‘ಧುರಂಧರ್’ ವಿಷಯದಲ್ಲಿ ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತ ನೆಟ್​​ಫ್ಲಿಕ್ಸ್?

ನೆಟ್​​ಫ್ಲಿಕ್ಸ್ 'ಧುರಂಧರ್' ಚಿತ್ರಕ್ಕೆ 10 ನಿಮಿಷ ಕತ್ತರಿ ಹಾಕಿ, ಪದಗಳನ್ನು ಮ್ಯೂಟ್ ಮಾಡಿ ಗುಣಮಟ್ಟ ಹಾಳುಮಾಡಿದ್ದರಿಂದ 'ಧುರಂಧರ್ 2' ಒಟಿಟಿ ಹಕ್ಕು ಕಳೆದುಕೊಂಡಿದೆ. ಚಿತ್ರಮಂದಿರಗಳ ಪ್ರದರ್ಶನದ ಬಳಿಕ 'ಧುರಂಧರ್ 2' ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣ ಮತ್ತು ಜಿಯೋ ಹಾಟ್‌ಸ್ಟಾರ್ ನಡುವಿನ ಸಂಬಂಧವೇ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿರಬಹುದು.

‘ಧುರಂಧರ್’ ವಿಷಯದಲ್ಲಿ ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತ ನೆಟ್​​ಫ್ಲಿಕ್ಸ್?
ಧುರಂಧರ್

Updated on: Feb 04, 2026 | 10:07 AM

‘ಧುರಂಧರ್’ ಸಿನಿಮಾ (Dhurandhar) ವಿಷಯದಲ್ಲಿ ನೆಟ್​​ಫ್ಲಿಕ್ಸ್ ಸಂಸ್ಥೆ ದೊಡ್ಡ ತಪ್ಪೊಂದನ್ನು ಮಾಡಿತ್ತು. ಈ ಚಿತ್ರವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವಾಗ 10 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಿದೆ. ಅಲ್ಲದೆ, ಹಲವು ಪದಗಳನ್ನು ಮ್ಯೂಟ್ ಮಾಡಿದೆ. ಇಷ್ಟೇ ಅಲ್ಲ, ಸಿನಿಮಾದ ಗುಣಮಟ್ಟವನ್ನು ತಗ್ಗಿಸಿದೆ. ಇದು ಸಂಸ್ಥೆಗೆ ತುಂಬಾನೇ ದುಬಾರಿ ಆಯಿತೇ ಎಂಬ ಪ್ರಶ್ನೆ ಮೂಡಿದೆ. ಈಗ ‘ಧರುಂಧರ್ 2’ ಸಿನಿಮಾದ ಒಟಿಟಿ ಹಕ್ಕು ನೆಟ್​​ಫ್ಲಿಕ್ಸ್ ಕೈತಪ್ಪಿದೆ. ಎರಡನೇ ಪಾರ್ಟ್ ಹಾಟ್​ಸ್ಟಾರ್ ಮೂಲಕ ತೆರೆಗೆ ಬರುತ್ತಿದೆ.

‘ಧುರಂಧರ್ 2’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬಂತು. ಈ ಚಿತ್ರದ ಮೊದಲ ಭಾಗದ ಬಜೆಟ್ 250 ಕೋಟಿ ರೂಪಾಯಿ ಎನ್ನಲಾಗಿದೆ. ಎರಡೂ ಪಾರ್ಟ್ ಸೇರಿದರೆ 475 ಕೋಟಿ ರೂಪಾಯಿ ಆಗಿದೆಯಂತೆ. ಮೊದಲ ಭಾಗದ ಬಾಕ್ಸ್ ಆಫೀಸ್ ಕಲೆಕ್ಷನ್ 1350 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾನ ಜಿಯೋ ಸ್ಟುಡಿಯೋಸ್ ನಿರ್ಮಿಸಿದೆ. ಬಿ62 ಸ್ಟುಡಿಯೋಸ್ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಮೊದಲ ಭಾಗದ ಒಟಿಟಿ ಹಕ್ಕನ್ನು ನೆಟ್​​ಫ್ಲಿಕ್ಸ್​​ಗೆ ನೀಡಲಾಗಿತ್ತು. ಆದರೆ, ಎರಡನೇ ಪಾರ್ಟ್ ವಿಷಯದಲ್ಲಿ ಸಂಸ್ಥೆ ನಿರ್ಧಾರ ಬದಲಿಸಿದೆ.

‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ. ಟೀಸರ್​​ನಲ್ಲಿ ಈ ವಿಷಯ ತಿಳಿದುಬಂದಿದೆ. ‘ಧುರಂಧರ್ 2’ ಟೀಸರ್ ಕೊನೆಯಲ್ಲಿ ಜಿಯೋ ಹಾಟ್​​ಸ್ಟಾರ್ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಒಟಿಟಿ ಪ್ರೇಕ್ಷಕನಿಗೆ ‘ಧುರಂಧರ್’ ಚಿತ್ರದ ನಿಜವಾದ ಅನುಭವವನ್ನು ‘ನೆಟ್​ಫ್ಲಿಕ್ಸ್’ ಹಾಳು ಮಾಡಿದೆ. ಈ ಕಾರಣದಿಂದ ನಿರ್ಮಾಣ ಸಂಸ್ಥೆ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

ಆದರೆ, ಅಸಲಿಗೆ ಹಾಗಿರೋದಿಲ್ಲ. ಏಕೆಂದರೆ, ಈ ಡೀಲ್​​ಗಳು ಏಕಾಏಕಿ ನಡೆಯೋದಿಲ್ಲ. ರಾತ್ರೋರಾತ್ರಿ ಒಪ್ಪಂದ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಜಿಯೋ ಸ್ಟುಡಿಯೋಸ್ ಅಡಿಯಲ್ಲೇ ಜಿಯೋ ಹಾಟ್​​ಸ್ಟಾರ್ ಕೂಡ ಬರುತ್ತದೆ. ಈ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು. ಈ ಮೊದಲು ಹಾಟ್​​ಸ್ಟಾರ್ ಜಿಯೋ ಸಂಸ್ಥೆಯ ಅಡಿಯಲ್ಲಿ ಇರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us