ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಈಗ ಮುಂಬೈನಲ್ಲಿದ್ದಾರೆ. ಇಷ್ಟು ದಿನ ಅವರು ಹೈದರಾಬಾದ್ನಲ್ಲಿ ಆರಾಮಾಗಿ ಇದ್ದರು. ಆದರೆ ಈಗ ಅವರಿಗೆ ಮುಂಬೈನಲ್ಲಿ ಕೆಲವು ವಿಚಾರಗಳು ಕಿರಿಕಿರಿ ಉಂಟು ಮಾಡುತ್ತಿವೆ. ಜೂನಿಯರ್ ಎನ್ಟಿಆರ್ ಅವರು ಖಾಸಗಿತನ ಬಯಸುತ್ತಾರೆ. ಸಾಧ್ಯವಾದಷ್ಟು ಅವರು ಮಾಧ್ಯಮಗಳ ಕಣ್ಣಿನಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಇಂಥ ಸ್ವಭಾವದ ಜೂನಿಯರ್ ಎನ್ಟಿಆರ್ಗೆ ಮುಂಬೈನ ಪಾಪರಾಜಿಗಳಿಂದ (Paparazzi) ತೊಂದರೆ ಆಗಿದೆ. ಹಾಗಾಗಿ ಅವರು ಕೋಪ ಮಾಡಿಕೊಂಡು ಕೂಗಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ (Viral Video) ಆಗಿದೆ.
ಮುಂಬೈನಲ್ಲಿ ಅನೇಕ ಪಾಪರಾಜಿಗಳು ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಹೋದಲ್ಲೆಲ್ಲ ಕ್ಯಾಮೆರಾ ಹಿಡಿದುಕೊಂಡು ಮುಗಿಬೀಳುವುದು ಈ ಪಾಪರಾಜಿಗಳ ಕೆಲಸ. ಕೆಲವು ಸೆಲೆಬ್ರಿಟಿಗಳು ಇದನ್ನು ಎಂಜಾಯ್ ಮಾಡುತ್ತಾರೆ. ಆದರೆ ಜೂನಿಯರ್ ಎನ್ಟಿಆರ್ ರೀತಿಯ ನಟರಿಗೆ ಇದರಿಂದ ಕಿರಿಕಿರಿ ಆಗುತ್ತದೆ. ‘ವಾರ್ 2’ ಸಿನಿಮಾದ ಶೂಟಿಂಗ್ ಸಲುವಾಗಿ ಮುಂಬೈಗೆ ಹೋಗಿರುವ ಜೂನಿಯರ್ ಎನ್ಟಿಆರ್ಗೆ ಪಾಪರಾಜಿಗಳ ವರ್ತನೆಯಿಂದ ಬೇಸರ ಆಗಿದೆ.
ಇದನ್ನೂ ಓದಿ: ‘ವಾರ್ 2’ ಸಿನಿಮಾ ಸೆಟ್ನಿಂದ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಫೋಟೋಸ್ ವೈರಲ್
ಜೂನಿಯರ್ ಎನ್ಟಿಆರ್ ಅವರು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ಹೋಟೆಲ್ ಪ್ರವೇಶಿಸುತ್ತಿದ್ದಾರೆ. ಅವರನ್ನು ಫಾಲೋ ಮಾಡಿಕೊಂಡು ಬಂದ ಪಾಪರಾಜಿಯೊಬ್ಬನು ಹೋಟೆಲ್ ಒಳಗೆ ಬರಲು ಪ್ರಯತ್ನಿಸಿದ್ದಾನೆ. ಅದನ್ನು ಕಂಡು ಜೂನಿಯರ್ ಎನ್ಟಿಆರ್ ಕೂಗಾಡಿದ್ದಾರೆ. ‘ಹೇ.. ನಿಲ್ಲಿಸು ಮ್ಯಾನ್’ ಎಂದು ಅವರು ಕೂಗಾಡಿದ್ದಾರೆ. ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿರುವುದು ಈ ವಿಡಿಯೋದಲ್ಲಿ ಕಾಣಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ವಾರ್ 2’ ಸಿನಿಮಾ ಮೂಲಕ ಜೂನಿಯರ್ ಎನ್ಟಿಆರ್ ಅವರು ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಗೆಲುವಿನ ಬಳಿಕ ಜೂನಿಯರ್ ಎನ್ಟಿಆರ್ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ತೆಲುಗಿನ ‘ದೇವರ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಆ ಚಿತ್ರದ ಮೇಲೆ ಕೂಡ ಭಾರಿ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.