Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟ್ಟಾಗಿ ಐಪಿಎಲ್ ಮ್ಯಾಚ್​ ವೀಕ್ಷಿಸಿದ​ ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ; ಗಮನ ಸೆಳದ ಜೋಡಿ

ಬುಧವಾರ (ಮೇ 3) ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆದಿದೆ. ಈ ಮ್ಯಾಚ್​ ವೀಕ್ಷಿಸಲು ಪರಿಣೀತಿ ಹಾಗೂ ರಾಘವ್ ಆಗಮಿಸಿದ್ದರು.

ಒಟ್ಟಾಗಿ ಐಪಿಎಲ್ ಮ್ಯಾಚ್​ ವೀಕ್ಷಿಸಿದ​ ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ; ಗಮನ ಸೆಳದ ಜೋಡಿ
ರಾಘವ್-ಪರಿಣೀತಿ
Follow us
ರಾಜೇಶ್ ದುಗ್ಗುಮನೆ
|

Updated on: May 04, 2023 | 10:45 AM

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Parineeti Chopra) ಹಾಗೂ ಆಪ್ ನಾಯಕ ರಾಘವ್ ಚಡ್ಡಾ ಸದ್ಯ ಸುದ್ದಿಯಲ್ಲಿದ್ದಾರೆ. ಇಬ್ಬರೂ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಇಬ್ಬರೂ ಒಟ್ಟಾಗಿ ಬಂದು ಐಪಿಎಲ್ (IPL 2023) ಮ್ಯಾಚ್ ವೀಕ್ಷಿಸಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜೋಡಿ ಕದ್ದುಮುಚ್ಚಿ ಓಡಾಡದೇ ಹೀಗೆ ಓಪನ್ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದ ಅನೇಕರು ಇವರು ಮದುವೆ ಆಗೋದು ಖಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಪ್ರೀತಿ ವಿಚಾರದಲ್ಲಿ ಸೆಲೆಬ್ರಿಟಿಗಳು ಓಪನ್ ಆಗಿ ಮಾತನಾಡುವುದು ಕಡಿಮೆ. ಇದನ್ನು ಅವರು ಎಲ್ಲಿಯೂ ಖಚಿತಪಡಿಸುವುದಿಲ್ಲ. ಪರಿಣೀತಿ ಕೂಡ ರಾಘವ್ ಜೊತೆಗಿನ ಪ್ರೀತಿ ವಿಚಾರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈ ಮೊದಲು ಕದ್ದುಮುಚ್ಚಿ ಭೇಟಿ ಮಾಡುತ್ತಿದ್ದ ಇವರು ಈಗ ಓಪನ್ ಆಗಿ ಸುತ್ತಾಟ ನಡೆಸುತ್ತಿದ್ದಾರೆ. ಇದು ಹಲವರಿಗೆ ಕುತೂಹಲ ತಂದಿದೆ.

ಬುಧವಾರ (ಮೇ 3) ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆದಿದೆ. ಈ ಮ್ಯಾಚ್​ ವೀಕ್ಷಿಸಲು ಪರಿಣೀತಿ ಹಾಗೂ ರಾಘವ್ ಆಗಮಿಸಿದ್ದರು. ಇಬ್ಬರೂ ಒಟ್ಟಾಗಿ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ಡ್ರೆಸ್ ವಿಚಾರದಲ್ಲಿ ಪರಿಣೀತಿ ಹಾಗೂ ರಾಘವ್ ಮ್ಯಾಚಿಂಗ್ ಮಾಡಿಕೊಂಡಿದ್ದರು. ಇಬ್ಬರೂ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ನಟಿಯರು ಸಾಕಷ್ಟು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ, ಪರಿಣೀತಿ ಸಿಂಪಲ್ ಲುಕ್​ನಲ್ಲಿ ಬಂದಿದ್ದರು.

ರಾಘವ್ ಹಾಗೂ ಪರಿಣೀತಿ ಮೇ 13ರಂದು ಎಂಗೇಜ್​ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರವನ್ನು ಯಾರೂ ಅಧಿಕೃತ ಮಾಡಿಲ್ಲ. ಇತ್ತೀಚೆಗೆ ಪರಿಣೀತಿ ಮುಂಬೈನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಪಾಪರಾಜಿಗಳು ಮುತ್ತಿಕೊಂಡರು. ಆಗ, ಪರೀಣೀತಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಆದರೆ, ಅವರಿಂದ ಯಾವುದೇ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ಗುಟ್ಟಾಗಿ ನಡೆಯಿತು ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಎಂಗೇಜ್​ಮೆಂಟ್​? ಅಕ್ಟೋಬರ್​ನಲ್ಲಿ ಮದುವೆ

ಸಿನಿಮಾ ವಿಚಾರಕ್ಕೆ ಬರೋದಾದರೆ ಪರಿಣೀತಿ ಚೋಪ್ರಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಊಂಚಾಯಿ’ ಚಿತ್ರದಲ್ಲಿ. ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೋಮನ್ ಇರಾನಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಇಮ್ತಿಯಾಜ್ ಅಲಿ ನಿರ್ದೇಶನದ ‘ಚಂಕಿಲಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ