‘ಸ್ಪಿರಿಟ್’ ಕೆಲಸ ಬಿಟ್ಟು ‘ಧುರಂಧರ್ 2’ ನೋಡಲು ಬಂದ ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ

ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಸರದಿ. ಹೈದರಾಬಾದ್​ನಲ್ಲಿ ಅವರಿಬ್ಬರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಕೆಲಸಗಳ ನಡುವೆ ಅವರು ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ.

‘ಸ್ಪಿರಿಟ್’ ಕೆಲಸ ಬಿಟ್ಟು ‘ಧುರಂಧರ್ 2’ ನೋಡಲು ಬಂದ ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ
Ranveer Singh, Sandeep Reddy Vanga, Prabhas,

Updated on: Apr 09, 2026 | 3:05 PM

ಟಾಲಿವುಡ್‌ ನಟ ಪ್ರಭಾಸ್ (Prabhas) ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈಗ ‘ಸ್ಪಿರಿಟ್’ (Spirit) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾದ ಕೆಲಸಗಳ ನಡುವೆ ಸಣ್ಣ ವಿರಾಮ ಪಡೆದುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ವೀಕ್ಷಿಸಲು ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಅವರು ಥಿಯೇಟರ್‌ಗೆ ಭೇಟಿ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಅವರಿಬ್ಬರು ಜೊತೆಯಾಗಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹೈದರಾಬಾದ್‌ನ ಅಲ್ಲು ಸಿನಿಮಾಸ್‌ನಲ್ಲಿ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಸಿನಿಮಾ ವೀಕ್ಷಿಸಲು ಆಗಮಿಸಿದ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ. ಚಿತ್ರಮಂದಿರದ ಆಡಳಿತ ಮಂಡಳಿಯು ಪ್ರಭಾಸ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಪ್ರಭಾಸ್ ಸಿನಿಮಾ ನೋಡಿದ್ದರಿಂದ ‘ಧುರಂಧರ್ 2’ ಹೈಪ್ ಇನ್ನಷ್ಟು ಹೆಚ್ಚಾಗಿದೆ.

ಈ ಹಿಂದೆಯೇ ಸಂದೀಪ್ ರೆಡ್ಡಿ ವಂಗಾ ಅವರು ‘ಧುರಂಧರ್’ ಚಿತ್ರದ ಮೊದಲ ಭಾಗವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಮತ್ತು ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅವರ ನಟನೆಯನ್ನು ಕೊಂಡಾಡಿದ್ದರು. ‘ಧುರಂಧರ್ ಸಿನಿಮಾ ಹೆಚ್ಚು ಮಾತನಾಡದ, ಗಾಂಭೀರ್ಯವುಳ್ಳ ವ್ಯಕ್ತಿಯಂತೆ ನಿರ್ಮಾಣವಾಗಿದೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾ ತೀವ್ರತೆಯಿಂದ ಸಾಗುತ್ತದೆ’ ಎಂದು ಸಂದೀಪ್ ಅವರು ಎಕ್ಸ್‌ನಲ್ಲಿ (ಟ್ವಿಟರ್) ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಆದಿತ್ಯ ಧರ್, ‘ಸಂದೀಪ್, ನಿಮ್ಮಂತಹ ಧೈರ್ಯವಂತ ನಿರ್ದೇಶಕರಿಂದ ಇಂತಹ ಮಾತುಗಳು ಕೇಳಿಬರುವುದು ಹೆಮ್ಮೆಯ ವಿಷಯ. ಸಿನಿಮಾ ಯಾವಾಗಲೂ ಧೈರ್ಯಶಾಲಿಗಳನ್ನು ನೆನಪಿಟ್ಟುಕೊಳ್ಳುತ್ತದೆ’ ಎಂದು ಧನ್ಯವಾದ ಅರ್ಪಿಸಿದ್ದರು. ‘ಧುರಂಧರ್ 2’ ಸಿನಿಮಾ ನೋಡಿ ಅನೇಕ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ‘ಫೌಜಿ’ ಸೆಟ್​ನಿಂದ ಪ್ರಭಾಸ್ ಫೋಟೋ ಲೀಕ್: ಅಭಿಮಾನಿಗಳಿಗೆ ಚಿತ್ರತಂಡದ ವಾರ್ನಿಂಗ್

ಕಲೆಕ್ಷನ್ ವಿಚಾರದಲ್ಲಿ ‘ಧುರಂಧರ್ 2’ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರವು ಭಾರತದಲ್ಲಿ ಮಾಡಿದ್ದ ಒಟ್ಟು ಗಳಿಕೆಯನ್ನು (ಅಂದಾಜು 1,030 ಕೋಟಿ ರೂ.) ಈ ಸಿನಿಮಾ ಹಿಂದಿಕ್ಕಿದೆ. ವರದಿಗಳ ಪ್ರಕಾರ, ‘ಧುರಂಧರ್ 2’ ಇದುವರೆಗೆ ಬರೋಬ್ಬರಿ 1,041 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us