Pathaan Controversy: ‘ಈ ವಿರೋಧ ಬಹಳ ಕ್ಷುಲ್ಲಕ’; ದೀಪಿಕಾ ಬಿಕಿನಿ ಬಣ್ಣದ ಕಿರಿಕ್​ ಬಗ್ಗೆ ನಟ ಚೇತನ್​ ಪ್ರತಿಕ್ರಿಯೆ

Aa Dinagalu Chetan: ‘ಪಠಾಣ್​’ ಚಿತ್ರದ ವಿವಾದದ ಬಗ್ಗೆ ನಟ ಚೇತನ್​ ಪ್ರತಿಕ್ರಿಯಿಸಿದ್ದಾರೆ. ‘ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ.

Pathaan Controversy: ‘ಈ ವಿರೋಧ ಬಹಳ ಕ್ಷುಲ್ಲಕ’; ದೀಪಿಕಾ ಬಿಕಿನಿ ಬಣ್ಣದ ಕಿರಿಕ್​ ಬಗ್ಗೆ ನಟ ಚೇತನ್​ ಪ್ರತಿಕ್ರಿಯೆ
ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಚೇತನ್
Edited By:

Updated on: Dec 16, 2022 | 1:36 PM

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾದ (Pathaan Movie) ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ‘ಬೇಷರಂ ರಂಗ್​..’ (Besharam Rang Song) ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಯಿತು. ಈ ಗೀತೆಯಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಒಂದು ವರ್ಗದ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಕುರಿತಂತೆ ನಟ ‘ಆ ದಿನಗಳು’ ಚೇತನ್​ (Aa Dinagalu Chetan) ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಈ ವಿರೋಧ ಕ್ಷುಲ್ಲಕವಾಗಿದೆ’ ಎಂದು ಹೇಳಿದ್ದಾರೆ. ಚೇತನ್​ ಅವರ ಹೇಳಿಕೆ ಬಗ್ಗೆ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪೋಸ್ಟ್​ ವೈರಲ್​ ಆಗುತ್ತಿದೆ.

ಸಮಾಜದ ಅನೇಕ ಆಗುಹೋಗುಗಳ ಬಗ್ಗೆ ಚೇತನ್​ ಅವರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದರಿಂದ ಅವರು ಅನೇಕ ಬಾರಿ ಟ್ರೋಲ್​ ಆಗಿದ್ದು ಕೂಡ ಉಂಟು. ಹಾಗಂತ ತಮ್ಮ ಅನಿಸಿಕೆ ತಿಳಿಸುವಲ್ಲಿ ಚೇತನ್​ ಎಂದಿಗೂ ಹಿಂದೇಟು ಹಾಕಿಲ್ಲ. ಈಗ ‘ಪಠಾಣ್​’ ಸಿನಿಮಾ ಬಗ್ಗೆ ಎದ್ದಿರುವ ವಿವಾದದ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಪಠಾಣ್​ ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು’ ಎಂದು ಚೇತನ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಇದನ್ನೂ ಓದಿ: Pathaan: ಬಾಯ್ಕಾಟ್​ ಎಂದವರಿಗೆ, ಕೇಸರಿ ಬಿಕಿನಿಗೂ ಕಿರಿಕ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾರುಖ್​ ಖಾನ್​

ಪರೋಕ್ಷವಾಗಿ ಪ್ರತಿಕ್ರಿಯಿಸಿದ ಶಾರುಖ್​ ಖಾನ್​:

ಗುರುವಾರ (ಡಿ.15) ಸಂಜೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿದೆ. ಈ ವೇದಿಕೆಯಲ್ಲಿ ಶಾರುಖ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ‘ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್​ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

ಜನವರಿ 25ರಂದು ‘ಪಠಾಣ್​’ ಬಿಡುಗಡೆ:

‘ಪಠಾಣ್​’ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. 2023ರ ಜನವರಿ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ವಿರೋಧದ ನಡುವೆಯೂ ‘ಬೇಷರಂ ರಂಗ್​..’ ಹಾಡು ಧೂಳೆಬ್ಬಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:36 pm, Fri, 16 December 22