ಸಿನಿಮಾ ರಿಲೀಸ್ ಹತ್ತಿರವಾದರೂ ಅಕ್ಷಯ್ ಕುಮಾರ್​ ಚಿತ್ರಕ್ಕಿಲ್ಲ ಸೆನ್ಸಾರ್; ಬಿಡುಗಡೆ ಅನುಮಾನ?

ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾದಲ್ಲಿ ಇದೆ ಎನ್ನಲಾಗಿದೆ. ದೇವರು ಹಾಗೂ ಲೈಂಗಿಕ ವಿಚಾರವನ್ನು ಒಟ್ಟಿಗೆ ತಂದಿರುವುದರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ.

 ಸಿನಿಮಾ ರಿಲೀಸ್ ಹತ್ತಿರವಾದರೂ ಅಕ್ಷಯ್ ಕುಮಾರ್​ ಚಿತ್ರಕ್ಕಿಲ್ಲ ಸೆನ್ಸಾರ್; ಬಿಡುಗಡೆ ಅನುಮಾನ?
ಓಎಂಜಿ 2

Updated on: Jul 25, 2023 | 9:33 AM

ಅಕ್ಷಯ್ ಕುಮಾರ್ (Akshay Kumar) ಅವರಿಗೆ ಇತ್ತೀಚೆಗೆ ಏಕೋ ಸಮಯ ಸರಿಯಿಲ್ಲ. ಅವರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿಲ್ಲ. ಇದರ ಜೊತೆಗೆ ಸಾಕಷ್ಟು ವಿವಾದಗಳು ಆಗುತ್ತಿವೆ. ಈಗ ಅವರ ನಟನೆಯ ‘ಒಹ್ ಮೈ ಗಾಡ್ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಆಗಸ್ಟ್​ 11ರಂದು ಚಿತ್ರ ತೆರೆಗೆ ಬರುತ್ತಿದೆ. ಆದರೆ, ಸಿನಿಮಾಗೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಇದು ಚಿತ್ರತಂಡದ ಚಿಂತೆಗೆ ಕಾರಣವಾಗಿದೆ. ಇದು ಚಿತ್ರತಂಡದ ಪ್ರಚಾರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮೊದಲಾದವರು ‘ಒಎಂಜಿ 2’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಒಎಂಜಿ’ ಹಿಟ್ ಆಗಿತ್ತು. ಈಗ ಅದರ ಸೀಕ್ವೆಲ್ ಎನ್ನುವ ಕಾರಣಕ್ಕೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾದಲ್ಲಿ ಇದೆ ಎನ್ನಲಾಗಿದೆ. ದೇವರು ಹಾಗೂ ಲೈಂಗಿಕ ವಿಚಾರವನ್ನು ಒಟ್ಟಿಗೆ ತಂದಿರುವುದರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ.

ಸಿನಿಮಾದಲ್ಲಿ ಸಣ್ಣ ವಿಚಾರ ಸಿಕ್ಕರೂ ಅದನ್ನೂ ದೊಡ್ಡ ಮಟ್ಟದಲ್ಲಿ ವಿವಾದ ಮಾಡಲಾಗುತ್ತದೆ. ಅದರಲ್ಲೂ ದೇವರ ವಿಚಾರದಲ್ಲಿ ಸಣ್ಣ ತಪ್ಪಾದರೂ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ ಬರುತ್ತದೆ. ಸೆನ್ಸಾರ್ ಮಂಡಳಿ ವಿರುದ್ಧ ಘೋಷಣೆ ಕೂಗಲಾಗುತ್ತದೆ. ಈ ಕಾರಣದಿಂದಲೇ ‘ಒಎಂಜಿ 2’ ಸಿನಿಮಾ ನೋಡಿರುವ ಸೆನ್ಸಾರ್ ಮಂಡಳಿ ಅವರು ಅದನ್ನು ರಿವೈಸಿಂಗ್ ಸಮಿತಿಗೆ ಕಳುಹಿಸಿದ್ದಾರೆ. ಸಿನಿಮಾ ರಿಲೀಸ್​ಗೆ ಇನ್ನು ಸುಮಾರು ಎರಡು ವಾರ ಇದೆ. ಆದಾಗ್ಯೂ ಸೆನ್ಸಾರ್ ಪ್ರಕ್ರಿಯೆ ಮುಗಿಯದೇ ಇರುವುದರಿಂದ ಸಿನಿಮಾ ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೆನ್ಸಾರ್ ಬೋರ್ಡ್ ಒಪ್ಪಿಗೆ ಕೊಟ್ಟಮೇಲೆ ಮುಗಿಯಿತು’; ‘ಆದಿಪುರುಷ್’ ಮೇಲಿದ್ದ ಬ್ಯಾನ್ ತೆರವು ಮಾಡಿದ ಕೋರ್ಟ್

ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕರೆ ಪ್ರಚಾರದ ವೇಳೆ ಆ ಬಗ್ಗೆ ಹೇಳಬಹುದು. ಆದರೆ, ಈ ಪ್ರಮಾsಣಪತ್ರ ಸಿಗದೆ ಪ್ರಚಾರಕ್ಕೆ ಇಳಿಯುವುದು ತಂಡಕ್ಕೆ ಕೊಂಚ ಹಿನ್ನಡೆ ಉಂಟು ಮಾಡುತ್ತದೆ. ಜುಲೈ 27ರಂದು ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿದೆ. ಅದು ಕೂಡ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:10 am, Tue, 25 July 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us