ಆರ್ಯನ್ ಖಾನ್ ಜತೆ ಬಂಧನಕ್ಕೊಳಗಾದ ಈ ಗ್ಲಾಮರ್ ಬೆಡಗಿ ಯಾರು?
ಪಾರ್ಟಿ ನಡೆಯುವಾಗ ಆರ್ಯನ್ ಜತೆ ಮುನ್ಮುನ್, ಅರ್ಬಾಜ್ ಸೇರಿ 8 ಜನರು ಇದ್ದರು. ಇಂದು ನಡೆದ ವಿಚಾರಣೆ ವೇಳೆ ಅಕ್ಟೋಬರ್ 7ರವರೆಗೆ ಇವರನ್ನು ಎನ್ಸಿಬಿ ಕಸ್ಟಡಿಗೆ ನೀಡಲಾಗಿದೆ.
ಕ್ರೂಸ್ ಶಿಪ್ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಜತೆಗೆ ಇನ್ನೂ ಕೆಲವರ ಬಂಧನವಾಗಿದೆ. ಇವರು ಯಾರು ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಆರ್ಯನ್ ಖಾನ್ ಜತೆ ಬಂಧನಕ್ಕೆ ಒಳಗಾದವರು ಮುನ್ಮುನ್ ಧಮೆಚಾ ಮತ್ತು ಅರ್ಬಾಜ್ ಸೇತ್ ಮರ್ಚಂಟ್.
ಪಾರ್ಟಿ ನಡೆಯುವಾಗ ಆರ್ಯನ್ ಜತೆ ಮುನ್ಮುನ್, ಅರ್ಬಾಜ್ ಸೇರಿ 8 ಜನರು ಇದ್ದರು. ಇಂದು ನಡೆದ ವಿಚಾರಣೆ ವೇಳೆ ಅಕ್ಟೋಬರ್ 7ರವರೆಗೆ ಇವರನ್ನು ಎನ್ಸಿಬಿ ಕಸ್ಟಡಿಗೆ ನೀಡಲಾಗಿದೆ. ಹಾಗಾದರೆ ಮುನ್ಮುನ್ ಮತ್ತು ಅರ್ಬಾಜ್ ಯಾರು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಆರ್ಯನ್ ಅವರು ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮಗ. ಅರ್ಬಾಜ್ ಎಂಬುವವರು ಆರ್ಯನ್ ಅವರ ಆಪ್ತ ಗೆಳೆಯ. ಮುನ್ಮುನ್ಗೆ ಅರ್ಬಾಜ್ ಗೆಳೆತನವಿತ್ತು.
ಮುನ್ಮುನ್ ಮಾಡೆಲ್. ವಯಸ್ಸು 39. ಮಧ್ಯಪ್ರದೇಶದ ಸಾಗರ್ ಜಿಲ್ಲೆಯವರು. ಮುನ್ಮುನ್ ತಾಯಿ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅವರ ಸಹೋದರ ಪ್ರಿನ್ಸ್ ಧಮೇಚಾ ಅವರು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುನ್ಮುನ್ ಸಾಗರದಲ್ಲಿ ಸಮಯ ಕಳೆದಿದ್ದು ತುಂಬಾನೇ ಕಡಿಮೆ. ಅವರು ದೆಹಲಿಗೆ ಶಿಫ್ಟ್ ಆಗುವುದಕ್ಕೂ ಮೊದಲು ಭೋಪಾಲ್ಗೆ ತೆರಳಿದ್ದರು.
ಮುನ್ಮುನ್ ಮಾಡೆಲ್ ಆಗಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 13 ಸಾವಿರ ಹಿಂಬಾಲಕರಿದ್ದಾರೆ. ಅವರು ಕೊನೆಯದಾಗಿ ಪೋಸ್ಟ್ ಮಾಡಿದ್ದು ಸೆಪ್ಟೆಂಬರ್ 22ರಂದು.
View this post on Instagram
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ಆರ್ಯನ್ ಅವರನ್ನು ವಶಕ್ಕೆ ಪಡೆದು ಎನ್ಸಿಬಿ ಕಚೇರಿಗೆ ಕರೆದುಕೊಂಡು ಬಂದಿತ್ತು. ಎನ್ಸಿಬಿ ಕಚೇರಿ ಒಳಗೆ ಆರ್ಯನ್ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಇಂದು ಆರ್ಯನ್ ಸೇರಿ ಮೂವರ ಕಸ್ಟಡಿ ವಿಸ್ತರಣೆಗೊಂಡಿದೆ. ಆರ್ಯನ್ ಮೊಬೈಲ್ನಲ್ಲಿ ಸಿಕ್ಕ ಪ್ರಮುಖ ಮಾಹಿತಿ ಹಾಗೂ ವಾಟ್ಸ್ಆ್ಯಪ್ ಚಾಟ್ಗಳನ್ನು ಇಟ್ಟುಕೊಂಡು ಎನ್ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಈ ಎಲ್ಲಾ ಸಾಕ್ಷ್ಯಗಳು ಆರ್ಯನ್ ವಿರುದ್ಧವಾಗಿಯೇ ಇದ್ದವು. ಹೀಗಾಗಿ, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎನ್ಸಿಬಿಗೆ ಅವಕಾಶ ನೀಡಿದೆ.
ಇದನ್ನೂ ಓದಿ: ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
Published On - 8:36 pm, Mon, 4 October 21