ಆಸ್ಪತ್ರೆಗೆ ಬಂದ ದೀಪಿಕಾ-ರಣ್ವೀರ್, ಮಗುವಿನ ಆಗಮನದ ನಿರೀಕ್ಷೆ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಸೆಪ್ಟೆಂಬರ್ 07) ಸಂಜೆ ವೇಳೆಗೆ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಹಾಗೂ ಇತರೆ ಕೆಲವು ಸಂಬಂಧಿಗಳು ಆಸ್ಪತ್ರೆಗೆ ಹೋಗಿದ್ದಾರೆ.

ಆಸ್ಪತ್ರೆಗೆ ಬಂದ ದೀಪಿಕಾ-ರಣ್ವೀರ್, ಮಗುವಿನ ಆಗಮನದ ನಿರೀಕ್ಷೆ
Follow us
ಮಂಜುನಾಥ ಸಿ.
|

Updated on: Sep 07, 2024 | 7:48 PM

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಇಂದು (ಸೆಪ್ಟೆಂಬರ್ 07) ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ರಣ್ವೀರ್ ಸಿಂಗ್ ಮತ್ತು ಇತರೆ ಕುಟುಂಬ ಸದಸ್ಯರೊಟ್ಟಿಗೆ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಇಂದು ಸಂಜೆ ವೇಳೆಗೆ ದೀಪಿಕಾ-ರಣ್ವೀರ್ ಅವರುಗಳು ದಕ್ಷಿಣ ಮುಂಬೈನ ಎಚ್​ಎನ್​ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಣ್ವೀರ್-ದೀಪಿಕಾ ಅವರುಗಳು ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗಿವೆ.

ಅಸಲಿಗೆ ದೀಪಿಕಾ ಪಡುಕೋಣೆಗೆ ಇದೇ ತಿಂಗಳ 28 ಕ್ಕೆ ಡೇಟ್ ನೀಡಲಾಗಿತ್ತು. ಅದೇ ದಿನ ದೀಪಿಕಾರ ಮಾಜಿ ಪ್ರಿಯಕರ ರಣ್​ಬೀರ್ ಕಪೂರ್ ಹುಟ್ಟುಹಬ್ಬವೂ ಸಹ ಇತ್ತು. ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇಂದು ಅಚಾನಕ್ಕಾಗಿ ದೀಪಿಕಾ ಹಾಗೂ ರಣ್​ವೀರ್ ಸಿಂಗ್ ಅವರುಗಳು ಆಸ್ಪತ್ರೆಗೆ ಬಂದಿರುವುದು ಗಮನಿಸಿದರೆ ಇನ್ನೂ ಶೀಘ್ರವಾಗಿ ಅಥವಾ ಇಂದೇ ದೀಪಿಕಾಗೆ ಮಗು ಆಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ

ಇಂದು (ಸೆಪ್ಟೆಂಬರ್ 07) ಬೆಳಿಗ್ಗೆಯಷ್ಟೆ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್ ಸಿಂಗ್ ಅವರುಗಳು ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿದ್ದರು. ಇಬ್ಬರೂ ಒಟ್ಟಿಗೆ ತೆರಳಿ ಗಣೇಶನ ದರ್ಶನ ಮಾಡಿ ಬಂದಿದ್ದರು. ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದರು. ಗಣೇಶನ ದರ್ಶನಕ್ಕೆ ಆಗಮಿಸಿದ್ದ ವೇಳೆ ದೀಪಿಕಾ ಆರಾಮವಾಗಿಯೇ ಇದ್ದರು, ಯಾವುದೇ ಬಳಲಿಕೆ ಇದ್ದಂತಿರಲಿಲ್ಲ. ಆದರೆ ಸಂಜೆ ವೇಳೆಗೆ ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು 2018ರ ನವೆಂಬರ್ 14 ರಂದು ಮದುವೆಯಾಗಿದ್ದರು. ಬಹಳ ವರ್ಷಗಳ ಬಳಿಕ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾರ ಹೆರಿಗೆ ಲಂಡನ್​ನಲ್ಲಿ ಆಗಲಿದೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಆದರೆ ಅದೆಲ್ಲ ಈಗ ಸುಳ್ಳಾಗಿದ್ದು, ದೀಪಿಕಾರ ಮೊದಲ ಮಗು ಮುಂಬೈನಲ್ಲಿಯೇ ಜನಿಸಲಿದೆ. ಆದಷ್ಟು ಬೇಗ ಸಿಹಿ ಸುದ್ದಿಯನ್ನು ದೀಪಿಕಾ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ