ದೊಡ್ಡ ಡಿಮ್ಯಾಂಡ್ ಇಟ್ಟಿದ್ದಕ್ಕೆ ಶಾರುಖ್ ಸಿನಿಮಾ ಆಫರ್ ಕಳೆದುಕೊಂಡಿದ್ದ ಕರೀನಾ
Kareena Kapoor: ಕರೀನಾ ಕಪೂರ್ ಬಾಲಿವುಡ್ನ ಜನಪ್ರಿಯ ನಟಿ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಆದರೆ ತಮ್ಮ ಅತಿಯಾದ ಅನವಶ್ಯಕ ಡಿಮ್ಯಾಂಡ್, ಅತಿಯಾದ ಸಂಭಾವನೆ ಬೇಡಿಕೆಗಳಿಂದ ಕೆಲವು ಸಿನಿಮಾಗಳನ್ನು ಕಳೆದುಕೊಂಡಿದ್ದಾರೆ ಸಹ.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಅವರಿಗೆ ಬ್ಯಾಕ್ ಟು ಬ್ಕ್ ಆಫರ್ಗಳು ಬರುತ್ತಿವೆ. ಅವರ ಸಿನಿಮಾಗಳು ಸದ್ದು ಮಾಡುತ್ತಿವೆ. ಕರೀನಾ ಕಪೂರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಈ ಮೊದಲು ರಿಲೀಸ್ ಆಗಿತ್ತು. ಆದರೆ, ಗೆಲ್ಲುವಲ್ಲಿ ವಿಫಲವಾಗಿದೆ. ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಕ್ರ್ಯೂ’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ.
ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಜೋಡಿಯು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಇದೀಗ ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಒಟ್ಟಾಗಿ ನಟಿಸಬೇಕಿದ್ದ ಸಿನಿಮಾ ಒಂದರ ಬಗ್ಗೆ ಸುದ್ದಿ ಒಂದು ಬಹಿರಂಗವಾಗಿದೆ. ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ‘ಕಲ್ ಹೋ ನ ಹೋ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಏಕೆಂದರೆ ಕರೀನಾ ಇಟ್ಟ ಬೇಡಿಕೆ ಇದಕ್ಕೆ ಕಾರಣ.
ಕರಣ್ ಜೋಹರ್ ಅವರು ಶಾರುಖ್ ಖಾನ್ ನಟನೆಯ ‘ಕಲ್ ಹೋ ನಾ ಹೋ’ ಚಿತ್ರಕ್ಕೆ ಕರೀನಾ ಕಪೂರ್ ಅವರನ್ನು ನಾಯಕಿಯಾಗಿ ಆ್ಯಯ್ಕೆ ಮಾಡಿದರು. ಆದರೆ, ಕರೀನಾ ಕಪೂರ್ ಚಿತ್ರಕ್ಕೆ ಶಾರುಖ್ ಖಾನ್ ಅವರಷ್ಟೇ ಶುಲ್ಕವನ್ನು ಕೇಳಿದ್ದರು. ಚಿತ್ರದಲ್ಲಿ ಇಬ್ಬರೂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಕಾರಣ, ಶಾರುಖ್ ಖಾನ್‌ಗೆ ಸಮಾನವಾದ ಶುಲ್ಕವನ್ನು ಅವರು ಬಯಸಿದ್ದರು. ಆದರೆ, ಚಿತ್ರದ ಕಡಿಮೆ ಬಜೆಟ್‌ನಿಂದಾಗಿ ಕರಣ್ ಜೋಹರ್ ಅವರು ಕರೀನಾಗೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಕರೀನಾ ಕಪೂರ್ ಧರಿಸಿರುವ ಈ ಕಪ್ಪು ಜಾಕೆಟ್ ಬೆಲೆ ಕೆಲವು ಲಕ್ಷ ರೂಪಾಯಿಗಳು
ಕರಣ್ ಜೋಹರ್ ಶಾರುಖ್ ಖಾನ್ ಜೊತೆಗೆ ನಟಿಸಲು ಪ್ರೀತಿ ಜಿಂಟಾ ಅವರನ್ನು ಆಯ್ಕೆ ಮಾಡಿದರು. ಇದಾದ ನಂತರ ಕರಣ್ ಜೋಹರ್ ಜೊತೆ ಕರೀನಾ ಕಪೂರ್ ಮನಸ್ತಾಪ ಮಾಡಿಕೊಂಡರು. ಒಂದು ವರ್ಷ ಕರಣ್ ಜೋಹರ್ ಜೊತೆ ಮಾತನಾಡಲಿಲ್ಲ. ‘ಕಲ್ ಹೋ ನ ಹೋ’ ಚಿತ್ರ 30 ಕೋಟಿಯಲ್ಲಿ ತಯಾರಾಗಿದ್ದು, ಚಿತ್ರ 86 ಕೋಟಿ ಗಳಿಸಿದೆ.
‘ಕಲ್ ಹೋ ನ ಹೋ’ ಚಿತ್ರ 2004ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಕರೀನಾ ಕಪೂರ್ ನೀಡಲು ಅಸಾಧ್ಯವಾದಷ್ಟು ಹಣವನ್ನು ಕೇಳಿದ್ದರು ಎಂದು ಕರಣ್ ಜೋಹರ್ ಬಹಿರಂಗಪಡಿಸಿದ್ದರು. ಈಗ ಕರಣ್ ಜೋಹರ್ ಮತ್ತು ಕರೀನಾ ಕಪೂರ್ ತುಂಬಾ ಒಳ್ಳೆಯ ಸ್ನೇಹಿತರು. ಕರಣ್ ಜೋಹರ್ ಈ ರೀತಿಯ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 8 September 24