ಕೆಲಸ ಇಲ್ಲ ಎಂದು ವಿವಾದ ಮಾಡಿಕೊಂಡಿದ್ದರು ಪೂನಂ ಪಾಂಡೆ; ಬದಲಾಗುತ್ತೇನೆ ಎಂದರೂ ಸಿನಿಮಾ ಸಿಗಲಿಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Feb 02, 2024 | 1:02 PM

ನಟಿ ಪೂನಂ ಪಾಂಡೆ ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡನಿಂದ ದೂರ ಆಗಿದ್ದರು. ಅವರು ಗಂಡನಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು. ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ವಿವಾದ ಮಾಡಿಕೊಂಡಿದ್ದರು. ಹೀಗೆ ಪೂನಂ ಪಾಂಡೆ ಅವರು ಮಾಡಿಕೊಂಡ ವಿವಾದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಅವರ ನಿಧನವಾರ್ತೆ ಬಂದಿದೆ.

ಕೆಲಸ ಇಲ್ಲ ಎಂದು ವಿವಾದ ಮಾಡಿಕೊಂಡಿದ್ದರು ಪೂನಂ ಪಾಂಡೆ; ಬದಲಾಗುತ್ತೇನೆ ಎಂದರೂ ಸಿನಿಮಾ ಸಿಗಲಿಲ್ಲ
ಪೂನಂ
Follow us on

ಅತಿ ಹೆಚ್ಚು ವಿವಾದ ಮಾಡಿಕೊಂಡ ನಟಿಯರ ಸಾಲಿನಲ್ಲಿ ಪೂನಂ ಪಾಂಡೆ (Poonam Pandey) ಕೂಡ ಒಬ್ಬರು. ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ವೃತ್ತಿಜೀವನದಲ್ಲಿ ಅವರು ಬೀಳುಗಳನ್ನು ಕಂಡಿದ್ದೇ ಹೆಚ್ಚು. ಈಗ ಅವರು ನಿಧನ ಹೊಂದಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಪೂನಂ ಪಾಂಡೆ ಕ್ಯಾನ್ಸರ್​ನಿಂದ ಮೃತಪಟ್ಟರು ಎಂದು ವರದಿ ಆಗಿದೆ. ಅವರಿಗೆ ಇನ್ನೂ 32 ವರ್ಷ ವಯಸ್ಸು. ಕೆಲಸ ಇಲ್ಲದ ಸಂದರ್ಭದಲ್ಲಿ ಅವರು ವಿವಾದ ಮಾಡಿಕೊಂಡಿದ್ದರು. ಈ ಬಗ್ಗೆ ಅವರೇ ಓಪನ್ ಆಗಿ ಹೇಳಿಕೊಂಡಿದ್ದರು.

ಪೂನಂ ಪಾಂಡೆ ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡನಿಂದ ದೂರ ಆದರು. ಅವರು ಗಂಡನಿಂದ ದೌರ್ಜನ್ಯಕ್ಕೆ ಒಳಗಾದರು. ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ವಿವಾದ ಮಾಡಿಕೊಂಡರು. ಹೀಗೆ ಪೂನಂ ಪಾಂಡೆ ಮಾಡಿಕೊಂಡ ವಿವಾದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು ಇದೆ. ಅವರು 2022ರಲ್ಲಿ ಕಂಗನಾ ರಣಾವತ್​ ನಡೆಸಿಕೊಟ್ಟಿದ್ದ ‘ಲಾಕಪ್’​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು.

‘ಲಾಕಪ್​’ ಶೋ 2022ರ ಫೆ.27ರಿಂದ ಆಲ್ಟ್​ ಬಾಲಾಜಿ ಮತ್ತು ಎಂಎಕ್ಸ್​ ಪ್ಲೇಯರ್​ ಮೂಲಕ ಪ್ರಸಾರ ಕಂಡಿದೆ. ವಿವಾದಾತ್ಮಕ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ನನ್ನನ್ನು ಜನರು ಕೇವಲ ವಿವಾದಗಳಿಂದ ಮಾತ್ರ ಜಡ್ಜ್​ ಮಾಡುತ್ತಾರೆ. ನನ್ನ ಬದುಕಿನಲ್ಲಿ ಏನೆಲ್ಲ ಆಗಿದೆ ಎಂಬುದು ಅವರಿಗೆ ತಿಳಿದಿಲ್ಲ’ ಎಂದು ಪೂನಂ ಪಾಂಡೆ ಹೇಳಿದ್ದರು.

‘ನನಗೆ ಕೆಲಸ ಇಲ್ಲದಾಗ ವಿವಾದ ಮಾಡಿಕೊಂಡಿದ್ದೆ. ಕೆಲಸ ಮಾಡಬೇಕು ಎಂದು ಬಯಸಿದವಳು ನಾನು. ಹಾಗೆ ಮಾಡಿದರೆ ಒಳ್ಳೆಯದಾಗುತ್ತದೆ, ಹೀಗೆ ಮಾಡಿದರೆ ಕೆಲಸ ಸಿಗುತ್ತದೆ ಎಂದು ಅನೇಕರು ಹೇಳಿದರು. ಅದೆಲ್ಲವನ್ನೂ ನಾನು ಮಾಡಿದ್ದೆ. ಆದರೆ, ಅದು ತಪ್ಪು ಅನ್ನೋದು ನನಗೆ ಅರಿವಾಗಿದೆ. ಒಳ್ಳೆಯ ಕೆಲಸ ಮಾಡಿ ಭೇಷ್ ಎನಿಸಿಕೊಳ್ಳುತ್ತೇನೆ’ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದರು. ಆದಾಗ್ಯೂ ಅವರಿಗೆ ಕೆಲಸ ಸಿಗಲೇ ಇಲ್ಲ.

ಇದನ್ನೂ ಓದಿ: 3 ದಿನದ ಹಿಂದೆ ಆರಾಮಾಗಿದ್ದ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ ಎಂದರೆ ನಂಬೋದು ಹೇಗೆ?

2013ರಲ್ಲಿ ಹಿಂದಿಯ ‘ನಶಾ’ ಚಿತ್ರದ ಮೂಲಕ ಪೂನಂ ಪಾಂಡೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ತನ್ನದೇ ವಿದ್ಯಾರ್ಥಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಶಿಕ್ಷಕಿ​ ಆಗಿ ಅವರು ಕಾಣಿಸಿಕೊಂಡಿದ್ದರು. ಅವರು ಸಿನಿಮಾದಲ್ಲಿ ಮಾಡಿರುವ ಬಹುತೇಕ ಪಾತ್ರಗಳು ಇದೇ ರೀತಿಯದ್ದೇ. ಈ ರೀತಿ ಪಾತ್ರಗಳನ್ನು ಮಾಡಿದ್ದಕ್ಕಾಗಿ ಜನರು ಸಹಜವಾಗಿಯೇ ಅವರನ್ನು ಜಡ್ಜ್ ಮಾಡುತ್ತಾರೆ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ.

ರಾಜ್ ಕುಂದ್ರಾ ಅವರಿಂದ ತಮಗೆ ಮೋಸ ಆಗಿದೆ ಎಂದು ಪೂನಂ ಪಾಂಡೆ ಆರೋಪಿಸಿದ್ದರು. ಅಶ್ಲೀಲ ಸಿನಿಮಾಗಳಲ್ಲೂ ಅವರು ನಟಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ