ತರಣೆ
ಆರ್ಯನ್​​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 04, 2021 | 5:55 PM

ಡ್ರಗ್​ ಕೇಸ್​ನಲ್ಲಿ ಸಿಲುಕಿರುವ ಆರ್ಯನ್​ ಖಾನ್​ ಅವರನ್ನುಎನ್​ಸಿಬಿ ಅಧಿಕಾರಿಗಳು ಇಂದು (ಅಕ್ಟೋಬರ್​ 4) ಮುಂಬೈ ಕಿಲ್ಲಾ ಕೋರ್ಟ್​ ಎದುರು  ಹಾಜರುಪಡಿಸಿದ್ದಾರೆ. ಈ ವೇಳೆ ಆರ್ಯನ್​ ಕಸ್ಟಡಿ ಅವಧಿಯನ್ನು ಅಕ್ಟೋಬರ್​ 13ರವರೆಗೆ ವಿಸ್ತರಿಸುವಂತೆ ಕೋರ್ಟ್​ ಮುಂದೆ ಎನ್​ಸಿಬಿ ಕೋರಿದೆ. ಆದರೆ, ಅಕ್ಟೋಬರ್​ 7ರವರೆಗೆ ಎನ್​ಸಿಬಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.  ಆರ್ಯನ್​ ಜತೆಗೆ ಉಳಿದ ಆರೋಪಿಗಳ ಎನ್​ಸಿಬಿ ಕಸ್ಟಡಿ ಅವಧಿ ಕೂಡ ವಿಸ್ತರಣೆ ಆಗಿದೆ. 

ಎನ್‌ಸಿಬಿ ಪರ ಎಎಸ್‌ಜಿ ಅನಿಲ್‌ಸಿಂಗ್‌ ವಾದ ಮಂಡನೆ ಮಾಡಿದರು. ‘ಶಿಪ್‌ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತು ಜಪ್ತಿ ಮಾಡಿದ್ದೇವೆ. ಡ್ರಗ್ಸ್ ಪೆಡ್ಲರ್ ಜೊತೆ ಚಾಟ್‌ ಮಾಡಿರುವ ವಿವರ ಸಿಕ್ಕಿದೆ. ಡ್ರಗ್ಸ್‌ ಲಿಂಕ್‌ ಬಹಿರಂಗಗೊಳಿಸಲು ಕಸ್ಟಡಿಗೆ ನೀಡಬೇಕು.  ಅಂತಾರಾಷ್ಟ್ರೀಯ ಡ್ರಗ್ಸ್‌ ವ್ಯವಹಾರ ಬಗ್ಗೆಯೂ ಕಣ್ಣಿಟ್ಟಿದ್ದೇವೆ. ಅಂತಾರಾಷ್ಟ್ರೀಯ ಡ್ರಗ್ಸ್‌ ವ್ಯವಹಾರವೂ ನಡೆದಿರುವ ಶಂಕೆ ಇದೆ. ಇನ್ನೂ ಕೆಲವು ಆರೋಪಿಗಳ ಗುರುತು ಪತ್ತೆ ಹಚ್ಚಬೇಕಿದೆ. ವಾಟ್ಸ್​​ಆ್ಯಪ್​​ನಲ್ಲಿ ಕೋಡ್‌ ಪದಗಳನ್ನು ಬಳಸಿ ಚಾಟಿಂಗ್ ಮಾಡಲಾಗಿದೆ.  ಮೊಬೈಲ್​ನಲ್ಲಿ ಹಣ ವರ್ಗಾವಣೆ ಮಾಹಿತಿ ಕೂಡ ಸಿಕ್ಕಿದೆ’ ಎಂದರು ಅನಿಲ್‌ಸಿಂಗ್‌.

ಆದರೆ, ಆರ್ಯನ್​ ಪರ ವಕೀಲ ಸತೀಶ್​ ಮಾನೇಶಿಂದೆ ಇದನ್ನು ಅಲ್ಲಗಳೆದಿದ್ದಾರೆ. ‘ಆರ್ಯನ್​ ಅಲ್ಲಿ ಅತಿಥಿ ಆಗಿದ್ದರು. ಹೀಗಾಗಿ, ಅವರಿಗೆ ಟಿಕೆಟ್​ ಇರಲಿಲ್ಲ. ಬೋರ್ಡಿಂಗ್​ ಪಾಸ್​ ಕೂಡ ಇರಲಿಲ್ಲ. ಅವರ ಬ್ಯಾಗ್​ ಶೋಧ ಮಾಡಿದಾಗ ಅದರಲ್ಲಿ ಏನು ಪತ್ತೆ ಆಗಿಲ್ಲ’ ಎಂದು ಸತೀಶ್​ ಮಾನೇಶಿಂದೆ ನ್ಯಾಯಾಲಯಕ್ಕೆ ತಿಳಿಸಿದರು.

ಆರ್ಯನ್​ ಮೊಬೈಲ್​ನಲ್ಲಿ ಸಿಕ್ಕ ಪ್ರಮುಖ ಮಾಹಿತಿ ಹಾಗೂ ವಾಟ್ಸ್ಆ್ಯಪ್​ ​ಚಾಟ್​ಗಳನ್ನು ಇಟ್ಟುಕೊಂಡು ಎನ್​ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಈ ಎಲ್ಲಾ ಸಾಕ್ಷ್ಯಗಳು ಆರ್ಯನ್​ ವಿರುದ್ಧವಾಗಿಯೇ ಇದ್ದವು. ಹೀಗಾಗಿ, ಕೋರ್ಟ್​ ಹೆಚ್ಚಿನ ವಿಚಾರಣೆಗೆ ಎನ್​ಸಿಬಿಗೆ ಅವಕಾಶ ನೀಡಿದೆ.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬಂದಿತ್ತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ನಂತರ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದಾದ ನಂತರ ಆರ್ಯನ್​ ಅವನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಒಂದು ದಿನ ಕಸ್ಟಡಿಗೆ ನೀಡಲಾಗಿತ್ತು.

ಇದನ್ನೂ ಓದಿ:‘ನಾನು​ 4ವರ್ಷಗಳಿಂದ ಡ್ರಗ್ಸ್​ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್​ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್​ ಪುತ್ರ ಆರ್ಯನ್​ ! 

ಆರ್ಯನ್​ ಮತ್ತೊಂದು ಮುಖ ಬಯಲು; ವೈರಲ್​ ಆಯ್ತು ಹಳೇ ವಿಡಿಯೋ

Published On - 5:47 pm, Mon, 4 October 21

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು