ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈಗ ಟೈಮ್ ಚೆನ್ನಾಗಿಲ್ಲ ಎಂದೇ ಹೇಳಬಹುದು. ಈ ವರ್ಷ ಅವರು ನಟಿಸಿದ ಯಾವ ಸಿನಿಮಾ ಕೂಡ ಕೈ ಹಿಡಿದಿಲ್ಲ. ಗಲ್ಲಾಪೆಟ್ಟಿಗೆಯಲ್ಲಿನ ಸೋಲು ಒಂದು ಕಡೆಯಾದರೆ, ಅವರು ಹಿಗ್ಗಾಮುಗ್ಗಾ ಟ್ರೋಲ್ (Akshay Kumar Troll) ಆಗುತ್ತಿರುವುದು ಇನ್ನೊಂದು ಕಡೆ. ಸೂಕ್ತ ತಯಾರಿ ಇಲ್ಲದೇ ಅವರು ಚಿತ್ರೀಕರಣದ ಸೆಟ್ಗೆ ಬರುತ್ತಾರೆ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಅವರು ನಟಿಸುತ್ತಿರುವ ಮರಾಠಿ ಸಿನಿಮಾ ‘ವೇಡಾತ್ ಮರಾಠೆ ವೀರ್ ದೌಡಲೇ ಸಾಥ್’ ನಿನ್ನೆಯಷ್ಟೇ (ಡಿ.6) ಶೂಟಿಂಗ್ ಆರಂಭಿಸಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಛತ್ರಪತಿ ಶಿವಾಜಿ (Chhatrapati Shivaji) ಪಾತ್ರವನ್ನು ಮಾಡುತ್ತಿದ್ದಾರೆ. ಆದರೆ ಜನರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಒಂದಷ್ಟು ಕಾರಣಗಳಿವೆ.
ಅಕ್ಷಯ್ ಕುಮಾರ್ ಅವರಿಗೆ ಈಗ 55 ವರ್ಷ ವಯಸ್ಸು. ತಮ್ಮ ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಮಾಡುವುದು ಬಿಟ್ಟು, ಬಿಸಿ ರಕ್ತದ ವೀರ ಯೋಧರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೇ ಅಕ್ಷಯ್ ಕುಮಾರ್ ಅವರಿಗೆ ಮುಳುವಾಗುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಒಂದಷ್ಟು ಮಂದಿ ಕಾಲೆಳೆಯುತ್ತಿದ್ದಾರೆ. ಛತ್ರಪತಿ ಶಿವಾಜಿ ಪಾತ್ರಕ್ಕೆ ಅಕ್ಷಯ್ ಕುಮಾರ್ ಸೂಕ್ತ ಆಯ್ಕೆ ಅಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಇದನ್ನೂ ಓದಿ: Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್ ಕುಮಾರ್
ಇನ್ನು, ‘ವೇಡಾತ್ ಮರಾಠೆ ವೀರ್ ದೌಡಲೇ ಸಾಥ್’ ಸಿನಿಮಾದ ನಿರ್ದೇಶನ ತಂಡದವರು ಸರಿಯಾಗಿ ಅಧ್ಯಯನ ನಡೆಸಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಜೊತೆಗೆ ಅಕ್ಷಯ್ ಕುಮಾರ್ ಅವರು ಒಂದು ಚಿಕ್ಕ ವಿಡಿಯೋ ಕೂಡ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ವಿದ್ಯುತ್ ಬಲ್ಬ್ಗಳು ಕಾಣಿಸಿವೆ. ಛತ್ರಪತಿ ಶಿವಾಜಿ ಕಾಲದಲ್ಲಿ ವಿದ್ಯುತ್ ಬಲ್ಬ್ ಹೇಗೆ ಇರಲು ಸಾಧ್ಯ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Akshay Kumar: ಛತ್ರಪತಿ ಶಿವಾಜಿ ಪಾತ್ರದಲ್ಲಿ ಅಕ್ಷಯ್ ಕುಮಾರ್; ಮರಾಠಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಅಕ್ಷಯ್ ಕುಮಾರ್ ನಟಿಸಿದ್ದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲೂ ಕೂಡ ಇಂಥ ತಪ್ಪುಗಳು ಸಾಕಷ್ಟಿದ್ದವು. ಅವುಗಳನ್ನು ಇಟ್ಟುಕೊಂಡು ಜನರು ಸಿಕ್ಕಾಪಟ್ಟೆ ಟೀಕೆ ಮಾಡಿದ್ದರು. ಶಿವಾಜಿ ಗೆಟಪ್ನಲ್ಲಿ ಅಕ್ಷಯ್ ಕುಮಾರ್ ಅವರ ಮೀಸೆ-ಗಡ್ಡ ಫೇಕ್ ಅನಿಸುತ್ತದೆ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಛತ್ರಪತಿ ಶಿವಾಜಿ ಪಾತ್ರಕ್ಕೆ ಅವರು ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಜನರಿಂದ ಕೇಳಿಬಂದಿದೆ.
Chatrapati Shivaji Maharaj Ruled in 1674
Thomas Edison invented light bulb in 1880…
This is Akshay Kumar Playing Shivaji with zero research ?? pic.twitter.com/aGJnJZ4FZ9— Anmol (@Anmolkbl) December 6, 2022
There are many things wrong with Akshay Kumar playing Shivaji Maharaj. For starters Shivaji Maharaj passed away when he was 50. Akshay is 55.
Could they not have found a Marathi speaking actor with good acting skills to play him? https://t.co/7GtqnbQN7j— Dr Apoorv Bhat (@AnarchistIndian) December 7, 2022
ಮಹೇಶ್ ಮಂಜ್ರೇಕರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆರಂಭದಲ್ಲೇ ಈ ಪರಿ ಟ್ರೋಲ್ ಆಗಿರುವುದರಿಂದ ಅವರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಅಕ್ಷಯ್ ಕುಮಾರ್ ಅವರು ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುವ ಗುರಿ ಇಟ್ಟುಕೊಳ್ಳುವ ಬದಲು ನಿಖರತೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂಬ ಅಭಿಪ್ರಾಯ ಸಿನಿಪ್ರಿಯರಿಂದ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.