15 ಬಾರಿ ‘ಹನುಮಾನ್ ಅಂಶ್’ ಸಿನಿಮಾ ನೋಡಿ ಕಣ್ಣೀರಿಟ್ಟ ನೀಮ್ ಕರೋಲಿ ಬಾಬಾ ಪುತ್ರಿ

‘ಹನುಮಾನ್ ಅಂಶ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ನಿರ್ಮಾಪಕಿ ರಾಗಿಣಿ ಸೋನಾ ಒಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಕುಟುಂಬದವರಿಗೂ ಈ ಚಿತ್ರ ಬಹಳ ಇಷ್ಟ ಆಗಿದೆ. ಬಾಬಾ ಅವರ ಪುತ್ರಿಯ ಕುರಿತು ರಾಗಿಣಿ ಸೋನಾ ಮಾತಾಡಿದ್ದಾರೆ.

15 ಬಾರಿ ‘ಹನುಮಾನ್ ಅಂಶ್’ ಸಿನಿಮಾ ನೋಡಿ ಕಣ್ಣೀರಿಟ್ಟ ನೀಮ್ ಕರೋಲಿ ಬಾಬಾ ಪುತ್ರಿ
Hanuman Ansh Still

Updated on: Sep 21, 2026 | 9:05 PM

ಪ್ರಸಿದ್ಧ ಆಧ್ಯಾತ್ಮಿಕ ಸಂತ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಪವಾಡಗಳನ್ನು ಆಧರಿಸಿ ನಿರ್ಮಿಸಲಾದ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ ಸದ್ದು ಮಾಡುತ್ತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವನ್ನು ಪ್ರೇಕ್ಷಕರು ಅಷ್ಟೇ ಅಲ್ಲದೆ, ನೀಮ್ ಕರೋಲಿ ಬಾಬಾ ಅವರ ಪುತ್ರಿ ಗಿರಿಜಾ ಜಿ (ಅಮ್ಮಾಜಿ) ಕೂಡ ಬರೋಬ್ಬರಿ 15 ಬಾರಿ ವೀಕ್ಷಿಸಿ ಭಾವುಕರಾಗಿದ್ದಾರೆ. ಇತ್ತೀಚೆಗೆ ‘ಸ್ಕ್ರೀನ್’ ನಡೆಸಿದ ಸಂದರ್ಶನದಲ್ಲಿ ಚಿತ್ರದ ನಿರ್ಮಾಪಕಿ ರಾಗಿಣಿ ಸೋನಾ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಚಿತ್ರದ ನಿರ್ಮಾಪಕಿ ರಾಗಿಣಿ ಸೋನಾ ಮಾತನಾಡಿ, ‘ನಾವು ನೀಮ್ ಕರೋಲಿ ಬಾಬಾ ಅವರ ಪುತ್ರಿ ಗಿರಿಜಾ ಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಬಯಸಿದ್ದೆವು. ನಿರ್ದೇಶಕ ವಿಶಾಲ್ ಚತುರ್ವೇದಿ, ನಾನು ಮತ್ತು ಅಮ್ಮಾಜಿ ಫೋನ್ ಮೂಲಕ ಮಾತನಾಡಿದೆವು. ಆಗ ಸಿನಿಮಾ ನೋಡುತ್ತೀರಾ ಎಂದು ಕೇಳಿದಾಗ, ‘ಸರಿಯಾದ ಸಮಯ ಬಂದಾಗ ಖಂಡಿತಾ ನೋಡುತ್ತೇನೆ’ ಎಂದಿದ್ದರು. ಅದರಂತೆ ಸಿನಿಮಾ ವೀಕ್ಷಿಸಿದ ಅವರು, ಈವರೆಗೆ ಸುಮಾರು 15 ಬಾರಿ ಹನುಮಾನ್ ಅಂಶ್ ಚಿತ್ರವನ್ನು ನೋಡಿದ್ದಾರೆ. ಪ್ರತಿ ಬಾರಿ ಸಿನಿಮಾ ನೋಡುವಾಗಲೂ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ಅಮ್ಮಾಜಿ ಅವರನ್ನು ಭೇಟಿಯಾದ ಕ್ಷಣವನ್ನು ರಾಗಿಣಿ ಸೋನಾ ಜೀವನದ ಮರೆಯಲಾಗದ ಪವಾಡ ಎಂದು ಬಣ್ಣಿಸಿದ್ದಾರೆ. ‘ಈ ಸಿನಿಮಾ ಮಾಡಲು ನಿಮಗೆ ಪ್ರೇರಣೆ ಏನು ಎಂದು ಅಮ್ಮಾಜಿ ಕೇಳಿದರು. ನಾನು 6 ವರ್ಷದವಳಿದ್ದಾಗ ನೀಮ್ ಕರೌಲಿ ಬಾಬಾ ಅವರನ್ನು ಭೇಟಿಯಾದ ಅನುಭವ ಹಂಚಿಕೊಂಡೆ. ನಿರ್ದೇಶಕ ವಿಶಾಲ್ ತಮ್ಮ ಸಂಶೋಧನೆಯ ಬಗ್ಗೆ ಹೇಳಿದರು. ಮಾತುಕತೆಯ ಮಧ್ಯೆ ನನ್ನ ತಂದೆ ನೈನಿತಾಲ್‌ನಲ್ಲಿ ಉದ್ಯೋಗದಲ್ಲಿದ್ದರು ಎಂದು ನಾನು ಹೇಳಿದೆ. ತಕ್ಷಣವೇ ಅಮ್ಮಾಜಿ, ಯಾರಿಗೂ ಗೊತ್ತಿಲ್ಲದ ನನ್ನ ತಂದೆಯ ಹೆಸರು, 50 ವರ್ಷಗಳ ಹಿಂದೆ ಆಗ್ರಾದಲ್ಲಿದ್ದ ನಮ್ಮ ಮನೆಯ ನಿಖರವಾದ ವಿಳಾಸ ಮತ್ತು ನನ್ನ ಅಣ್ಣನ ಹೆಸರನ್ನು ಹೇಳಿಬಿಟ್ಟರು! ಇದನ್ನು ಕೇಳಿ ನನಗೆ ಆಶ್ಚರ್ಯವಾಗಿ ಕಣ್ಣೀರು ಬಂತು’ ಎಂದು ರಾಗಿಣಿ ನೆನಪಿಸಿಕೊಂಡಿದ್ದಾರೆ.

ತಮಗೆ ಈ ವಿಷಯಗಳೆಲ್ಲ ಹೇಗೆ ತಿಳಿದವು ಎಂಬ ಪ್ರಶ್ನೆಗೆ, ‘ನನಗೆ ಯಾವುದೇ ಉತ್ತರ ಗೊತ್ತಿಲ್ಲ. ಆದರೆ ನನ್ನ ಕಣ್ಣಮುಂದೆ ಎಲ್ಲವೂ ಪ್ರತ್ಯಕ್ಷವಾಗಿ ಕಾಣಿಸುತ್ತಿದೆ’ ಎಂದು ಅಮ್ಮಾಜಿ ಹೇಳಿದ್ದಾಗಿ ರಾಗಿಣಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ತಿಳಿದು ಎಲ್ಲರಿಗೂ ಅಚ್ಚರಿ ಆಗಿದೆ.

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ‘ಹನುಮಾನ್‌ ಅಂಶ್’ ಅಬ್ಬರ: 7ನೇ ಶನಿವಾರವೂ ದಾಖಲೆ

‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆಯಾದ ಮೊದಲ ಎರಡು ವಾರಗಳಲ್ಲಿ ಪ್ರೇಕ್ಷಕರಿಲ್ಲದೆ ಕೇವಲ 2 ಕೋಟಿ ರೂಪಾಯಿ ಗಳಿಸುವ ಮೂಲಕ ಹಿನ್ನಡೆ ಅನುಭವಿಸಿತ್ತು. ಆದರೆ, ವೀಕ್ಷಕರ ಧನಾತ್ಮಕ ವಿಮರ್ಶೆ ಹಾಗೂ ಆಧ್ಯಾತ್ಮಿಕ ಕಥಾಹಂದರದಿಂದಾಗಿ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತು. ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣಲು ಆರಂಭಿಸಿದ ಪರಿಣಾಮ, ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಇದೀಗ ವಿಶ್ವಾದ್ಯಂತ ಬರೋಬ್ಬರಿ 329 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us